ಷೇರು ಮಾರುಕಟ್ಟೆಯಲ್ಲಿ ಲಾಭವು ಮುಂದುವರಿದಿದೆ. ಕಳೆದ ವಾರ ಭಾರೀ ನಷ್ಟವನ್ನು ಕಂಡಿದ್ದ ಷೇರು ಮಾರುಕಟ್ಟೆ ಸೋಮವಾರ ಚೇತರಿಕೆ ಕಂಡಿದೆ. ಈಗ ಮಂಗಳವಾರ ವಹಿವಾಟಿನ ಅಂತ್ಯದಲ್ಲಿಯೂ ಷೇರು ಮಾರುಕಟ್ಟೆಯಲ್ಲಿ ಲಾಭ ಕಂಡಿದೆ.
ಏಷ್ಯನ್ ಸ್ಟಾಕ್ ಮತ್ತು ವಾಲ್‌ಸ್ಟ್ರೀಸ್ ಏರಿಕೆ ಕಂಡಿದೆ. ಯುಎಸ್ ಮಾರುಕಟ್ಟೆ ಸೋಮವಾರ ವಹಿವಾಟು ನಡೆಸಿಲ್ಲ. ಇಂದು ಉತ್ತಮ ವಹಿವಾಟು ನಡೆಸುವ ಸಾಧ್ಯತೆ ಇದೆ. ಈ ನಡುವೆ ಭಾರತದಲ್ಲಿ ಷೇರು ಮಾರುಕಟ್ಟೆ ಜಿಗಿತ ಕಂಡಿದೆ. ಹಣದುಬ್ಬರ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರ ಏರಿಕೆ ಮಾಡಿದೆ. ಈ ಹಿನ್ನೆಲೆಯಿಂದಾಗಿ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ ಬಳಿಕ ಚೇತರಿಕೆ ಕಂಡಿದೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 934 ಅಂಕ ಅಥವಾ ಶೇಕಡ 1.81ರಷ್ಟು ಏರಿಕೆ ಕಂಡು 52,532ಕ್ಕೆ ವಹಿವಾಟು ಅಂತ್ಯ ಮಾಡಿದೆ. ಎನ್‌ಎಸ್‌ಇ ನಿಫ್ಟಿ 289 ಅಂಕ ಅಥವಾ ಶೇಕಡ 1.88ರಷ್ಟು ಏರಿಕೆ ಕಂಡು 15,639ಕ್ಕೆ ವಹಿವಾಟು ಅಂತ್ಯ ಮಾಡಿದೆ.

ಮಿಡ್ ಹಾಗೂ ಸ್ಮಾಲ್ ಕ್ಯಾಪ್ ಕೂಡಾ ಏರಿಳಿತ ಕಂಡಿದೆ. ಮಿಡ್ ಕ್ಯಾಪ್ ಶೇಕಡ 3.56 ಕುಸಿದರೆ, ಸ್ಮಾಲ್ ಕ್ಯಾಪ್ ಶೇಕಡ 3.56ರಷ್ಟು ಏರಿದೆ. ನಿಫ್ಟಿ ಆಯಿಲ್ & ಗ್ಯಾಸ್, ನಿಫ್ಟಿ ಕನ್ಸ್ಯೂಮರ್ ಡ್ಯೂರೆಬಲ್, ನಿಫ್ಟಿ ಐಟಿ, ನಿಫ್ಟಿ ಮೆಟಲ್ ಕ್ರಮವಾಗಿ ಶೇಕಡ 4.83, ಶೇಕಡ 3.39, ಶೇಕಡ 3.13, ಶೇಕಡ 3.97 ಏರಿಕೆಯಾಗಿದೆ.
ಟೈಟಾಲ್ ಟಾಪ್ ನಿಫ್ಟಿ ಗೇನರ್
ಟೈಟಾನ್ ನಿಫ್ಟಿ ಟಾಪ್ ಗೇನರ್ ಆಗಿದೆ. ಶೇಕಡ 6.03 ಏರಿಕೆಯಾಗಿ ರೂಪಾಯಿ 2,079.95ಕ್ಕೆ ಸ್ಥಿರವಾಗಿದೆ. ಹಿಂದಾಲ್ಕೋ, ಕೋಲ್ ಇಂಡಿಯಾ, ಜೆಎಸ್‌ಡಬ್ಯ್ಯೂ, ಟಾಟಾ ಮೋಟರ್ಸ್ ಕೂಡಾ ಲಾಭವನ್ನು ಕಂಡಿದೆ.
2,497 ಷೇರುಗಳು ಲಾಭವನ್ನು ಕಂಡಿದ್ದರೆ, 837 ಷೇರುಗಳು ನಷ್ಟವನ್ನು ಅನುಭವಿಸಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ ಟೈಟಾನ್, ಎಸ್‌ಬಿಐ, ಟಿಸಿಎಸ್, ಎಚ್‌ಸಿಎಲ್ ಟೆಕ್, ಡಾ. ರೆಡ್ಡೀಸ್, ಟಾಟಾ ಸ್ಟೀಲ್ಸ್, ವಿಪ್ರೋ, ಇನ್ಫೋಸಿಸ್, ಐಟಿಸಿ, ಟೆಕ್ ಮಹೀಂದ್ರಾ, ಎಲ್&ಟಿ, ಎನ್‌ಟಿಪಿಸಿ ಭಾರೀ ಲಾಭವನ್ನು ಕಂಡಿದೆ.
ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಭಾರತದ ಅತೀ ದೊಡ್ಡ ವಿಮಾ ಸಂಸಸ್ಥೆ ಶೇಕಡ 0.61ರಷ್ಟು ಏರಿಕೆ ಕಂಡು ರೂಪಾಯಿ 665.30ಕ್ಕೆ ತಲುಪಿದೆ. ಆದರೆ ಮೂಲ ಬೆಲೆಗಿಂತ ಭಾರೀ ಕೆಳಕ್ಕೆ ತಳ್ಳಲ್ಪಟ್ಟಿದೆ. ಈ ನಡುವೆ ನೆಸ್ಲೆ ಇಂಡಿಯಾ ನಷ್ಟದೊಂದಿಗೆ ವಹಿವಾಟು ಅಂತ್ಯ ಮಾಡಿದೆ.


Click it and Unblock the Notifications