ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಭೀತಿ ಮೂಡಿಸಿದ್ದು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಉತ್ಪನ್ನಗಳ ಬೆಲೆಗಳು ಕುಸಿಯುತ್ತಿರುವುದರಿಂದ ಮುಂದಿನ ಒಂದು ವಾರದಲ್ಲಿ ಅಡುಗೆ ಎಣ್ಣೆ ಬೆಲೆ 10 ಪರ್ಸೆಂಟ್‌ರಷ್ಟು ಅಗ್ಗವಾಗುವ ಸಾಧ್ಯತೆಯಿದೆ ಎಂದು ಉದ್ಯಮದ ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಬೆಲೆಗಳು ಭಾರತೀಯ ಮಾರುಕಟ್ಟೆಯಲ್ಲಿ ಬಲವಾದ ಪ್ರಭಾವವನ್ನು ಹೊಂದಿವೆ. ಏಕೆಂದರೆ ದೇಶವು ತನ್ನ ವಾರ್ಷಿಕ ಬಳಕೆಯ 70 ಪರ್ಸೆಂಟ್‌ರಷ್ಟು ಅಂದರೆ 23.5 ದಶಲಕ್ಷ ಟನ್ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ.

"ಅತಿದೊಡ್ಡ ಗ್ರಾಹಕರಲ್ಲಿ ಒಬ್ಬರಾದ ಚೀನಾದಲ್ಲಿ ಕಡಿಮೆ ಬೇಡಿಕೆಯು ಜಾಗತಿಕ ಮಾರುಕಟ್ಟೆಯಲ್ಲಿ ಮತ್ತು ಏಕಕಾಲದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬೆಲೆಗಳ ಕುಸಿತಕ್ಕೆ ಕಾರಣವಾಗಿದೆ" ಎಂದು ಅದಾನಿ ವಿಲ್ಮಾರ್‌ನ ಉಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಂಗ್ಶು ಮಲ್ಲಿಕ್ ಹೇಳಿದರು.
ಪಾಮ್ ಆಯಿಲ್ ಮತ್ತು ಸೋಯಾಬೀನ್ ಎಣ್ಣೆಗೆ ಗ್ರಾಹಕರು 10 ಪರ್ಸೆಂಟ್‌ರಷ್ಟು ಕಡಿಮೆ ಪಾವತಿಸುತ್ತಾರೆ. ಅಂದರೆ ಪಾಮ್ ಆಯಿಲ್ ಮತ್ತು ಸೋಯಾಬೀನ್ ಎಣ್ಣೆಯು ಲೀಟರ್‌ಗೆ 8ರುಪಾಯಿ ತಗ್ಗಲಿದೆ. ಇನ್ನು ಸೂರ್ಯಕಾಂತಿ ಎಣ್ಣೆ(ಸನ್‌ಫ್ಲವರ್ ಆಯಿಲ್) 7 ಪರ್ಸೆಂಟ್ ಕಡಿಮೆ ಆಗುವ ಸಾಧ್ಯತೆಯಿದ್ದು, ಲೀಟರ್‌ಗೆ ಐದು ರುಪಾಯಿ ಕಡಿಮೆಯಾಗಲಿದೆ ಎಂದು ಮಲ್ಲಿಕ್ ಹೇಳಿದ್ದಾರೆ.
ಬ್ರಾಂಡೆಡ್ ಸೋಯಾಬೀನ್ ಮತ್ತು ತಾಳೆ ಎಣ್ಣೆಯ ಪ್ರಸ್ತುತ ಸಗಟು ಬೆಲೆ ಲೀಟರ್‌ಗೆ 78 ರುಪಾಯಿ, ಸೂರ್ಯಕಾಂತಿ ಎಣ್ಣೆಯ ಬೆಲೆ ಲೀಟರ್‌ಗೆ 82 ರುಪಾಯಿ. "ವಿಶ್ವದ ಇತರ ಪ್ರದೇಶಗಳಲ್ಲಿ ಕೊರೊನಾವೈರಸ್ ಹರಡುವುದರೊಂದಿಗೆ ನಾವು ಲೀಟರ್‌ಗೆ 3 ರುಪಾಯಿಗಳಷ್ಟು ಬೆಲೆ ಇಳಿಕೆ ನಿರೀಕ್ಷಿಸಬಹುದು" ಎಂದು ಮಲ್ಲಿಕ್ ಹೇಳಿದರು.
ಹೊಸ ಬೆಲೆಯು ಒಂದು ವಾರದಲ್ಲಿ ಪ್ಯಾಕ್‌ಗಳ ಮೇಲೆ ಪ್ರಿಂಟ್ ಮಾಡಲಾಗುವುದು ಎಂದು ಹೇಳಲಾಗಿದೆ.


Click it and Unblock the Notifications