ಭಾರತೀಯ ಐಟಿ ವಲಯದ ಸಂಸ್ಥೆಯಾದ ಕೋಫೋರ್ಜ್ ಲಿಮಿಟೆಡ್ ತನ್ನ ಉದ್ಯೋಗಿಗಳಿಗೆ ಗಿಫ್ಟ್ ನೀಡಲು ಮುಂದಾಗಿದೆ. ಅದು ಕೂಡಾ 21 ಸಾವಿರ ಉದ್ಯೋಗಿಗಳಿಗೆ ಆಪಲ್ ಐಪ್ಯಾಡ್ ಅನ್ನು ಉಡುಗೊರೆಯಾಗಿ ನೀಡಲು ಸಂಸ್ಥೆಯು ಸಜ್ಜಾಗಿದೆ. ಪ್ರಸ್ತುತ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತಿದೆ. ಈ ನಡುವೆ ಭಾರತದ ಐಟಿ ಸಂಸ್ಥೆ ಉದ್ಯೋಗಿಗಳಿಗೆ ಗಿಫ್ಟ್ ನೀಡುವ ಘೋಷಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಆರ್ಥಿಕ ಬೆಳವಣಿಗೆಯೇ ಸಂಸ್ಥೆಯ ಈ ನಿರ್ಧಾರಕ್ಕೆ ಕಾರಣವಾಗಿದೆ. ಸಂಸ್ಥೆಯ ಹಣಕಾಸು ಸ್ಥಿತಿ ಅತ್ಯುತ್ತಮವಾಗಿದೆ ಎಂಬ ಕಾರಣಕ್ಕೆ ಈ ಸಂಸ್ಥೆಯು ತನ್ನ ಎಲ್ಲ ಉದ್ಯೋಗಿಗಳಿಗೆ ಆಪಲ್ ಐಪ್ಯಾಡ್ ನೀಡಲು ಮುಂದಾಗಿದೆ. ಏಪ್ರಿಲ್ 27ರ ಗುರುವಾರದಂದು ಹಣಕಾಸು ವರ್ಷ 2022-23ರ ನಾಲ್ಕನೇ ತ್ರೈಮಾಸಿಕದ ವರದಿಯನ್ನು ಸಂಸ್ಥೆಯು ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಗಿಫ್ಟ್ ಘೋಷಿಸಲಾಗಿದೆ.

ಸಂಸ್ಥೆಯ ಆದಾಯವು ಬಿಲಿಯನ್ ಡಾಲರ್ ಅನ್ನು ದಾಟಿದೆ. ಇದು ಸಂಸ್ಥೆಗೆ ಅತೀ ದೊಡ್ಡ ಸಾಧನೆಯಾಗಿದೆ ಎಂದು ನಾಲ್ಕನೇ ತ್ರೈಮಾಸಿಕ ವರದಿಯಲ್ಲಿ ಕೋಫೋರ್ಜ್ ಲಿಮಿಟೆಡ್ ಹೇಳಿಕೊಂಡಿದೆ. ಈ ಮೈಲಿಗಲ್ಲನ್ನು ತಮ್ಮ ಉದ್ಯೋಗಿಗಳೊಂದಿಗೆ ಸಂಭ್ರಮಿಸಲು ಕೋಪೋರ್ಜ್ ಮುಂದಾಗಿದೆ. ತನ್ನ ಎಲ್ಲ 21 ಸಾವಿರ ಉದ್ಯೋಗಿಗಳಿಗೆ ಆಪಲ್ ಐಪ್ಯಾಡ್ ಅನ್ನು ನೀಡಲು ಸಜ್ಜಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಸಿಇಒ ಸುಧಿರ್ ಸಿಂಗ್, "ಕಳೆದ ತ್ರೈಮಾಸಿಕದಲ್ಲಿ ಸಂಸ್ಥೆಯು ಪ್ರಮುಖವಾದ ಎರಡು ಸಾಧನೆಗಳನ್ನು ಮಾಡಿದೆ. ಮೊದಲನೆಯದಾಗಿ, ಡಾಲರ್ ಆಧಾರದಲ್ಲಿ ನೋಡಿದಾಗ ಸಂಸ್ಥೆಯು ಶೇಕಡ 5ರಷ್ಟು ಬೆಳವಣಿಗೆ ಕಂಡಿದೆ. ಎರಡನೇಯದಾಗಿ ಸಂಸ್ಥೆಯು ಬಿಲಿಯನ್ ಡಾಲರ್ ಆದಾಯವನ್ನು ಗಳಿಸಿದೆ," ಎಂದು ಹೇಳಿದ್ದು, ಹಣಕಾಸು ವರ್ಷ 2023-24ರಲ್ಲೂ ಸಂಸ್ಥೆ ಇದಕ್ಕಿಂತ ಉತ್ತಮ ಬೆಳವಣಿಗೆ ಕಾಣಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಉದ್ಯೋಗಿಗಳ ಇತರೆ ಪ್ರೋತ್ಸಾಹ ಧನಗಳಿಗಾಗಿ ಸಂಸ್ಥೆಯು 46.50 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಆದರೆ ತನ್ನ ಉದ್ಯೋಗಿಗಳಿಗೆ ನೀಡುವ ವಿಚಾರಕ್ಕೆ ಬಂದಾಗ ಸಂಸ್ಥೆಯು ಗಿಫ್ಟ್ ನೀಡುವುದನ್ನು ಯೋಗ್ಯ ವೆಚ್ಚ ಎಂದು ಸಂಸ್ಥೆ ನಂಬುತ್ತದೆ ಎಂದು ಕೂಡಾ ತಿಳಿಸಿದ್ದಾರೆ.
