ರೈತರಿಗೆ ಸಿಹಿಸುದ್ದಿ.. ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು( ಮೇ.27 ಸೋಮವಾರ) ಕೊಬ್ಬರಿ ಬೆಲೆ ಕ್ವಿಂಟಲ್‌ಗೆ 1,000 ರೂ.ವರೆಗೂ ಏರಿಕೆಯಾಗಿದೆ.ಬೆಲೆ ಏರಿಕೆಯಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಹಾಗಿದ್ರೆ ಇಂದು ಕೊಬ್ಬರಿಯ ರೇಟ್ ಎಷ್ಟು..? ಏರಿಕೆಗೆ ಕಾರಣಗಳು ಏನು ಇರಬಹುದು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಇಂದು ಕೊಬ್ಬರಿ ಬೆಲೆ ಏರಿಕೆಯಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಕೊಬ್ಬರಿ ಧಾರಣೆ ಸಾರ್ವಕಾಲಿಕ ದಾಖಲೆಯನ್ನು ಬರೆದ್ದು, 20,900 ರೂ.ವರೆಗೂ ಏರಿಕೆಯಾಗಿದೆ. ಉತ್ತಮ ಗುಣಮಟ್ಟದ ಕೊಬ್ಬರಿ ಕ್ವಿಂಟಲ್‌ಗೆ 20,900 ರೂ.ಗೆ ಮಾರಾಟವಾಗಿತ್ತಿದೆ. ಇನ್ನೂ ಪ್ರಮಾಣಿತ ಉತ್ಪನ್ನವು 20,500 ರೂ.ಗೆ ಮಾರಾಟವಿದ್ದು,ತೆಂಗು ಬೆಳೆಗಾರರು ಇಂದು ಹೆಚ್ಚಿನ ಲಾಭವನ್ನು ಗಳಿಸುತ್ತಾರೆ.

ಇಂದು ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ 19,000 ರೂ.ಗೆ ತಲುಪಿದೆ 2014-15ರಲ್ಲಿ ದಾಖಲಾದ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಟಿ ಏರಿಕೆಯಗಿದೆ.
ಕೊಬ್ಬರಿ ಬೆಲೆ ಏರಿಕೆಗೆ ಕಾರಣವೇನು..?
ಕೊಬ್ಬರಿ ಬೆಲೆ ಏರಿಕೆಯಿಂದಾಗಿ ತೆಂಗು ಬೆಳೆಗಾರಿಗೆ ಸಂತಸ ತಂದಿದೆ. ತಿಪಟೂರು APMC ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಿಂದಾಗಿ ರೈತರು ಹೆಚ್ಚು ಕೊಬ್ಬರಿಯನ್ನು ಮಾರುಕಟ್ಟೆಯಲ್ಲಿ ಮಾರಾಟವನ್ನು ಮಾಡುತ್ತಿದ್ದಾರೆ.ಇತ್ತೀಚಿಗೆ ಎಳೆನೀರು ಬೆಲೆ ಏರಿಕೆಯಿಂದ ತೆಂಗುವಿನ ಇಳುವರಿ ಕಡಿಮೆಯಾಗಿತ್ತು. ಆಗ ತೆಂಗಿನಕಾಯಿ ಬೆಲೆ ಕೂಡ ಏರಿಕಯಾಗಿತ್ತು.
ಕೊಬ್ಬರಿ ಮಾರುಕಟ್ಟೆಯಲ್ಲಿ ಕಳೆದ ವಾರದಲ್ಲಿ ಮೂರು ದಿನ (ಸೋಮವಾರ, ಬುಧವಾರ, ಶನಿವಾರ) ಟೆಂಡರ್ ಪ್ರಕ್ರಿಯೆ ನಡೆಯುತ್ತಿತ್ತು. ನವೆಂಬರ್‌ನಿಂದ ವಾರದಲ್ಲಿ ಎರಡು ದಿನ (ಸೋಮವಾರ, ಗುರುವಾರ) ಹರಾಜು ನಡೆಯುತ್ತಿದೆ. ಜತೆಗೆ ಹರಾಜುದಾದರು ನೇರವಾಗಿ ಭಾಗವಹಿಸಲು ಅವಕಾಶ ನೀಡಿದೆ. ಇದರಿಂದ ಖರೀದಿದಾರರೇ ಬೆಲೆ ನಿಗದಿಪಡಿಸಿ ಖರೀದಿಸುತ್ತಿರುವುದು ಬೆಲೆ ಹೆಚ್ಚಳಕ್ಕೆ ದಾರಿಮಾಡಿಕೊಟ್ಟಂತೆ ಆಗಿದೆ.
ಹರಾಜು ವಿಧಾನದಲ್ಲಿ ಜಾರಿಗೊಂಡಿರುವ ಬದಲಾವಣೆಗಳು ಮತ್ತು ಕೊಬ್ಬರಿ ಉತ್ಪಾದನೆಯ ಹಿನ್ನಡೆಯು ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಕಾರಣವಾಗಿದೆ.
