ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯು ಜನಸಾಮಾನ್ಯರನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿದೆ. ಅನೇಕ ರಾಜ್ಯಗಳು ಲಾಕ್‌ಡೌನ್ ಮೊರೆ ಹೋಗಿ. ಹೀಗಿರುವಾಗ ವಾಹನ ತಯಾರಕ ಕಂಪನಿಗಳು ತಮ್ಮ ಗ್ರಾಹಕರಿಗೆ ರಿಯಾಯಿತಿ ನೀಡಲು ಮುಂದಾಗಿವೆ.
ಇತರೆ ವಾಹನ ತಯಾರಕರಂತೆ ಇತ್ತೀಚೆಗೆ ಹ್ಯುಂಡೈ ಇಂಡಿಯಾ ಮೋಟಾರ್ಸ್ ತನ್ನ ಕಾರುಗಳ ವಾರೆಂಟಿ ಮತ್ತು ಸೇವಾ ಅವಧಿಯನ್ನು 2 ತಿಂಗಳವರೆಗೆ ಉಚಿತವಾಗಿ ವಿಸ್ತರಿಸುವುದಾಗಿ ಘೋಷಿಸಿದೆ.

ಹ್ಯುಂಡೈ ಮಾತ್ರವಲ್ಲದೆ, ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಟೊಯೋಟಾ ಮತ್ತು ಎಂಜಿ ಮೋಟಾರ್ ಸಹ ಗ್ರಾಹಕರ ಅನುಕೂಲಕ್ಕಾಗಿ ವಾರೆಂಟಿ ಮತ್ತು ಉಚಿತ ಸೇವಾ ಅವಧಿಯನ್ನು ವಿಸ್ತರಿಸಿದೆ. ಈಗ ಲಾಕ್‌ಡೌನ್ ಸಮಯದಲ್ಲಿ ವಾರೆಂಟಿ ಅವಧಿ ಮುಗಿದಿದ್ದರೆ, ಹ್ಯುಂಡೈ ಗ್ರಾಹಕರಿಗೆ ಹೆಚ್ಚುವರಿ 2 ತಿಂಗಳ ವಾರೆಂಟಿಯ ಪ್ರಯೋಜನವನ್ನು ನೀಡಲಾಗುತ್ತದೆ.
''ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಕಂಪನಿಯು ಕಠಿಣ ಅವಧಿಯನ್ನು ಎದುರಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ನಾವು ಯಾವಾಗಲೂ ನಮ್ಮ ಗ್ರಾಹಕರಿಗೆ ಸಹಾಯ ಮಾಡಲು ಮುಂದಾಗಿದ್ದೇವೆ. ಹ್ಯುಂಡೈ ಮೋಟಾರ್ಸ್ ದೇಶಾದ್ಯಂತ ವೈದ್ಯಕೀಯ ಆಮ್ಲಜನಕದ ವಿತರಣೆ ಮಾಡುವ ಮೂಲಕ ಜೀವ ಉಳಿಸುವ ಕಾರ್ಯಾಚರಣೆಯನ್ನು ನಡೆಸುತ್ತಿದೆ'' ಎಂದು ಕಂಪನಿ ತಿಳಿಸಿದೆ
ಹ್ಯುಂಡೈ ಮೋಟಾರ್ಸ್ ಗ್ರಾಹಕರಿಗೆ ಖರೀದಿ ಅನುಭವವನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿದೆ. ಈಗ ಗ್ರಾಹಕರು ಮನೆಯಲ್ಲಿ ಕುಳಿತುಕೊಳ್ಳುವಾಗ ತಮ್ಮ ನೆಚ್ಚಿನ ಹ್ಯುಂಡೈ ಕಾರನ್ನು ಮನೆಯಿಂದ ಬುಕ್ ಮಾಡಬಹುದು.


Click it and Unblock the Notifications