ಮಿಡ್-ಕ್ಯಾಪ್ ಐಟಿ ಕಂಪನಿಗಳಲ್ಲಿ ಕೋಫೋರ್ಜ್ ಪ್ರಮುಖ ಸಂಸ್ಥೆಯಾಗಿದೆ. ಮೂರು ವರ್ಷಗಳಲ್ಲಿ ಶೇಕಡ 260 ರಷ್ಟು ಮಲ್ಟಿಬ್ಯಾಗರ್ ರಿಟರ್ನ್ ಅನ್ನು ನೀಡಿರುವ ಷೇರು ಇದಾಗಿದೆ. ಅದರ ಷೇರು ಗುರುವಾರ 2051ಕ್ಕೆ ವಹಿವಾಟು ಅಂತ್ಯ ಮಾಡಿದೆ. ಶೇಕಡ 2.73ರಷ್ಟು ಲಾಭವನ್ನು ಹೊಂದಿದೆ. ಆದರೆ ಕಳೆದ ವರ್ಷ ಅನೇಕ ಐಟಿ ವಲಯದ ಕಂಪನಿಗಳಿಗೆ ಹೋಲಿಸಿದಾಗ ಕೋಫೋರ್ಜ್ ಷೇರುಗಳು ಕಳಪೆ ಪ್ರದರ್ಶನವನ್ನು ತೋರಿದೆ.
ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದ ನಂತರ ತನ್ನ ಉದ್ಯೋಗಿಗಳಿಗೆ ಆಪಲ್ ಐಪ್ಯಾಡ್ ಅನ್ನು ಉಡುಗೊರೆಯಾಗಿ ನೀಡುವ ನಿರ್ಧಾರವನ್ನು ಕೋಫೋರ್ಜ್ ಮಾಡಿದೆ. ಇದು ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಮನೋಭಾವದಿಂದ ಕಾರ್ಯ ನಿರ್ವಹಣೆ ಮಾಡಿದವರಿಗೆ ಉತ್ತಮ ಪ್ರತಿಫಲವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಹಲವಾರು ಸಂಸ್ಥೆಗಳಲ್ಲಿ ಉದ್ಯೋಗ ಕಡಿತ
ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಮೆಟಾ, ಅಮೆಜಾನ್ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಪ್ರಸ್ತುತ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಕೆಲವು ಸಂಸ್ಥೆಗಳಂತು ಪ್ರಸ್ತುತ ಎರಡು- ಮೂರನೇ ಹಂತದ ಉದ್ಯೋಗ ಕಡಿತ ಪ್ರಕ್ರಿಯೆಯಲ್ಲಿ ವ್ಯಸ್ಥವಾಗಿದೆ. ಇನ್ನು ಪ್ರಮುಖವಾಗಿ ಐಟಿ ಸಂಸ್ಥೆಗಳಲ್ಲಿ ಆರಂಭವಾದ ಈ ಉದ್ಯೋಗ ಕಡಿತವು ಬೇರೆ ಬೇರೆ ವಲಯಗಳಲ್ಲೂ ಆರಂಭವಾಗಿದೆ.
ಈಗಾಗಲೇ ಆಹಾರ ಡೆಲಿವರಿ ನೀಡುವ ಸಂಸ್ಥೆಗಳು, ಮನರಂಜನಾ ಪ್ಲಾಟ್‌ಫಾರ್ಮ್‌ಗಳು ಉದ್ಯೋಗ ಕಡಿತ ಘೋಷಿಸಿದೆ. ಈ ನಡುವೆ ಕೋಫೋರ್ಜ್ ಲಿಮಿಟೆಡ್ ಉದ್ಯೋಗಿಗಳಿಗೆ ಆಪಲ್ ಐಪ್ಯಾಡ್ ಗಿಫ್ಟ್ ನೀಡಲಾಗುವುದು ಎಂಬ ಘೋಷಣೆಯನ್ನು ಮಾಡಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications