ರಾಜ್ಯದಲ್ಲಿ ಕೆಲವು ದಿನಗಳಿಂದ ಚಳಿ (Cold) ವಿಪರೀತವಾಗಿದೆ. ಕಳೆದ ತಿಂಗಳಷ್ಟೇ ಮಳೆ ಅಲರ್ಟ್ ನೀಡುತ್ತಿದ್ದ ಹವಾಮಾನ ಇಲಾಖೆ, ಇದೀಗ ಚಳಿ ಅಲರ್ಟ್ ನೀಡುವಂತಾಗಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಬರುವ ದಿನಗಳಲ್ಲಿ ತೀವ್ರ ಚಳಿ, ತಾಪಮಾನದಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ತಾಪಮಾನಗಳ ನಡುವೆಯೂ, ಬೆಂಗಳೂರಿನಲ್ಲಿ ಸ್ಪಷ್ಟ ಆಕಾಶ, ಮಂಜು ಆವರಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಡಿಸೆಂಬರ್ 18, ಗುರುವಾರದ ಭಾರತೀಯ ಹವಾಮಾನ ಇಲಾಖೆ (IMD) ವರದಿಯಂತೆ, ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ, ಮಂಜು ಕವಿದ ವಾತಾವರಣ, ತಾಪಮಾನದಲ್ಲಿ ಇಳಿಕೆಯಾಗಲಿದೆ ಎಂದು ವರದಿಯಾಗಿದೆ.

ಐಎಂಡಿ ಮುನ್ಸೂಚನೆಯಂತೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತೀವ್ರ ಚಳಿ ಆವರಿಸಲಿದೆ. ಬೆಂಗಳೂರಿನಲ್ಲಿ ಸ್ಪಷ್ಟ ಆಕಾಶವಿದ್ದು, ಮುಂಜಾನೆ ಕೆಲವೆಡೆ ಮಂಜು ಕವಿದ ವಾತಾವರಣ ಇರಲಿದೆ ಎಂದು ವರದಿಯಾಗಿದೆ. ನಗರದಲ್ಲಿ ಗರಿಷ್ಠ 28 ಡಿಗ್ರಿ, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಬಹುದು ನಿರೀಕ್ಷಿಸಲಾಗಿದೆ.
IMD ವರದಿ ಪ್ರಕಾರ, ಉತ್ತರ ಒಳನಾಡು ಕರ್ನಾಟಕದ ರಾಯಚೂರಿನಲ್ಲಿ ತೀವ್ರ ಶೀತ ಗಾಳಿ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಈಶಾನ್ಯ ಮಾರುತಗಳು, ದಕ್ಷಿಣ ಒಳನಾಡು ಹಾಗೂ ಕರಾವಳಿ ಕರ್ನಾಟಕದಲ್ಲಿ ಪೂರ್ವ ಮಾರುತಗಳು ಜೋರಾಗಿ ಬೀಸಲಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ಎಲ್ಲಾ ಜಿಲ್ಲೆಗಳಲ್ಲೂ ಒಣ ಹವಾಮಾನ ಮುಂದುವರೆಯಲಿದೆ.
ಕಳೆದ 24 ಗಂಟೆಗಳಲ್ಲಿ ರಾಯಚೂರು, ಬೆಳಗಾವಿ ವಿಮಾನ ನಿಲ್ದಾಣ, ಮಂಡ್ಯ, ಮೈಸೂರು, ಶಿವಮೊಗ್ಗ, ಕಾರವಾರ, ಶಕ್ತಿನಗರ, ಕೊಪ್ಪಳ, ಗದಗ, ಧಾರವಾಡ, ಬೆಂಗಳೂರು ಎಚ್‌ಎಎಲ್ ಎಪಿ, ಬೆಂಗಳೂರು ಕೆಐಎಎಲ್ ಎಪಿ, ಬೆಂಗಳೂರು ನಗರ, ಚಿಂತಾಮಣಿ, ಚಿತ್ರದುರ್ಗ ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ತಾಪಮಾನ ಗಣನೀಯವಾಗಿ ಕುಸಿದಿದೆ ಎಂದ ವರದಿಯಾಗಿದೆ.
ಬೆಂಗಳೂರಿನಲ್ಲಿ ಶುಕ್ರವಾರದಿಂದ ಚಳಿ ಸ್ವಲ್ಪ ಕಮ್ಮಿಯಾದರೂ, ಕನಿಷ್ಠ ತಾಪಮಾನ ಮುಂದಿನ 24-48 ಗಂಟೆಗಳಲ್ಲಿ ಕಡಿಮೆಯಾಗಲಿದೆ ಎನ್ನಲಾಗಿದೆ. ಆದರೆ ಗುರುವಾರ, ನಗರದಲ್ಲಿ ಗರಿಷ್ಠ 28, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಅಂದಾಜಿಸಲಾಗಿತ್ತು.
ಡಿಸೆಂಬರ್ 19, 20, 21ಕ್ಕೆ ಗರಿಷ್ಠ-ಕನಿಷ್ಠ ತಾಪಮಾನ ಕ್ರಮವಾಗಿ 28-17, 28-16, 28-16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬುಧವಾರ ಕನಿಷ್ಠ ತಾಪಮಾನ 12.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಸಾಮಾನ್ಯ ಡಿಸೆಂಬರ್‌ಗಿಂತ ಈ ಬಾರಿ ತಾಪಮಾನದಲ್ಲಿ ಭಾರೀ ಇಳಿಕೆಯಾಗಿದೆ. ಇನ್ನು ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಮುಂಜಾನೆಯ ಚಳಿ ಹೆಚ್ಚಿರಲಿದೆ ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications