ಕೊರೊನಾವೈರಸ್ ವಿಶ್ವದ ಆರ್ಥಿಕತೆಗೆ ಭಾರೀ ಪ್ರಮಾಣದಲ್ಲಿ ಹೊಡೆತ ನೀಡಿದ್ದು, ಇಡೀ ಜಗತ್ತೇ ತತ್ತರಿಸಿ ಹೋಗಿದೆ. ವ್ಯಾಪಾರ-ವಹಿವಾಟು ಕೊರೊನಾಯಿಂದಾಗಿ ನೆಲಕಚ್ಚಿವೆ. ಲಾಕ್‌ಡೌನ್ ಪರಿಣಾಮ ಭಾರತದ ರಫ್ತು ಕ್ಷೇತ್ರದಲ್ಲಿ ಸುಮಾರು 15 ಮಿಲಿಯನ್(1.5 ಕೋಟಿ) ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ ಎಂದು ರಫ್ತುದಾರರ ಉನ್ನತ ಸಂಸ್ಥೆ ಎಫ್ಐಇಒ ತಿಳಿಸಿದೆ.
ಕೊರೊನಾ ಲಾಕ್‌ಡೌನ್‌ನಿಂದಾಗಿ ರವಾನೆ ಮತ್ತು ಸಾಗಾಣೆಯನ್ನು ಮುಂದೂಡುವುದರಿಂದ ಹಣದ ಹರಿವು ಸಂಪೂರ್ಣವಾಗಿ ನಿಂತು ಹೋಗಿದೆ. ಇದರಿಂದ ರಫ್ತುದಾರರ ನಿಧಿ ದ್ರವ್ಯತೆಯ ಸ್ಥಾನದ ಮೇಲೆ ಪರಿಣಾಮ ಬೀರಿದೆ. ಇದರ ಜೊತೆಗೆ ಈ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಪರಿಹಾರ ಪ್ಯಾಕೇಜ್ ತಕ್ಷಣ ಘೋಷಿಸಬೇಕು ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶರದ್ ಕುಮಾರ್ ಮನವಿ ಮಾಡಿದ್ದಾರೆ.

ರಫ್ತುದಾರರಿಗೆ ಬಹಳ ಕಡಿಮೆ ಅವಕಾಶಗಳು ಉಳಿದಿವೆ. ಕಾರ್ಖಾನೆಗಳಿಗೆ ಕನಿಷ್ಠ ಉದ್ಯೋಗಿಗಳೊಂದಿಗೆ ಕೆಲಸ ಮಾಡಲು ಅವಕಾಶ ಸಿಗದೆ ಹೋದರೆ ಉದ್ಯೋಗ ನಷ್ಟ ಅನುಭವಿಸಬೇಕಾಗುತ್ತದೆ. ಜೊತೆಗೆ ಕಾರ್ಖಾನೆಗಳನ್ನು ಮುಚ್ಚಬೇಕಾಗುತ್ತದೆ ಎಂದರು.
ರಫ್ತು ಕ್ಷೇತ್ರದಲ್ಲಿ 50 ಪರ್ಸೆಂಟ್‌ನಷ್ಟು ಹೆಚ್ಚು ಆರ್ಡರ್ ಗಳನ್ನು ರದ್ದುಪಡಿಸುವುದು ಭವಿಷ್ಯದಲ್ಲಿ ರಫ್ತು ಕ್ಷೇತ್ರದ ಮೇಲೆ ಕಾರ್ಮೋಡ ಕವಿಯುವ ಮುನ್ಸೂಚನೆ ಸಿಗುತ್ತಿದ್ದು, ಇದರ ಜೊತೆಗೆ ಉದ್ಯೋಗಗಳು ನಷ್ಟವಾಗಲಿದೆ ಎಂದರು.
ಲಾಕ್‌ಡೌನ್‌ನಿಂದ ಆಭರಣಗಳು, ಚರ್ಮ, ಕರಕುಶಲ ವಸ್ತುಗಳು, ಎಂಜಿನಿಯರಿಂಗ್ ಮತ್ತು ಜವಳಿ ಸೇರಿದಂತೆ ಹಲವು ಕ್ಷೇತ್ರಗಳು ತೀವ್ರವಾಗಿ ನಷ್ಟಕ್ಕೆ ತುತ್ತಾಗುತ್ತವೆ. ನಾವು ಚೀನಾ ಮಾರುಕಟ್ಟೆಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಹೀಗಾಗಿ ಮತ್ತೆ ಚೀನಾವನ್ನು ಅವಲಂಭಿಸದಿರಬೇಕಾದರೆ, ನಾವು ಈಗಲೇ ನಮ್ಮಲ್ಲಿ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು ಎಂದು ರಫ್ತು ಸಂಸ್ಥೆಗಳ ಒಕ್ಕೂಟ ಒತ್ತಾಯಿಸಿದೆ.


Click it and Unblock the Notifications