ಭಾರತದ ಷೇರು ಮಾರುಕಟ್ಟೆಯು ಏಪ್ರಿಲ್ 5ರಂದು ಏರುಗತಿಯಲ್ಲಿ ಸಾಗಿದೆ. ಪ್ರಮುಖವಾಗಿ ಭಾರತದಲ್ಲಿನ ಹಣಕಾಸು ಸಂಬಂಧಿತ ಬೆಳವಣಿಗೆಗಳು ಹಾಗೂ ಜಾಗತಿಕ ಬೆಳವಣಿಗೆಗಳು ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಭೆಯು ಏಪ್ರಿಲ್ 3, 5, 6ರಂದು ನಡೆಯುತ್ತಿದ್ದು, 6ರಂದು ಬೆಳಿಗ್ಗೆ ಆರ್‌ಬಿಐ ರೆಪೋ ದರ ಪರಿಷ್ಕರಣೆ ಮಾಡುವ ಸೂಚನೆಯಿದೆ. ಈ ನಡುವೆ ಇಂದು ವಹಿವಾಟಿನ ಅಂತ್ಯದಲ್ಲಿ ಷೇರು ಪೇಟೆಯಲ್ಲಿ ಗೂಳಿಯಾಟ ಕಂಡು ಬಂದಿದೆ.
ಬುಧವಾರ ಆರಂಭಿಕ ವಹಿವಾಟಿನ ಸೆನ್ಸೆಕ್ಸ್ 98.75 ಪಾಯಿಂಟ್ ಅಥವಾ ಶೇ.0.17ರಷ್ಟು ಏರಿಕೆಯಾಗಿ, 59,205.19ಕ್ಕೆ ತಲುಪಿದೆ. ನಿಫ್ಟಿ 26.80 ಅಂಕ, ಶೇ.0.15ರಷ್ಟು ಹೆಚ್ಚಳವಾಗಿ 17,424.80ಕ್ಕೆ ತಲುಪಿದೆ. 1462 ಷೇರುಗಳು ಏರಿಕೆಯಾಗಿದ್ದರೆ, 640 ಷೇರುಗಳು ಇಳಿಕೆಯಾಗಿದೆ. 154 ಷೇರುಗಳು ಸ್ಥಿರವಾಗಿದೆ. ಬುಧವಾರ ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್ 582.87 ಪಾಯಿಂಟ್ ಅಥವಾ ಶೇ.0.99ರಷ್ಟು ಏರಿಕೆಯಾಗಿ, 59,689.31ಕ್ಕೆ ತಲುಪಿದೆ. ನಿಫ್ಟಿ 159.00 ಅಂಕ, ಶೇ.0.91ರಷ್ಟು ಹೆಚ್ಚಳವಾಗಿ 17,557ಕ್ಕೆ ತಲುಪಿದೆ. 2540 ಷೇರುಗಳು ಏರಿಕೆಯಾಗಿದ್ದರೆ, 911 ಷೇರುಗಳು ಇಳಿಕೆಯಾಗಿದೆ. 106 ಷೇರುಗಳು ಸ್ಥಿರವಾಗಿದೆ.

ಎಲ್‌ಟಿ, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಐಟಿಸಿ, ಸನ್‌ಫಾರ್ಮಾ, ಹಿಂದೂಸ್ತಾನ್ ಯೂನಿಲಿವರ್, ಟೈಟಾನ್, ಟಿಸಿಎಸ್, ಇನ್ಫೋಸಿಸ್, ಎಚ್‌ಸಿಎಲ್ ಟೆಕ್, ಏಷ್ಯನ್‌ಪೇಂಟ್ಸ್, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್ಸ್, ಅಲ್ಟ್ರಾಟೆಕ್ ಸಿಮೆಂಟ್, ಪವರ್ ಗ್ರಿಡ್, ವಿಪ್ರೋ, ಟಾಟಾ ಮೋಟರ್ಸ್, ಬಜಾಜ್ ಏರ್‌ಟೆಲ್, ಕೋಟಕ್ ಬ್ಯಾಂಕ್, ಟೆಕ್ ಎಂ ಸ್ಟಾಕ್‌ಗಳು ಏರಿಕೆಯಾಗಿದೆ. ಐಸಿಐಸಿಐ ಬ್ಯಾಂಕ್, ರಿಲಯನ್ಸ್, ಬಜಾಜ್ ಫಿನ್‌ಸರ್ವ್, ಆಕ್ಸಿಸ್ ಬ್ಯಾಂಕ್, ನೆಸ್ಲೆ ಇಂಡಿಯಾ, ಮಾರುತಿ, ಎಸ್‌ಬಿಐ ಇನ್ಶೂರೆನ್ಸ್, ಎನ್‌ಟಿಪಿಸಿ, ಇಂಡಸ್‌ಇಂಡ್ ಬ್ಯಾಂಕ್, ಎಂ&ಎಂ ಸ್ಟಾಕ್ ಇಳಿಕೆಯಾಗಿದೆ.
ನಿರಂತರವಾಗಿ ಕುಸಿಯುತ್ತಿರುವ ಅದಾನಿ ಸ್ಟಾಕ್ ಹೇಗಿದೆ?
