ಹೈದರಾಬಾದ್‌ನ ಜಿಲ್ಲಾ ಗ್ರಾಹಕರ ವೇದಿಕೆಯು ಭಾರತೀಯ ಅಂಚೆಗೆ ಸುಮಾರು 20 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ. ಈ ಮೊತ್ತವನ್ನು ನಿವೃತ್ತ ಐಪಿಎಸ್ ಅಧಿಕಾರಿಗೆ ಪಾವತಿ ಮಾಡುವಂತೆ ಜಿಲ್ಲಾ ಗ್ರಾಹಕರ ವೇದಿಕೆಯು ಅಂಚೆ ಇಲಾಖೆಗೆ ಆದೇಶದಲ್ಲಿ ತಿಳಿಸಿದೆ.
ಹೈದರಾಬಾದ್‌ನ ಜನರಲ್ ಪೋಸ್ಟ್ ಆಫೀಸ್‌ನಲ್ಲಿ ಇಂಡಿಯಾ ಪೋಸ್ಟ್ ಮೂಲಕ ವಿವಿಧ ವಸ್ತುಗಳನ್ನು ಒಳಗೊಂಡ ನಾಲ್ಕು ಪ್ಯಾಕೆಟ್‌ಗಳನ್ನು ಕಳುಹಿಸಿದ್ದಾರೆ. ಡೆಲಿವರಿ ಸಮಯದಲ್ಲಿ ಇದ್ದ ವ್ಯಕ್ತಿಯೊಬ್ಬರು ಉದ್ದೇಶಪೂರ್ವಕವಾಗಿ ಪಾರ್ಸೆಲ್‌ಗಳನ್ನು ಅನ್‌ಪ್ಯಾಕ್ ಮಾಡಿದ್ದಾರೆ ಎಂದು ದೂರುದಾರ ವಿಕೆ ಸಿಂಗ್ ಆರೋಪಿಸಿದ್ದಾರೆ.

ಒಂದು ಪ್ಯಾಕೆಟ್‌ನಲ್ಲಿ ಸೀರೆಗಳು ಮತ್ತು ಬೆಡ್ ಶೀಟ್‌ಗಳಿದ್ದರೆ, ಇನ್ನೊಂದು ಪ್ಯಾಕೆಟ್‌ನಲ್ಲಿ ಶರ್ಟ್‌ಗಳು, ಪ್ಯಾಂಟ್‌ಗಳು, ವೈದ್ಯಕೀಯ ಪುಸ್ತಕಗಳು ಮತ್ತು ಪ್ಲಾಸ್ಟಿಕ್ ಕಂಟೈನರ್‌ಗಳು ಇತರ ವಸ್ತುಗಳಿದ್ದವು ಎಂದು ನಿವೃತ್ತ ಐಪಿಎಸ್ ಅಧಿಕಾರಿ ವಿಕೆ ಸಿಂಗ್ ಹೇಳಿದ್ದಾರೆ.
ಈ ಪಾರ್ಸೆಲ್‌ಗಳು ಹರಿದ್ವಾರದಲ್ಲಿರುವ ತಮ್ಮ ಸ್ಥಳಕ್ಕೆ ಬಂದಾಗ ಈ ಪ್ಯಾಕೇಜ್‌ನಲ್ಲಿ ಸುಮಾರು 20,000 ರೂಪಾಯಿ ಮೌಲ್ಯದ ಸುಮಾರು ಹತ್ತು ಸೀರೆಗಳು ಕಾಣೆಯಾಗಿರುವುದು ಕಂಡು ಬಂದಿದೆ ಎಂದು ವಿಕೆ ಸಿಂಗ್ ಆರೋಪಿಸಿದ್ದಾರೆ. ಹಾಗೆಯೇ ಅದನ್ನು ಸಾಬೀತುಪಡಿಸಿದ್ದಾರೆ.
