‌Cold Weather: ಅಯ್ಯಯ್ಯೋ, ಚಳಿ ಚಳಿ! ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ ಶೀತಗಾಳಿ, ಈ ಜಿಲ್ಲೆಗಳಿಗೆ ಅಲರ್ಟ್

ಕರ್ನಾಟಕ (Karnataka) ಮಾತ್ರವಲ್ಲದೇ ದೇಶದ ಹಲವು ರಾಜ್ಯಗಳಲ್ಲಿ ಕಳೆದೆ ಒಂದು ತಿಂಗಳಿಂದ ವಿಪರೀತ ಚಳಿಯಾಗುತ್ತಿದೆ. ಅಲ್ಲದೇ ಕೆಲವು ಕಡೆಗಳಲ್ಲಿ ಭಾರತೀಯ ಹವಾಮಾನ ಇಲಾಖೆಯೇ ಚಳಿ ಹೆಚ್ಚಾಗಬಹುದು ಎಂದು ಅಲರ್ಟ್‌ ನೀಡಿತ್ತು. ಅದರಲ್ಲೂ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಳೆದ ಕೆಲವು ತಿಂಗಳಿಂದ ವಿಪರೀತ ಚಳಿಯಾಗುತ್ತಿದೆ. ಇದೀಗ ಮತ್ತೆ ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ (IMD) ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ ಶೀತಗಾಳಿ, ಈ ಜಿಲ್ಲೆಗಳಿಗೆ ಅಲರ್ಟ್

ಬೆಂಗಳೂರು ಸೇರಿ ಹಲವು ಜಿಲ್ಲೆಗಳು ಮೈಕೊರೆಯುವಂತಹ ಚಳಿಯಲ್ಲಿ ಗಢ ಗಢ ನಡುಗುತ್ತಿತ್ತು. ಅದರ ನಡುವಲ್ಲೂ ಒಣ ಹವೆ ಮುಂದುವರೆದಿತ್ತು. ಆದ್ರೆ ಇದೀಗ ಮತ್ತೆ ಶೀತ ಗಾಳಿ, ಚಳಿ ವಾತಾವರಣ ಕೆಲವು ಜಿಲ್ಲೆಗಳಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ.

ಹವಾಮಾನ ಇಲಾಖೆ ಹೇಳಿದ್ದೇನು?
ಬೆಂಗಳೂರು ಸೇರಿ ರಾಜ್ಯದ ಹಲವು ಭಾಗದಲ್ಲಿ ಚಳಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಭಾರತೀಯ ಹವಾಮಾನ ಇಲಾಖೆಯ ಸೂಚನೆ ಪ್ರಕಾರ, ಬೆಂಗಳೂರು ಮಾತ್ರವಲ್ಲದೇ ಮುಂದಿನ ಎರಡು ಮೂರು ವಾರಗಳಲ್ಲಿ ಚಳಿ ವಿಪರೀತವಾಗಿ ಹೆಚ್ಚಾಗಲಿದೆ ಎಂದು ಸೂಚನೆ ನೀಡಿದೆ.

ಕಾರಣವೇನು?
ಬಂಗಾಳಕೊಲ್ಲಿಯಿಂದ ಬೀಸುವ ಪೂರ್ವ ಮಾರುತಗಳೇ ಈ ಚಳಿ ಹೆಚ್ಚಾಗಲು ಕಾರಣವಾಗಿದೆ. ಇದರಿಂದ ಕೆಲವು ಪ್ರದೇಶಗಳ ಮೇಲೆ ಪ್ರಭಾವ ಬೀರಲಿದ್ದು, ಚಳಿಯೂ ಹೆಚ್ಚಾಗುವ ನಿರೀಕ್ಷೆಯಿದೆ.

ಇಲ್ಲೆಲ್ಲಾ ಚಳಿ ಹೆಚ್ಚಳ
ಕರ್ನಾಟಕ ಮಧ್ಯ ಮತ್ತು ಉತ್ತರ ಜಿಲ್ಲೆಗಳಲ್ಲಿ ತಡರಾತ್ರಿಯಾಗುತ್ತಿದ್ದಂತೆ ಮತ್ತು ಮುಂಜಾನೆ ವೇಳೆ ಶೀತ ಗಾಳಿ ಮತ್ತು ದಟ್ಟವಾದ ಮಂಜು ಆವರಿಸುತ್ತಿತ್ತು. ಅಲ್ಲದೇ ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆ ಕೂಡಾ ಬಿದ್ದಿತ್ತು.

ಬೆಂಗಳೂರಿನಲ್ಲಿ ಹೇಗಿದೆ ವಾತಾವರಣ?
ಸಿಲಿಕಾನ್‌ ಸಿಟಿ ಬೆಂಗಳೂರಂತೂ ಕಳೆದ 15 ದಿನಗಳಿಂದ ಚಳಿ.. ಚಳಿ ಅನ್ನುತ್ತಿದೆ. ಇದೀಗ ಚಳಿ ಹೆಚ್ಚಾದ ಬೆನ್ನಲ್ಲೇ, ಈ ವಾರದಲ್ಲಿ ಒಂದೆರಡು ದಿನಗಳ ಕಾಲ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ವರದಿ ಪ್ರಕಾರ, ಬೆಂಗಳೂರಿನಲ್ಲಿ ಜನವರಿ 9 ಮತ್ತು 10 ರಂದು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಕೇರಳದ ಹವಾಮಾನ ವರದಿ:
ಹಲವು ದಿನಗಳ ನಂತರ ಇದೀಕ ಕೇರಳದಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆಯ ಪ್ರಭಾವದಿಂದಾಗಿ ಶುಕ್ರವಾರದಿಂದ ಕೇರಳದಲ್ಲಿ ಮಳೆಯಾಗಬಹುದು ಎಂದು ಕೇಂದ್ರ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಶುಕ್ರವಾರ (ಜ.09) ಪಟ್ಟಣಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಅನ್ನೂ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ 64.5 ಮಿ.ಮೀ ನಿಂದ 115.5 ಮಿ.ಮೀ ಮಳೆಯಾಗಬಹುದು ನಿರೀಕ್ಷಿಸಲಾಗಿದೆ.‌ ಶುಕ್ರವಾರದ ವೇಳೆ ಚಂಡಮಾರುತ ಶ್ರೀಲಂಕಾ ಪ್ರವೇಶಿಸುತ್ತಿದ್ದಂತೆ ತಮಿಳುನಾಡು ಮತ್ತು ಕೇರಳದ ಹವಾಮಾನ ಪರಿಸ್ಥಿತಿಗಳು ಬದಲಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಸದ್ಯ ಕೇರಳದ ಹವಾಮಾನ ವರದಿಯಾಗಿದ್ದು, ಮುಂದಿನ ದಿನಗಳಲ್ಲಿ ಮಳೆಯಾಗುವ ನಿರೀಕ್ಚೆಯಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+