ಹಿಂಡನ್‌ಬರ್ಗ್ ವರದಿಯ ಬಳಿಕ ದೇಶದಲ್ಲಿ ಹಲವಾರು ಬೆಳವಣಿಗೆಗಳು ಕಂಡು ಬಂದಿದೆ. ಕೇಂದ್ರ ಸರ್ಕಾರದ ವಿರುದ್ಧವಾಗಿ ಈ ಹಿಂಡನ್‌ಬರ್ಗ್ ವರದಿಯನ್ನು ವಿರೋಧ ಪಕ್ಷಗಳು ಬಳಸುತ್ತಿದೆ. ಈ ಹಿಂದೆ ಪನಾಮ ಮತ್ತು ಪಂಡೋರಾ ಪೇಪರ್ಸ್ ಪ್ರಕರಣದಲ್ಲಿ ಗೌತಮ್ ಅದಾನಿಯ ಸಹೋದರ ವಿನೋದ್ ಅದಾನಿಯ ಹೆಸರು ಕೂಡಾ ಕೇಳಿಬಂದಿತ್ತು. ಈ ನಡುವೆ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿಗೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ.
ಅದಾನಿ ಬಿಕ್ಕಟ್ಟಿನ ನಡುವೆ ಸರ್ಕಾರಕ್ಕೆ ಕಾಂಗ್ರೆಸ್ ಮೂರು ಪ್ರಶ್ನೆಗಳನ್ನು ಕೇಳಿದೆ. "ನೀವು ಹಾಗೂ ನಿಮ್ಮ ಸರ್ಕಾರ ನಾವು ಅದಾನಿಗೆ ಏನು ಆಗಬೇಕು ಎಂದು ಹೇಳುವ ಮೂಲಕ ವಿಚಾರವನ್ನು ಮುಚ್ಚಿ ಹಾಕಲು ಸಾಧ್ಯವಾಗದು," ಎಂದು ಕಾಂಗ್ರೆಸ್ ಹೇಳಿದೆ. ಸಂಸತ್ತಿನಲ್ಲಿ ಕಳೆದ ಕೆಲವು ದಿನಗಳಿಂದ ಎಸ್‌ಬಿಐ, ಎಲ್‌ಐಸಿ, ಪಿಎನ್‌ಬಿ ಅದಾನಿ ಮೇಲೆ ಹೂಡಿಕೆ ಮಾಡಿರುವ ಬಗ್ಗೆಯೇ ಆತಂಕ ಸೃಷ್ಟಿಯಾಗಿದೆ. ಆದರೆ ಈ ಬಗ್ಗೆ ನಿರ್ಮಲಾ ಸೀತಾರಾಮನ್ ಸ್ಪಷ್ಟಣೆಯನ್ನು ಕೂಡಾ ನೀಡಿದ್ದಾರೆ.
ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿಯ ಸಹೋದರ ವಿನೋದ್ ಅದಾನಿ ಹೆಸರು ಪನಾಮಾ ಪೇಪರ್ಸ್ ಮತ್ತು ಪಂಡೋರಾ ಪೇಪರ್ಸ್‌ನಲ್ಲಿ ಕಂಡು ಬಂದಾಗ, ಸರ್ಕಾರವು ಅದಾನಿ ಗ್ರೂಪ್ ವಿರುದ್ಧ ಯಾವುದೇ ತನಿಖೆಯನ್ನು ನಡೆಸಿಲ್ಲ ಯಾಕೆ? ಎಂಬ ಪ್ರಶ್ನೆಯನ್ನು ಕೂಡಾ ಅದಾನಿ ಗ್ರೂಪ್ ಕೇಳಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಮೋದಿಗೆ ಕಾಂಗ್ರೆಸ್ ಕೇಳಿದ ಪ್ರಶ್ನೆಗಳು
"ಆಫ್‌ಶೋರ್ ಎಂಟಿಟಿ ಮೂಲಕ ವಿನೋದ್ ಅದಾನಿ ವಿರುದ್ಧ ಸ್ಟಾಕ್ ಮ್ಯಾನಿಫುಲೇಶನ್ ಮತ್ತು ವಂಚನೆ ಬಗ್ಗೆ ಆರೋಪ ಕೇಳಿಬಂದಿದೆ. ನಿಮಗೆ ಚೆನ್ನಾಗಿ ಪರಿಚಯವಿರುವ ವ್ಯಾಪಾರ ಸಂಸ್ಥೆಯು ಗಂಭೀರ ಆರೋಪಗಳನ್ನು ಎದುರಿಸುತ್ತಿದೆ ಎಂಬ ಅಂಶವು ನಿಮ್ಮ ಗುಣಮಟ್ಟ ಮತ್ತು ಪ್ರಾಮಾಣಿಕತೆಯ ಬಗ್ಗೆ ನಮಗೆ ಏನು ಹೇಳುತ್ತದೆ," ಎಂಬುವುದು ಕಾಂಗ್ರೆಸ್‌ನ ಮೊದಲ ಪ್ರಶ್ನೆಯಾಗಿದೆ.
"ಅದಾನಿ ಗ್ರೂಪ್ ವಿರುದ್ಧ ವರ್ಷಗಳಿಂದ ಬಂದಿರುವ ಗಂಭೀರ ಆರೋಪಗಳ ತನಿಖೆಗೆ ಎಂದಾದರೂ ಕ್ರಮಕೈಗೊಳ್ಳಲಾಗಿದೆಯೇ? ನಿಮ್ಮ ಸರ್ಕಾರದ ಅಡಿಯಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯ ಭರವಸೆ ಇದೆಯೇ?," ಎಂಬುವುದು ಕಾಂಗ್ರೆಸ್‌ನ ಎರಡನೇ ಪ್ರಶ್ನೆಯಾಗಿದೆ.
"ಭಾರತದ ಅತಿದೊಡ್ಡ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾದ ಈ ಸಂಸ್ಥೆಗೆ ಮಾತ್ರ ವಿಮಾನ ನಿಲ್ದಾಣಗಳು ಮತ್ತು ಬಂದರುಗಳನ್ನು ತನ್ನ ಹತೋಟಿಗೆ ಪಡೆಯುವ ಅವಕಾಶವನ್ನು ನೀಡಲಾಗಿದೆ. ನಿರಂತರ ಆರೋಪವಿದ್ದರೂ ದೀರ್ಘಕಾಲದವರೆಗೆ ಗಂಭೀರ ಪರಿಶೀಲನೆಯಿಂದ ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ?, ಇತರೆ ವ್ಯಾಪಾರ ಸಂಸ್ಥೆಗಳ ಮೇಲೆ ಕಿರುಕುಳ, ದಾಳಿ ನಡೆದಿದೆಯೇ?, ಇಷ್ಟು ವರ್ಷಗಳ ಕಾಲ 'ಭ್ರಷ್ಟಾಚಾರ-ವಿರೋಧಿ' ನಡೆಯಿದಾಗಿ ಲಾಭ ಗಳಿಸಿದ ಆಡಳಿತಕ್ಕೆ ಅದಾನಿ ಗ್ರೂಪ್ ಅತ್ಯಗತ್ಯವೇ?," ಎಂಬುವುದು ಕಾಂಗ್ರೆಸ್‌ನ ಮೂರನೇ ಪ್ರಶ್ನೆಯಾಗಿದೆ.


Click it and Unblock the Notifications