ಅಕ್ಟೋಬರ್ ಅಂದರೆ ಸಾಕು ಗಾಂಧಿ ಜಯಂತಿಯಿಂದ ಹಿಡಿದು ನವರಾತ್ರಿಯವರೆಗೆ ಅನೇಕ ಹಬ್ಬಗಳ ರಜಾದಿನಗಳು ಸಾಲು ಸಾಲಾಗಿರುತ್ತದೆ. ಶಾಲಾ- ಕಾಲೇಜು , ಸರ್ಕಾರಿ ಕಚೇರಿ , ಬ್ಯಾಂಕುಗಳಿಗೆ ಈ ರಜೆಗಳು ಹೆಚ್ಚಾಗಿ ಅನ್ವಯಿಸುತ್ತದೆ. ಆರ್‌ಬಿಐ ರಜೆಯ ಕ್ಯಾಲೆಂಡರ್ ಪ್ರಕಾರ, ಈ ತಿಂಗಳಲ್ಲಿ (ಅಕ್ಟೋಬರ್)ನಲ್ಲಿ ಸುಮಾರು 15 ದಿನ ಬ್ಯಾಂಕುಗಳು ಮುಚ್ಚಿರಲಿವೆ. ಹೀಗಾಗಿ ನಿಮಗೆ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸಗಳಿದ್ದರೆ ಈ ರಜಾ ದಿನಗಳ ಪಟ್ಟಿ ನೋಡಿಕೊಂಡು ಅದಕ್ಕೆ ತಕ್ಕುದಾದಂತೆ ಪ್ಲ್ಯಾನ್ ಮಾಡಿಕೊಳ್ಳಿ.
ವಿವಿಧ ರಾಜ್ಯ-ನಿರ್ದಿಷ್ಟ ಹಬ್ಬಗಳು ಮತ್ತು ರಾಷ್ಟ್ರವ್ಯಾಪಿ ರಜೆಯ ಕಾರಣ ಬ್ಯಾಂಕ್‌ಗಳು ಒಟ್ಟಾರೆಯಾಗಿ ಅಕ್ಟೋಬರ್ ನಲ್ಲಿ ಒಟ್ಟು 15 ದಿನಗಳು ಮುಚ್ಚಿರುತ್ತದೆ. ಅಕ್ಟೋಬರ್ 2 ರ ಬುಧವಾರದಂದು ಬರುವ ಗಾಂಧಿ ಜಯಂತಿ ತಿಂಗಳಲ್ಲಿ ಅತ್ಯಂತ ಮಹತ್ವದ ರಜಾದಿನವಾಗಿದೆ. ರಾಷ್ಟ್ರವ್ಯಾಪಿ ಗಾಂಧಿಜಯಂತಿಯನ್ನು ಆಚರಿಸುವ ಕಾರಣ ಬ್ಯಾಂಕ್ ಗಳಿಗೆ ಆ ದಿನ ರಜಾದಿನವಾಗಿರುತ್ತದೆ.

ಇದಲ್ಲದೇ ಎಲ್ಲಾ ಭಾನುವಾರ ಮತ್ತು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಜೊತೆಗೆ ಐದು ಶನಿವಾರಗಳೊಂದಿಗೆ ತಿಂಗಳು ಬಂದರೆ ಐದನೇ ಶನಿವಾರದಂದು ಎಂದಿನಂತೆ ಕಾರ್ಯನಿರ್ವಹಿಸುತ್ತಾರೆ.
ಅಕ್ಟೋಬರ್ 1: ಜಮ್ಮು ಮತ್ತು ಕಾಶ್ಮೀರದಲ್ಲಿವಿಧಾನಸಭಾ ಚುನಾವಣೆ ನಡೆಯುವ ಕಾರಣ ಜಮ್ಮುವಿನ ಬ್ಯಾಂಕ್‌ಗಳಿಗೆ ರಜೆ.
ಅಕ್ಟೋಬರ್ 2 : ಮಹಾತ್ಮ ಗಾಂಧಿ ಜಯಂತಿ ಮತ್ತು ಮಹಾಲಯ ಅಮಾವಾಸ್ಯೆಯ ಸಂದರ್ಭದಲ್ಲಿ ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ಮುಚ್ಚಲ್ಪಟ್ಟಿರುತ್ತದೆ.
ಅಕ್ಟೋಬರ್ 3 : ನವರಾತ್ರಿ ಪ್ರಯುಕ್ತ ರಾಜಸ್ಥಾನದಲ್ಲಿ ಬ್ಯಾಂಕ್ ರಜೆ ಇರುತ್ತದೆ.