ಬೆಲೆ ಏರಿಕೆಗೆ ಕಾರಣವಾಗುವ ಮತ್ತೊಂದು ಪ್ರಮುಖವಾದ ಕಾರಣವೆಂದರೆ ತೆಂಗಿನಕಾಯಿ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆ. ತೆಂಗಿನ ಎಣ್ಣೆ, ತೆಂಗಿನ ನೀರು ಮತ್ತು ಇತರ ಉತ್ಪನ್ನಗಳು ಆರೋಗ್ಯ ಪ್ರಯೋಜನಗಳು ಹೆಚ್ಚಿನ ಅನುಕೂಲವಾಗುತ್ತದೆ ಆದರಿಂದ ಜನರು ಹೆಚ್ಚು ಖರೀದಿ ಮಾಡುತ್ತಾರೆ. ಇದರಿಂದ ಕೂಡ ಬೆಲೆ ಏರಿಕೆಯಾಗಿದೆ.
ಹವಾಮಾನ, ಕಾರ್ಮಿಕರ ಕೊರತೆ ಮತ್ತು ಲಾಜಿಸ್ಟಿಕ್ ಅಡೆತಡೆಗಳಂತಹ ಮೂಲ ಸಮಸ್ಯೆಗಳನ್ನುಗಳು ಬೆಲೆ ಏರಿಕೆಯ ಮೇಲೆ ಪ್ರಭಾವನ್ನು ಬೀರುತ್ತೇವೆ.
ತೆಂಗಿನಕಾಯಿ ದುಬಾರಿ
ರಾಜ್ಯದಲ್ಲಿ ಬೇಸಿಗೆ ಕಾಲದಲ್ಲಿ ಈ ಬಾರಿ ಎಳನೀರಿಗೆ ನಮ್ಮ ರಾಜ್ಯ ಹಾಗೂ ಬೇರೆ ರಾಜ್ಯಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಎಳನೀರು ಭರ್ಜರಿ ಮಾರಾಟವಾದ ಹಿನ್ನೆಲೆಯಲ್ಲಿ ಈಗ ತೆಂಗಿನಕಾಯಿಯ ಇಳುವರಿ ಕಡಿಮೆ ಆಗಿದೆ.ಹಾಗೂ ಸಾಲು ಸಾಲು ಹಬ್ಬಗಳು ಇತ್ತು. ಹಾಗಾಗಿ ತೆಂಗಿನಕಾಯಿಗೆ ಹೆಚ್ಚಿನ ಬೇಡಿಕೆ ಇದೆ ಇದರಿಂದ ತೆಂಗಿನ ಕಾಯಿ ಇಳಿವರಿ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ.
ರೈತರಿಗೆ ಲಾಭ
ಕೊಬ್ಬರಿಯ ಬೆಲೆ ಏರಿಕೆಯಿಂದ ತೆಂಗು ಬೆಳೆಗಾರರು ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ನೇರ ಪಾಲ್ಗೊಳ್ಳುವ ಮೂಲಕ ಅವರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಹೇಳಲು ಸಹಾಯಕವಾಗುತ್ತದೆ.
ಇಂದು ತಿಪಟೂರು APMC ಮಾರುಕಟ್ಟೆಯಲ್ಲಿ ಕೊಬ್ಬರಿಯ ಬೆಲೆ ಏರಿಕೆಯಾಗಲು ಆವಕದ ಕೊರತೆ, ಹರಾಜು ದಿನಗಳಲ್ಲಿ ಬದಲಾವಣೆ ಮತ್ತು ರೈತರು ನೇರ ಭಾಗವಹಿಸುವಿಕೆಯಿಂದಾಗಿ ಬೆಲೆ ಏರಿಕೆಯಾಗಿದೆ ಈ ಬೆಳವಣಿಯಿಂದಾಗಿ ರೈತರಿಗೆ ಉತ್ತಮ ಆದಾಯವನ್ನು ಕೊಬ್ಬರಿ ಬೆಲೆ ತಂದಿದೆ.
ತಿಪಟೂರು APMC ಕೊಬ್ಬರಿ ಬೆಲೆ ಬೆಲೆ ಎಷ್ಟಿದೆ..?
ಉತ್ತಮ ಗುಣಮಟ್ಟದ ಕೊಬ್ಬರಿ ಕ್ವಿಂಟಲ್‌ಗೆ 20,900 ರೂ.ಗಳು
ಗರಿಷ್ಠ ಬೆಲೆ: 19,500
ಮಾದರಿ ಬೆಲೆ: 18,500
ಈ ಬೆಲೆಗಳು ತಿಪಟೂರು APMC ಮಾರುಕಟ್ಟೆಯಲ್ಲಿ 27 ಮೇ 2025 ರಂದು ಹರಾಜು ಪ್ರಕ್ರಿಯೆಯಲ್ಲಿ ನಿರ್ಧಾರವಾದ ಬೆಲೆಗಳು ಆಗಿವೆ.


Click it and Unblock the Notifications