ಬುಧವಾರ ಸ್ಟಾಕ್ ಮಾರುಕಟ್ಟೆಯು ನಷ್ಟದೊಂದಿಗೆ ವಹಿವಾಟು ಆರಂಭ ಮಾಡಿದೆ. ವಹಿವಾಟಿನ ಅಂತ್ಯದಲ್ಲಿಯೂ ನಷ್ಟ ಕಂಡು ಬಂದಿದೆ. ಸೋಮವಾರ ಸನಾಲ್ಕನೇ ತ್ರೈಮಾಸಿಕದ ನಿವ್ವಳ ಆದಾಯವನ್ನು ಇನ್ಫೋಸಿಸ್ ಘೋಷಣೆ ಮಾಡಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಭಾರೀ ನಷ್ಟವನ್ನು ಕಂಡಿದೆ. ಆದರೆ ನಿನ್ನೆ ಮಾತ್ರ ಏರಿಕೆ ಕಂಡಿತ್ತು. ಆದರೆ ಬುಧವಾರ ಮತ್ತೆ ಶೇಕಡ 2.26ರಷ್ಟು ನಷ್ಟವನ್ನು ಕಂಡಿದೆ.
ಏಪ್ರಿಲ್ 19ರಂದು ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 79.57 ಪಾಯಿಂಟ್ ಅಥವಾ ಶೇ.0.13ರಷ್ಟು ಇಳಿಕೆಯಾಗಿ, 59,647.44ಕ್ಕೆ ತಲುಪಿದೆ. ಆದರೆ ನಿಫ್ಟಿ ಲಾಭದೊಂದಿಗೆ ವಹಿವಾಟು ಆರಂಭ ಮಾಡಿದೆ. ನಿಫ್ಟಿ 21.70 ಅಂಕ, ಶೇ.0.12ರಷ್ಟು ಇಳಿಕೆಯಾಗಿ 17,638.50ಕ್ಕೆ ತಲುಪಿದೆ. 1,168 ಷೇರುಗಳು ಏರಿಕೆಯಾಗಿದ್ದರೆ, 659 ಷೇರುಗಳು ಇಳಿಕೆಯಾಗಿದೆ. 114 ಷೇರುಗಳು ಸ್ಥಿರವಾಗಿದೆ. ಟಾಟಾ ಸ್ಟೀಲ್ಸ್, ಅದಾನಿ ಎಂಟರ್‌ಪ್ರೈಸಸ್, ಈಚರ್ ಮೋಟರ್ಸ್, ಎಲ್&ಟಿ, ಎಂ&ಎಂ ಸ್ಟಾಕ್‌ಗಳು ಏರಿಕೆಯಾಗಿದೆ.

ಬುಧವಾರ, ಏಪ್ರಿಲ್ 19ರಂದು ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 159.21 ಪಾಯಿಂಟ್ ಅಥವಾ ಶೇ.0.27ರಷ್ಟು ಇಳಿಕೆಯಾಗಿ, 59,567.80ಕ್ಕೆ ತಲುಪಿದೆ. ನಿಫ್ಟಿ 41.40 ಅಂಕ, ಶೇ.0.23ರಷ್ಟು ಇಳಿಕೆಯಾಗಿ 17,618.80ಕ್ಕೆ ತಲುಪಿದೆ. 1,768 ಷೇರುಗಳು ಏರಿಕೆಯಾಗಿದ್ದರೆ, 1,650 ಷೇರುಗಳು ಇಳಿಕೆಯಾಗಿದೆ. 117 ಷೇರುಗಳು ಸ್ಥಿರವಾಗಿದೆ. ಪ್ರಮುಖವಾಗಿ ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ಇಂಡಸ್‌ಇಂಡ್ ಬ್ಯಾಂಕ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ವಿಪ್ರೋ ಸ್ಟಾಕ್ ಭಾರೀ ನಷ್ಟವನ್ನು ಕಂಡ ಸ್ಟಾಕ್‌ಗಳು ಆಗಿದೆ.