ಅಕ್ಟೋಬರ್ 6 (ಭಾನುವಾರ)
ಅಕ್ಟೋಬರ್ 10: ಮಹಾ ಸಪ್ತಮಿ ಸಂದರ್ಭದಲ್ಲಿ ತ್ರಿಪುರಾ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಬಂಗಾಳದಲ್ಲಿ ಬ್ಯಾಂಕ್‌ಗಳಿಗೆ ರಜೆ.
ಅಕ್ಟೋಬರ್ 11 : ದಸರಾ, ಆಯುಧ ಪೂಜೆ ಮತ್ತು ದುರ್ಗಾಷ್ಟಮಿ ಪ್ರಯುಕ್ತ ಬ್ಯಾಂಕ್ ಮುಚ್ಚಲ್ಪಟ್ಟಿರುತ್ತದೆ
ಅಕ್ಟೋಬರ್ 12 (ಎರಡನೇ ಶನಿವಾರ)
ಅಕ್ಟೋಬರ್ 13 (ಭಾನುವಾರ)
ಅಕ್ಟೋಬರ್ 14: ದುರ್ಗಾ ಪೂಜೆ (ದಾಸೈನ್) ಪ್ರಯುಕ್ತ ಸಿಕ್ಕಿಂನಲ್ಲಿ ಬ್ಯಾಂಕ್‌ಗಳಿಗೆ ರಜೆ.
ಅಕ್ಟೋಬರ್ 16 : ಲಕ್ಷ್ಮಿ ಪೂಜೆ ಪ್ರಯುಕ್ತ ತ್ರಿಪುರಾ ಮತ್ತು ಬಂಗಾಳ ರಾಜ್ಯಗಳಲ್ಲಿ ಬ್ಯಾಂಕ್ ರಜೆ.
ಅಕ್ಟೋಬರ್ 17 : ಮಹರ್ಷಿ ವಾಲ್ಮೀಕಿ ಜಯಂತಿ/ ಕತಿ ಬಿಹು ಪ್ರಯುಕ್ತ ಕರ್ನಾಟಕ, ಅಸ್ಸಾಂ ಮತ್ತು ಹಿಮಾಚಲ ಪ್ರದೇಶದ ಬ್ಯಾಂಕ್‌ಗಳಿಗೆ ರಜೆ.
ಅಕ್ಟೋಬರ್ 20 (ಭಾನುವಾರ)
ಅಕ್ಟೋಬರ್ 26 : ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ವಿಲೀನವಾದ ದಿನ ಪ್ರಯುಕ್ತ ಜಮ್ಮು ಮತ್ತು ಶ್ರೀನಗರದ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.
ಅಕ್ಟೋಬರ್ 27 (ಭಾನುವಾರ)
ಅಕ್ಟೋಬರ್ 31: ದೀಪಾವಳಿ/ ನರಕ ಚತುರ್ದಶಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ ದಿನ ಬ್ಯಾಂಕ್ ಮುಚ್ಚಲ್ಪಟ್ಟಿರುತ್ತದೆ.
ಅಕ್ಟೋಬರ್ 2024 ರಲ್ಲಿ ಬ್ಯಾಂಕ್ ರಜಾದಿನಗಳ ಒಟ್ಟಾರೆ ಸಂಖ್ಯೆಯು ಅಧಿಕವಾಗಿದ್ದರೂ, ನಿರ್ದಿಷ್ಟ ದಿನಾಂಕಗಳು ಮತ್ತು ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ದಿನ ರಜೆ ಇರಬಹುದು. ನಿಮಗೆ ಏನಾದರೂ ನಿರ್ದಿಷ್ಟ ಪ್ರದೇಶದಲ್ಲಿ ಬ್ಯಾಂಕ್ ರಜಾದಿನಗಳ ಬಗ್ಗೆ ಅತ್ಯಂತ ನಿಖರವಾದ ಮತ್ತು ನವೀಕೃತ ಮಾಹಿತಿ ಬೇಕಿದ್ದರೆ ಸ್ಥಳೀಯ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳೊಂದಿಗೆ ಪರಿಶೀಲಿಸಬಹುದಾಗಿದೆ.
ಇನ್ನು 15 ದಿನಗಳು ಬ್ಯಾಂಕ್ ರಜೆ ಇದ್ದರೂ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಮುಂದುವರಿಯುತ್ತವೆ. ಹೀಗಾಗಿ ನೆಟ್ ಬ್ಯಾಕಿಂಗ್ ಬಲ್ಲವರು ಈ ಬಗ್ಗೆ ಹೆಚ್ಚು ಚಿಂತೆ ನಡೆಸಬೇಕಿಲ್ಲ. ಇದಲ್ಲದೇ ಯುಪಿಐ ಮತ್ತು ಎಟಿಎಂ ಸೇವೆಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಲಿದೆ


Click it and Unblock the Notifications