ಈ ಪಾರ್ಸೆಲ್ ರವಾನೆ ಮಾಡುವ ಸಂದರ್ಭದಲ್ಲಿ, ಪಾರ್ಸೆಲ್‌ಗಳು ಬಂದ ನಂತರ ತೆಗೆದ ವೀಡಿಯೊ ರೆಕಾರ್ಡಿಂಗ್‌ಗಳನ್ನು ವಿಕೆ ಸಿಂಗ್ ಹೈದರಾಬಾದ್‌ನ ಜಿಲ್ಲಾ ಗ್ರಾಹಕರ ವೇದಿಕೆಗೆ ಒದಗಿಸಿದ್ದಾರೆ. ಈ ವಿಡಿಯೋದಲ್ಲಿ ಪಾರ್ಸೆಲ್ ಅನ್ನು ತೆರೆದಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಈ ಹಿಂದೆಯೂ ಇದೇ ರೀತಿ ಟ್ಯಾಂಪರಿಂಗ್ ಮಾಡಲಾಗಿದೆ ಎಂದು ಕೂಡಾ ಸಿಂಗ್ ಆರೋಪ ಮಾಡಿದ್ದಾರೆ.
ಬೇರೆ ಆಯ್ಕೆಯಿಲ್ಲದೆ, ವಿಕೆ ಸಿಂಗ್ ಪರಿಹಾರವನ್ನು ಕೋರಿ ಗ್ರಾಹಕರ ವೇದಿಕೆಯನ್ನು ಸಂಪರ್ಕ ಮಾಡಿದ್ದಾರೆ. ಇನ್ನು ಇಂಡಿಯಾ ಪೋಸ್ಟ್ ಈ ದೂರಿನ ಆಧಾರದಲ್ಲಿ ಎಲ್ಲ ತನಿಖೆಯನ್ನು ಮಾಡಿದ ನಂತರ ಲಿಖಿತ ಹೇಳಿಕೆಯನ್ನು ನೀಡಿದೆ. ಅಂಚೆ ಕಚೇರಿಗೆ ಈ ಪಾರ್ಸೆಲ್ ಬರುವಾಗ ಸರಿಯಾಗಿತ್ತು. ಜೂನ್ 13, 2022 ರಂದು ಪಾರ್ಸೆಲ್ ಅನ್ನು ಸರಿಯಾದ ರೀತಿಯಲ್ಲಿಯೇ ಅಂಚೆ ಕಚೇರಿಯಿಂದ ವಿತರಣೆಗೆ ನೀಡಲಾಗಿದೆ ಎಂದು ಅಂಚೆ ಕಚೇರಿ ಹೇಳಿದೆ.
ಹಾಗೆಯೇ ದೂರುದಾರರು ಪಾರ್ಸೆಲ್‌ಗಳ ಮೌಲ್ಯವನ್ನು ತಿಳಿಸಿಲ್ಲ. ನೋಂದಾಯಿತ ಪಾರ್ಸೆಲ್‌ಗಳ ಮೂಲಕ ಕಳುಹಿಸಲಾದ ವಸ್ತುಗಳು ಮೌಲ್ಯಯುತ ವಸ್ತುಗಳಾಗಿದ್ದರೆ ಪಾರ್ಸೆಲ್‌ಗೆ ವಿಮೆ ಮಾಡಬಹುದೆಂದು ಎಂದು ಅಂಚೆ ಇಲಾಖೆಯು ಸೂಚನೆಯನ್ನು ನೀಡಿದೆ.
ಎಲ್ಲ ವಿಚಾರಣೆ ಮಾಡಿದ ಬಳಿಕ ಈ ನಷ್ಟಕ್ಕೆ ಅಂಚೆ ಇಲಾಖೆ ಅಧಿಕಾರಿಗಳೇ ಹೊಣೆಗಾರರಾಗಿದ್ದು, ಸಿಂಗ್‌ಗೆ 20,000 ರೂಪಾಯಿ ಪರಿಹಾರ ನೀಡುವಂತೆ ಭಾರತ ಅಂಚೆ ಇಲಾಖೆಗೆ ಪೀಠ ಸೂಚಿಸಿದೆ. ಹೆಚ್ಚುವರಿಯಾಗಿ, ದೂರಿನ ವೆಚ್ಚಕ್ಕಾಗಿ 5,000 ರೂಪಾಯಿ ಪಾವತಿಸುವಂತೆ ಅಂಚೆ ಇಲಾಖೆಗೆ ಗ್ರಾಹಕರ ವೇದಿಕೆ ಆದೇಶಿಸಿದೆ.


Click it and Unblock the Notifications