300 ಯೂನಿಟ್ ಉಚಿತ ವಿದ್ಯುತ್.. 500 ರೂ.ಗೆ ಎಲ್‌ಪಿಜಿ ಸಿಲಿಂಡರ್.. ಪಡಿತರ ಕಿಟ್ ಸಹ ಫ್ರೀ ಫ್ರೀ..! ಹೌದು, ಈಗಾಗಲೇ ದೆಹಲಿ ಚುನಾವಣೆ ದಿನಾಂಕ ಘೋಷಣೆಯಾಗಿದೆ.ಈ ಹಿನ್ನೆಲೆಯಲ್ಲಿ ಈಗಾಗಲೇ ದೆಹಲಿ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ, ರಾಷ್ಟ್ರ ರಾಜಧಾನಿಯಲ್ಲಿ ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ಎಲ್ಲಾ ರೀತಿಯ ಸರ್ಕಸ್ ಮಾಡುತ್ತಿವೆ. ಇವರಿಗೆ ಟಕ್ಕರ್ ಕೊಡಲು ಜನರನ್ನು ತನ್ನ ಕಡೆಗೆ ಜನರನ್ನು ಸಳೆಯಲು ಭರಪೂರ ಭರವಸೆಗನ್ನು ಕಾಂಗ್ರೆಸ್ ಪಕ್ಷ ದೆಹಲಿಯ ಮತದಾರರಿಗೆ ನೀಡಿದೆ.
ಹೌದು,ದೆಹಲಿಯ ವಿಧಾನಸಭಾ ಚುನಾವಣೆಯು ಫೆಬ್ರವರಿ 5ರಂದು ನಡೆಯಲಿದೆ. ಮತಗಳ ಎಣಿಕೆಯನ್ನು ಫೆಬ್ರವರಿ 8ಕ್ಕೆ ನಡೆಯಲಿದೆ. ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 300 ಯೂನಿಟ್ ಉಚಿತ ವಿದ್ಯುತ್, 500 ರೂ.ಗೆ ಎಲ್‌ಪಿಜಿ ಸಿಲಿಂಡರ್ ಮತ್ತು ಉಚಿತ ಪಡಿತರ ಕಿಟ್‌ಗಳನ್ನು ನೀಡುವುದಾಗಿ ಗುರುವಾರ ಘೋಷಣೆ ಮಾಡಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು 'ಮೆಹಂಗೈ ಮುಕ್ತ್' ಯೋಜನೆಯನ್ನು ಪರಿಚಯಿಸಿದರು.ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಚುನಾಯಿತರಾದರೆ ನಮ್ಮ ಅತ್ಯಂತ ಹಳೆಯ ಪಕ್ಷವು ತನ್ನ ಐದು ಭರವಸೆಗಳನ್ನು ಪೂರೈಸುತ್ತದೆ ಎಂದು ಮತದಾದರಿಗೆ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಗೆ ರೂ 2,500 ನೀಡುವುದಾಗಿ ಭರವಸೆ ನೀಡಿದ ಒಂದು ವಾರದ ನಂತರ ಇತ್ತೀಚಿನ ಘೋಷಣೆಗಳು ಜಾರಿಗೆ ಬಂದಿವೆ. ಈ ಯೋಜನೆಯನ್ನು ಮಹಿಳಾ ಮತದಾರರನ್ನು ಓಲೈಸಲು ಮತ್ತು ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ಭರವಸೆಗಳನ್ನು ಎದುರಿಸಲು ಕಾಂಗ್ರೆಸ್ ಪಕ್ಷದ ಪ್ರಮುಖ ಹೆಜ್ಜೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದೇವೆ.
ಜನವರಿ 8 ರಂದು ಕಾಂಗ್ರೆಸ್ 'ಜೀವನ ರಕ್ಷಾ ಯೋಜನೆ' ಎಂಬ ಮತ್ತೊಂದು ಯೋಜನೆಯನ್ನು ಘೋಷಿಸಿತು.ಅಲ್ಲಿ 25 ಲಕ್ಷದವರೆಗೆ ಉಚಿತ ಆರೋಗ್ಯ ರಕ್ಷಣೆಯ ಭರವಸೆ ಸಹ ದೆಹಲಿಯ ಮತದಾರರಿಗೆ ನೀಡಿಲಾಗಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಆಯ್ಕೆ ಮಾಡಲು ದೆಹಲಿ ಮತದಾರರನ್ನು ಒತ್ತಾಯಿಸಿದರು
ಮೂರು ಬಾರಿ ಅಧಿಕಾರದಲ್ಲಿದ್ದರೂ ರಾಷ್ಟ್ರ ರಾಜಧಾನಿಯ ಜೀವನ ಪರಿಸ್ಥಿತಿಯನ್ನು ಸುಧಾರಿಸಲು ಮೋದಿ ಮತ್ತು ಕೇಜ್ರಿವಾಲ್ ಸರ್ಕಾರಗಳು ಏನನ್ನೂ ಮಾಡಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಾಗ್ದಾಳಿ ನಡೆಸಿದರು.