ಸೆನ್ಸೆಕ್ಸ್ ಟಾಪ್ ಗೇನರ್
ಭಾರ್ತಿ ಏರ್‌ಟೆಲ್: ಶೇಕಡ 0.96
ಎಂ&ಎಂ: ಶೇಕಡ 0.88
ಆಕ್ಸಿಸ್ ಬ್ಯಾಂಕ್: ಶೇಕಡ 0.80
ಎಚ್‌ಡಿಎಫ್‌ಸಿ: ಶೇಕಡ 0.71
ಎಚ್‌ಡಿಎಫ್‌ಸಿ ಬ್ಯಾಂಕ್: ಶೇಕಡ 0.65
ಬಜಾಜ್ ಫೈನಾನ್ಸ್: ಶೇಕಡ 0.48
ಸೆನ್ಸೆಕ್ಸ್ ಟಾಪ್ ಲೂಸರ್
ಎಚ್‌ಸಿಎಲ್ ಟೆಕ್: ಶೇಕಡ -2.40
ಇಂಡಸ್‌ಇಂಡ್ ಬ್ಯಾಂಕ್: ಶೇಕಡ -2.35
ಇನ್ಫೋಸಿಸ್: ಶೇಕಡ -2.28
ವಿಪ್ರೋ: ಶೇಕಡ -1.80
ಎನ್‌ಟಿಪಿಸಿ: ಶೇಕಡ -1.71
ಏಷ್ಯನ್ ಪೇಂಟ್ಸ್: ಶೇಕಡ -1.70
ನಿಫ್ಟಿ ಟಾಪ್ ಗೇನರ್
ಬಿಪಿಸಿಎಲ್: ಶೇಕಡ 2.39
ದಿವೀಸ್ ಲ್ಯಾಬ್ಸ್: ಶೇಕಡ 1.96
ಬಜಾಜ್ ಆಟೋ: ಶೇಕಡ 1.32
ಆಕ್ಸಿಸ್ ಬ್ಯಾಂಕ್: ಶೇಕಡ 1.00
ಎಂ&ಎಂ: ಶೇಕಡ 0.89
ನಿಫ್ಟಿ ಟಾಪ್ ಲೂಸರ್
ಎಚ್‌ಸಿಎಲ್ ಟೆಕ್: ಶೇಕಡ -2.48
ಇಂಡಸ್‌ಇಂಡ್ ಬ್ಯಾಂಕ್ : ಶೇಕಡ --2.45
ಇನ್ಫೋಸಿಸ್: ಶೇಕಡ -2.26
ಎಸ್‌ಬಿಐ ಲೈಫ್: ಶೇಕಡ -1.96
ವಿಪ್ರೋ: ಶೇಕಡ -1.81
ಏಷ್ಯನ್ ಪೇಂಟ್ಸ್: ಶೇಕಡ -1.53
ಏಪ್ರಿಲ್ 18ರಂದು ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 183.74 ಪಾಯಿಂಟ್ ಅಥವಾ ಶೇ.0.31ರಷ್ಟು ಇಳಿಕೆಯಾಗಿ, 59,727.01ಕ್ಕೆ ತಲುಪಿದೆ. ನಿಫ್ಟಿ 46.60 ಅಂಕ, ಶೇ.0.26ರಷ್ಟು ಇಳಿಕೆಯಾಗಿ 17,660.20ಕ್ಕೆ ತಲುಪಿದೆ. 1,841 ಷೇರುಗಳು ಏರಿಕೆಯಾಗಿದ್ದರೆ, 1,602 ಷೇರುಗಳು ಇಳಿಕೆಯಾಗಿದೆ. 115 ಷೇರುಗಳು ಸ್ಥಿರವಾಗಿದೆ.
ನಿನ್ನೆ ವಹಿವಾಟಿನನ ಅಂತ್ಯದಲ್ಲಿ ಪ್ರಮುಖವಾಗಿ ಪವರ್ ಗ್ರಿಡ್ ಕಾರ್ಪೋರೇಷನ್, ಅಲ್ಟ್ರಾಟೆಕ್ ಸಿಮೆಂಟ್, ಅದಾನಿ ಎಂಟರ್‌ಪ್ರೈಸಸ್, ರಿಲಯನ್ಸ್ ಇಂಡಸ್ಟ್ರೀಸ್, ಅಪೊಲೋ ಹಾಸ್ಪಿಟಲ್ ಸ್ಟಾಕ್ ಇಳಿಕೆಯಾಗಿದೆ. ಆದರೆ ಇನ್ಫೋಸಿಸ್ ಸ್ಟಾಕ್ ಮಾತ್ರ ಏರಿಕೆಯಾಗಿದೆ. ಸ್ಟಾಕ್ ಮಾರುಕಟ್ಟೆಯು ಈ ವಾರದಲ್ಲಿ ಸತತ ಮೂರು ದಿನಗಳಿಂದ ನಷ್ಟದೊಂದಿಗೆ ಸಾಗುತ್ತಿದೆ.


Click it and Unblock the Notifications