ಕರ್ನಾಟಕ (Karnataka) ಸೇರಿ ದೇಶದ ಬಹುತೇಕ ಪ್ರದೇಶಗಳಲ್ಲಿ ಚಳಿ ವಾತಾವಾರಣ ಇನ್ನೂ ಇದೆ. ಕೆಲವೆಡೆ ತುಸು ಕಡಿಮೆಯಾದರೂ, ಬೆಳಗ್ಗಿನ ಸಮಯದಲ್ಲಿ ಭಾರೀ ಚಳಿಯಿರುತ್ತದೆ (Cold). ಇದೀಗ ಕರ್ನಾಟಕದ ಹವಾಮಾನ ಇಂದು ಹೇಗಿದೆ ಗೊತ್ತಾ? ಕರ್ನಾಟಕದಲ್ಲಿ ಕಳೆದೊಂದು ತಿಂಗಳಿಂದ ತೀವ್ರ ಚಳಿ ಇದೆ. ದಟ್ಟವಾದ ಮಂಜು, ವಿಪರೀತ ಚಳಿಯಿಂದಾಗಿ ಕೆಲವು ಪ್ರದೇಶಗಳಂತೂ ಚಳಿಯಿಂದ ಗಢ ಗಢ ನಡುಗುತ್ತಿದೆ. ಆದ್ರೆ ಇದೀಗ ಚಳಿ ಪ್ರಮಾಣ ಕೆಲವೆಡೆ ಕಮ್ಮಿಯಾಗಿದ್ದು, ಮುಂದಿನ ದಿನಗಳಲ್ಲಿ ಬಿಸಿಲು (Summer) ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹೌದು, ಕರ್ನಾಟಕದಾದ್ಯಂತ ಹವಾಮಾನದಲ್ಲಿ ಬದಲಾವಣೆಯಾಗಲಿದೆ. ಅಂದರೆ ಇನ್ಮೇಲೆ ಚಳಿ ವಾತಾವರಣ ಕಡಿಮೆಯಾಗಿ, ಹೆಚ್ಚಿನ ಜಿಲ್ಲೆಗಳಲ್ಲಿ ಶುಷ್ಕ ಮತ್ತು ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ವರದಿ ಪ್ರಕಾರ, ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ನಿಂದ 34 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಬಹುದು ಎಂದು ವರದಿಯಾಗಿದೆ.
ಚಳಿ ಅಲ್ಲ, ಹೆಚ್ಚಾಯ್ತು ಬಿಸಿಲು!
ಇದುವರೆಗೆ ಚಳಿಯಿಂದ ನಡುಗುವಂತೆ ಮಾಡಿದ್ದ ಹವಾಮಾನ, ಇನ್ಮೇಲೆ ಬಿಸಿಲಿನಿಂದ ಬೇಯುವಂತೆ ಮಾಡಲಿದೆ. ಕರಾವಳಿ ಜಿಲ್ಲೆಗಳಲ್ಲೂ ಹವಾಮಾನ ಸ್ವಲ್ಪ ತೇವಾಂಶದಿಂದ ಕೂಡಿರಲಿದ್ದು, ಉತ್ತರ ಒಳನಾಡಿನ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಇಂದು ಹೆಚ್ಚಿರಲಿದೆ ಎಂದು ವರದಿಯಾಗಿದೆ.
ಮಳೆ ಸೂಚನೆ ಇಲ್ಲ
ಕರ್ನಾಟಕದ ಯಾವುದೇ ಜಿಲ್ಲೆಗಳಲ್ಲಿ ಸದ್ಯದ ಮಟ್ಟಿಗೆ ಮಳೆ ಸೂಚನೆ ಇಲ್ಲ. ಆದರೆ ಬೆಳಗ್ಗಿನ ಸಮಯದಲ್ಲಿ ಚಳಿ, ಮಧ್ಯಾಹ್ನದ ಸಂದರ್ಭದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಲಿದ್ದು, ತಾಪಮಾನ 35 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುವ ನಿರೀಕ್ಷೆಯಿದೆ. ಇನ್ನು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಬೆಳಗ್ಗಿನ ವೇಳೆ ಮಂಜು ಮುಸುಕಿದ ವಾತಾವರಣವಿದ್ದು, ದಿನವಿಡೀ ಹಿತಕರವಾದ ಹವಾಮಾನ ಇರಲಿದೆ ಎಂದು ಹೇಳಲಾಗಿದೆ.
ಈ ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಹೆಚ್ಚಳ
ವಿಶೇಷವಾಗಿ ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ ಎಂದು ವರದಿಯಾಗಿದೆ. ವರದಿ ಪ್ರಕಾರ ಈ ಜಿಲ್ಲೆಗಳಲ್ಲಿ ತಾಪಮಾನ 34 ಡಿಗ್ರಿ ಸೆಲ್ಸಿಯಸ್‌ನಿಂದ 35 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುವ ಸಾಧ್ಯತೆ ಇದೆ.
ಮುಂದಿನ ವಾರದಿಂದಲೇ ಭಾರೀ ಬಿಸಿಲು
ಕರ್ನಾಟಕದಲ್ಲಿ ಮುಂದಿನ ವಾರದಿಂದಲೇ ಬಿಸಿಲಿನ ಪ್ರಮಾಣ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಬೆಳಗ್ಗಿನ ವೇಳೆ ಚಳಿ ಹೆಚ್ಚಿದ್ದರೆ, ಮಧ್ಯಾಹ್ನದ ವೇಳೆಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಅದರಲ್ಲೂ ಈ ಬಾರಿ ಕರ್ನಾಟಕ ಬಿಸಿಲಿನಿಂದ ಪಕ್ಕಾ ಸುಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾಮಾನ್ಯವಾಗಿ ಪ್ರತೀ ವರ್ಷ ರಾಜ್ಯದಲ್ಲಿ ಮಾರ್ಚ್, ಮೇ ವೇಳೆಯಲ್ಲಿ ಬೇಸಿಗೆ ಕಾಲ ಬರುತ್ತದೆ. ಆದ್ರೆ ಈ ಬಾರಿ ನಿರೀಕ್ಷೆಗೂ ಮೊದಲೇ ಬೇಸಿಗೆ ಆರಂಭವಾಗುವ ಸೂಚನೆಯಿದೆ. ಆದ್ದರಿಂದ ಜನರು ಮೊದಲೇ ಎಚ್ಚೆತ್ತುಕೊಳ್ಳುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.


Click it and Unblock the Notifications