ಈ ಸಮಯಕ್ಕೆ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 0.93ರಷ್ಟು ಇಳಿಕೆಯಾಗಿ 1,701.50 ರೂಪಾಯಿಗೆ ತಲುಪಿದೆ. ಅದಾನಿ ವಿಲ್ಮಾರ್ ಸ್ಟಾಕ್ ಶೇಕಡ 0.57ರಷ್ಟು ಹೆಚ್ಚಳವಾಗಿ, 397.95 ರೂಪಾಯಿಗೆ ತಲುಪಿದೆ. ಅದಾನಿ ಪೋರ್ಟ್ಸ್ ಶೇಕಡ 1.30ರಷ್ಟು ಕುಸಿದು, 635.95 ರೂಪಾಯಿಗೆ ತಲುಪಿದೆ. ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 1.44ರಷ್ಟು ಏರಿಕೆಯಾಗಿದ್ದು, 380.20 ರೂಪಾಯಿಗೆ ತಲುಪಿದೆ.
ಎಸಿಸಿ ಶೇಕಡ 1.11ರಷ್ಟು ಇಳಿದು, 1,690.00 ರೂಪಾಯಿಗೆ ತಲುಪಿದೆ. ಅದಾನಿ ಟ್ರಾನ್ಸ್‌ಮಿಷನ್ ಶೇಕಡ 1.90ರಷ್ಟು ಕುಸಿದು, 925.50 ರೂಪಾಯಿಗೆ ತಲುಪಿದೆ. ಅದಾನಿ ಟೋಟಲ್ ಗ್ಯಾಸ್ ಶೇ.2.29ರಷ್ಟು ಇಳಿಕೆಯಾಗಿ 826.00 ರೂಪಾಯಿ ಆಗಿದೆ. ಅದಾನಿ ಗ್ರೀನ್ ಎನರ್ಜಿ ಶೇ.1.44ರಷ್ಟು ಕುಸಿದು, 825.40ಕ್ಕೆ ತಲುಪಿದೆ. ಎನ್‌ಡಿಟಿವಿ ಶೇಕಡ 0.75ರಷ್ಟು ಇಳಿಕೆಯಾಗಿ 184.80 ರೂಪಾಯಿಗೆ ಮತ್ತು ಅದಾನಿ ಪವರ್ ಶೇಕಡ 0.31ರಷ್ಟು ಕುಸಿದು 189.95 ರೂಪಾಯಿಗೆ ತಲುಪಿದೆ.
ಯಾವುದೇ ಟಾಪ್ ಗೇನರ್, ಯಾವುದು ಲೂಸರ್?
ಪ್ರಸ್ತುತ ಷೇರುಪೇಟೆಯ ಚಿತ್ತ ಆರ್‌ಬಿಐ ಸಭೆಯ ಮೇಲಿದೆ. ನಾಳೆ ಅಂದರೆ ಏಪ್ರಿಲ್ 6ರಂದು ಆರ್‌ಬಿಐ ರೆಪೋ ದರವನ್ನು ಪರಿಷ್ಕರಣೆ ಮಾಡುವ ಸಾಧ್ಯತೆಯಿದೆ. ಈ ನಡುವೆ ಅದಕ್ಕು ಮುಂದಿನ ದಿನ ಏಪ್ರಿಲ್ 5ರಂದು ವಹಿವಾಟಿನ ಅಂತ್ಯದಲ್ಲಿ ಷೇರುಪೇಟೆಯು ಲಾಭದೊಂದಿಗೆ ವಹಿವಾಟು ನಿಲ್ಲಿಸಿದೆ. ಲಾರ್ಸೆನ್ ಟಾಪ್ ಗೇನರ್ ಆಗಿದ್ದು, ಸ್ಟಾಕ್ ಶೇಕಡ 4.04ರಷ್ಟು ಏರಿಕೆಯಾಗಿ 2,257.75 ರೂಪಾಯಿಗೆ ತಲುಪಿದೆ.
ಇನ್ನು ಈಚರ್ ಮೋಟರ್ಸ್ ಭಾರೀ ನಷ್ಟವನ್ನು ಕಂಡಿದೆ. ಸ್ಟಾಕ್ ಶೇಕಡ 2.35ರಷ್ಟು ಕುಸಿದು 2,933.75 ರೂಪಾಯಿಗೆ ತಲುಪಿದೆ. ನಿಫ್ಟಿ ಎಫ್‌ಎಂಸಿಜಿ ಶೇಕಡ 1.36ರಷ್ಟು ಏರಿಕೆಯಾಗಿ, 46361.30 ರೂಪಾಯಿಗೆ ತಲುಪುವ ಮೂಲಕ ಬೆಸ್ಟ್ ಸೆಕ್ಟರ್ ಎನಿಸಿಕೊಂಡಿದೆ. ನಿಫ್ಟಿ ಪಿಎಸ್‌ಯು ಬ್ಯಾಂಕ್ ಶೇಕಡ 0.79ರಷ್ಟು ಕುಸಿದು 3725.70ಕ್ಕೆ ತಲುಪಿದೆ. ಅತೀ ಕೆಟ್ಟ ವಹಿವಾಟು ನಡೆಸಿದ ಸ್ಟಾಕ್ ಇದಾಗಿದೆ.


Click it and Unblock the Notifications