ಕೊರೊನಾಗೆ ಕಾಂಗ್ರೆಸ್ ಸಲಹಾ ಸಮಿತಿ ರಚಿಸಿದ್ದು, ಅದಕ್ಕೆ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅಧ್ಯಕ್ಷರಾಗಿದ್ದಾರೆ. ಈ ಸಮಿತಿಯ ಸಭೆ ಸೋಮವಾರ ನಡೆದಿದ್ದು, ಎಲ್ಲ ಜನ್ ಧನ್ ಖಾತೆಗೆ 7500 ರುಪಾಯಿ ವರ್ಗಾವಣೆ ಮಾಡಲು ಒತ್ತಾಯಿಸಲಾಗಿದೆ. ಅಷ್ಟೇ ಅಲ್ಲ, ವಿಧವೆಯರು, ದಿವ್ಯಾಂಗರು ಹಾಗೂ ಹಿರಿಯ ನಾಗರಿಕರ ಪಿಂಚಣಿ ಖಾತೆಗೂ ಇಷ್ಟೇ ಮೊತ್ತದ ಹಣ ಜಮೆ ಮಾಡುವಂತೆ ಬೇಡಿಕೆ ಇಡಲಾಗಿದೆ.
ಸಮಿತಿಯ ಸದಸ್ಯರಾದ ಜೈರಾಮ್ ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಂಎಸ್ ಎಂಇ, ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಇನ್ನು ಒಂದೆರಡು ದಿನಗಳಲ್ಲಿ ವರದಿ ನೀಡುತ್ತೇವೆ. ನಗದಿಗೆ ಸಮಸ್ಯೆ ಇಲ್ಲವಾದ್ದರಿಂದ ಕೂಡಲೇ ಹಣ ವರ್ಗಾವಣೆ ಮಾಡಬೇಕು. ನಾವು ರಚನಾತ್ಮಕ ಸಲಹೆಗಳನ್ನು ನೀಡುತ್ತೇವೆ. ಸರ್ಕಾರ ಇವುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಕೊರೊನಾ ಬಿಕ್ಕಟ್ಟಿಗೆ ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಮಧ್ಯಪ್ರದೇಶ ಸರ್ಕಾರ ಬೀಳಿಸುವುದರಲ್ಲಿ ತೊಡಗಿಕೊಂಡಿತ್ತು. ಮಾರ್ಚ್ 23ನೇ ತಾರೀಕು ಈ ಬಗ್ಗೆ ಗಂಭೀರವಾಗಿ. ಇದು ರಾಜಕೀಯ ಮಾಡುವ ಸಮಯ ಅಲ್ಲ. ನೇರ ಹಣ ವರ್ಗಾವಣೆ 7500 ರುಪಾಯಿಗೆ ಸರ್ಕಾರವು ಹಣಕಾಸು ಹೊಂದಾಣಿಕೆಗೆ ದಾರಿ ಹುಡುಕಬೇಕು ಎಂದು ಕಾಂಗ್ರೆಸ್ ಹೇಳಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications