ಕೇಂದ್ರ ಸರ್ಕಾರದಿಂದ 'ಕೊರೊನಾ ಚಾಲೆಂಜ್'; ಗೆದ್ದವರಿಗೆ ಲಕ್ಷ ಬಹುಮಾನ

ಕೊರೊನಾ ವೈರಾಣುವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊಸ ಆಲೋಚನೆಗಳು ಮತ್ತು ಸಲಹೆಗಳನ್ನು ಜನರಿಂದ ಆಹ್ವಾನಿಸಿದೆ. ಇವುಗಳನ್ನು ಸಲ್ಲಿಸಲು ಮಾರ್ಚ್ 31, 2020 ಕೊನೆ ದಿನವಾಗಿದೆ. ಮೊದಲ ಬಹುಮಾನವಾಗಿ 1 ಲಕ್ಷ ರುಪಾಯಿ, ಎರಡನೇ ಬಹುಮಾನ 50 ಸಾವಿರ ರುಪಾಯಿ ಹಾಗೂ ಮೂರನೇ ಬಹುಮಾನವಾಗಿ 25 ಸಾವಿರ ರುಪಾಯಿ ನೀಡಲಾಗುವುದು.

COVID- 19 ಸಲ್ಯೂಷನ್ ಚಾಲೆಂಜ್ ಅನ್ನು ಮೋದಿ ನೇತೃತ್ವದ ಸರ್ಕಾರ ಆಯೋಜಿಸಿದೆ. ಇದರಲ್ಲಿ ಭಾಗವಹಿಸಿ, ಕೂರೊನಾ ವೈರಸ್ ಹರಡದಂತೆ ತಡೆಯಲು ಪರಿಣಾಮಕಾರಿಯಾಗಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಅಭಿಯಾನವನ್ನು ಆರಂಭಿಸಿದೆ.

ಕೇಂದ್ರ ಸರ್ಕಾರದಿಂದ 'ಕೊರೊನಾ ಚಾಲೆಂಜ್'; ಗೆದ್ದವರಿಗೆ ಲಕ್ಷ ಬಹುಮಾನ

ಅಂದ ಹಾಗೆ ಕೇಂದ್ರ ಸರ್ಕಾರ ಎರಡು ಅಭಿಯಾನ ಆರಂಭಿಸಿದೆ. ಕೊರೊನಾ ವಿರುದ್ಧ ಹೋರಾಡಲು ಆಲೋಚನೆ ಮತ್ತು ಸಲಹೆ ಹಂಚಿಕೊಳ್ಳಿ ಮತ್ತು COVID- 19 ಸಲ್ಯೂಷನ್ ಚಾಲೆಂಜ್ -ಇವೇ ಆ ಎರಡು ಅಬಿಯಾನ. ತಮ್ಮ ಆಲೋಚನೆ, ಸಲಹೆಯನ್ನು ಹಂಚಿಕೊಳ್ಳಲು ಬಯಸುವವರು ವೆಬ್ ಸೈಟ್ ವಿಳಾಸ: https://www.mygov.in/group-issue/share-your-ideas-suggestions-help-fight-coronavirus/?utm_source=webcampaign&group_issue&285571 ಸಂಪರ್ಕಿಸಬಹುದು.

ಇದರಲ್ಲಿ ಏಪ್ರಿಲ್ 30ನೇ ತಾರೀಕಿನ ತನಕ ಅವಕಾಶ ಇದೆ. ಅರ್ಜಿದಾರರು ವೈಯಕ್ತಿಕವಾಗಿ ಅಥವಾ ಸ್ಟಾರ್ಟ್ ಅಪ್ ಗಳು ಕೂಡ ಆಗಿರಬಹುದು. COVID- 19 ಸಲ್ಯೂಷನ್ ಚಾಲೆಂಜ್ ಅಡಿಯಲ್ಲಿ ರೋಗಿಯನ್ನು ಪ್ರಯೋಗಕ್ಕೆ ಬಳಸುತ್ತಿದ್ದಲ್ಲಿ ಕಾನೂನುಬದ್ಧವಾಗಿ ಅನುಮತಿ ಪಡೆದುಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+