ಮೋದಿ ಮತ್ತು ಕೇಜ್ರಿವಾಲ್ ನಡುವೆ ಯಾವುದೇ ವ್ಯತ್ಯಾಸವಿಲ್ಲ
ಪ್ರಧಾನಿ ಮೋದಿ ಮತ್ತು ಕೇಜ್ರಿವಾಲ್ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಅವರ ಹೆಸರು ವಿಭಿನ್ನವಾಗಿದೆ ಆದರೆ ಅವರ ಕಾರ್ಯಗಳು ಒಂದೇ ಅದು ಸುಳ್ಳು. ಮೋದಿ ಮೂರು ಬಾರಿ ಪ್ರಧಾನಿ, ಕೇಜ್ರಿವಾಲ್ ಮೂರು ಬಾರಿ ಸಿಎಂ, ಆದರೆ ಅವರು ದೆಹಲಿಗೆ ಏನು ಮಾಡಿದ್ದಾರೆ? ಇಂದು ದೆಹಲಿ ನಾವು ಬದುಕಲು ಸಾಧ್ಯವಾಗದ ರೀತಿಯಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವಂತೆ ನಾನು ದೆಹಲಿಯ ಜನರಲ್ಲಿ ವಿನಂತಿಸುತ್ತೇನೆ, ನಾವು ಐದು ಭರವಸೆಗಳನ್ನು ಜಾರಿಗೆ ತರುತ್ತೇವೆ ಎಂದು ಭರವಸೆಯನ್ನು ಜನರಿಗೆ ನೀಡಿದ್ದರು.
ಯುವ ಉಡಾನ್ ಯೋಜನೆ
ಜನವರಿ 12 ರಂದು, ಕಾಂಗ್ರೆಸ್ ತನ್ನ ಮೂರನೇ ಗ್ಯಾರಂಟಿ ಯೋಜನೆಯಾದ ಯುವ ಉಡಾನ್ ಯೋಜನೆಯನ್ನು ಜಾರಿಗೊಳಿಸಿತು. ಮುಂದಿನ ತಿಂಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಗೆದ್ದರೆ ದೆಹಲಿಯ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಒಂದು ವರ್ಷಕ್ಕೆ ಮಾಸಿಕ 8,500 ರೂ.ಗಳನ್ನು ನೀಡುವುದಾಗಿ ಭರವಸೆಯನ್ನು ಕಾಂಗ್ರೆಸ್ ಪಕ್ಷ ನೀಡಿದೆ.
ಜೀವನ್ ರಕ್ಷಾ ಯೋಜನೆ
ಜನವರಿ 8 ರಂದು ಕಾಂಗ್ರೆಸ್ ತನ್ನ ಎರಡನೇ ಗ್ಯಾರಂಟಿ ಯೋಜನೆಯನ್ನು ದೆಹಲಿಯವರಿಗೆ 'ಜೀವನ್ ರಕ್ಷಾ ಯೋಜನೆ'ಯನ್ನು ಘೋಷಣೆ ಮಾಡಿತು. 25 ಲಕ್ಷ ಆರೋಗ್ಯ ರಕ್ಷಣೆಯನ್ನು ಒದಗಿಸುವುದಾಗಿ ಭರವಸೆ ನೀಡಿತು.
ಪ್ಯಾರಿ ದೀದಿ ಯೋಜನೆ
ಜನವರಿ 6 ರಂದು, ಕಾಂಗ್ರೆಸ್ ತನ್ನ ಮೊದಲ ಗ್ಯಾರಂಟಿ ಯೋಜನೆಯನ್ನು ದೆಹಲಿಯವರಿಗೆ "ಪ್ಯಾರಿ ದೀದಿ" ಯೋಜನೆಯನ್ನು ಘೋಷಿಸಿತು. ಮಹಿಳೆಯರಿಗೆ ರೂ 2,500 ನೀಡುವ ಭರವಸೆ ನೀಡಿತು.
ದೆಹಲಿಯಲ್ಲಿ ಸತತ 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿತು. ಇನ್ನೂ ಅಧೀಕಾರದಲ್ಲಿ ಎಎಪಿ ಪಕ್ಷ ಮೂರನೇ ಅವಧಿಯಲ್ಲೂ ಅಧಿಕಾರದ ಚುಕ್ಕಾಣಿ ಹಿಡಿಯಲು ಸರ್ಕಸ್ ಮಾಡುತ್ತಿದೆ. ಎಎಪಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತನ್ನ 'ಕಾರ್ಯಕ್ಷಮತೆ'ಯನ್ನು ಹೆಚ್ಚಿಸುವ ಮೂಲಕ ಸಾರ್ವಜನಿಕರ ಬಳಿಗೆ ಹೋಗುತ್ತದೆ. 2020 ರ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ ಎಎಪಿ 62 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಬಿಜೆಪಿ ಎಂಟು ಸ್ಥಾನಗಳನ್ನು ಪಡೆದುಕೊಂಡಿತು.
ದೆಹಲಿಯ ವಿಧಾನಸಭೆ ಚುನಾವಣೆ ಫೆಬ್ರವರಿ 5 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.ಫೆಬ್ರವರಿ 8 ರಂದು ಮತಗಳ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜನವರಿ 17. ನಾಮಪತ್ರಗಳ ಪರಿಶೀಲನೆಗೆ ದಿನಾಂಕ ಜನವರಿ 18. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಜನವರಿ 20 ಆಗಿದೆ.


Click it and Unblock the Notifications