For Quick Alerts
ALLOW NOTIFICATIONS  
For Daily Alerts

ಚೀನಾದ ಬೆಲ್ಟ್‌ ಆ್ಯಂಡ್ ರೋಡ್ ಯೋಜನೆ ಮೇಲೆ ಕೊರೊನಾ ಕರಿನೆರಳು

|

ಚೀನಾದ ಮಹತ್ವಾಕಾಂಕ್ಷಿ ಬೆಲ್ಟ್ ಆ್ಯಂಡ್ ರೋಡ್(ಬಿಆರ್‌ಐ) ಯೋಜನೆ ಮೇಲೆ ಕೊರೊನಾವೈರಸ್ ಕರಿನೆರಳು ಬಿದ್ದಿದ್ದು, ಚೀನಾವನ್ನು ಚಿಂತೆಗೀಡು ಮಾಡಿದೆ.

ಬೆಲ್ಟ್ ಆ್ಯಂಡ್ ರೋಡ್ ಹಾದು ಹೋಗುವ ರಾಷ್ಟ್ರಗಳು ಕೊರೊನಾವೈರಸ್ ಕಾರಣದಿಂದಾಗಿ ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿವೆ. ಚೀನಾ ಕೂಡ ಈಗಾಗಲೇ ಆರ್ಥಿಕ ಹಿಂಜರಿತದ ಬಿಸಿ ಅನುಭವಿಸುತ್ತಿದೆ. ಇದರಿಂದಾಗಿ ಬಿಆರ್‌ಐ ಯೋಜನೆಯ ವೇಗವೂ ಕುಂಠಿತಗೊಂಡಿದೆ.

ಚೀನಾದ ಬೆಲ್ಟ್‌ ಆ್ಯಂಡ್ ರೋಡ್ ಯೋಜನೆ ಮೇಲೆ ಕೊರೊನಾ ಕರಿನೆರಳು

ಈ ಕುರಿತು ಸ್ವತಃ ಒಪ್ಪಿಕೊಂಡಿರುವ ಚೀನಾದ ವಿದೇಶಾಂಗ ಸಚಿವ ವಾಂಗ್ ವೈ, ಬೆಲ್ಟ್ ಆ್ಯಂಡ್ ರೋಡ್(ಬಿಆರ್‌ಐ) ಯೋಜನೆ ಹಿನ್ನಡೆ ಅನುಭವಿಸುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.
ಆದರೆ ಈ ಹಿನ್ನಡೆ ತಾತ್ಕಾಲಿಕವಾಗಿದ್ದು, ಆದಷ್ಟು ಬೇಗ ಈ ಯೋಜನೆಯ ವೇಗವನ್ನು ಚೀನಾ ಹೆಚ್ಚಿಸಲಿದೆ ಎಂದು ವಾಂಗ್ ವೈ ಸ್ಪಷ್ಟಪಡಿಸಿದ್ದಾರೆ.

ಕೊರೊನಾವೈರಸ್ ಹಾವಳಿಯಿಂದಾಗಿ ದೇಶದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಗಮನ ಕೊಡಬೇಕಿದೆ. ಇದೇ ಕಾರಣಕ್ಕೆ ಬೆಲ್ಟ್ ಆ್ಯಂಡ್ ರೋಡ್ ಯೋಜನೆಗೆ ಹೆಚ್ಚಿನ ಹಣ ವ್ಯಯ ಮಾಡುವುದು ಹೊರೆಯಾಗಲಿದೆ ಎಂದು ವಾಂಗ್ ವೈ ಹೇಳಿದ್ದಾರೆ.

ಒಟ್ಟಿನಲ್ಲಿ ನೆಲ, ಜಲ ಮಾರ್ಗವಾಗಿ ವಿಶ್ವದ ವಿವಿಧ ದೇಶಗಳನ್ನು ಸಂಪರ್ಕಿಸಬಲ್ಲ ಬೃಹತ್ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯನ್ನು, ಚೀನಾ ತಾತ್ಕಾಲಿಕವಾಗಿಯಾದರೂ ತಡೆ ಹಿಡಿದಿರುವುದು ಸ್ಪಷ್ಟ. ಬೆಲ್ಟ್ ಆ್ಯಂಡ್ ರೋಡ್ ಯೋಜನೆ ಭಾಗವಾಗಿ ಕಳೆದ ಏಳು ವರ್ಷಗಳಲ್ಲಿ ಚೀನಾ 138 ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 2,000ಕ್ಕೂ ಅಧಿಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.

ಇದೇ ಅವಧಿಯಲ್ಲಿ ಬಿಆರ್‌ಐ ಪಾಲುದಾರ ರಾಷ್ಟ್ರಗಳೊಂದಿಗಿನ ಚೀನಾದ ವ್ಯಾಪಾರ 7.8 ಟ್ರಿಲಿಯನ್ ಡಾಲರ್‌ಗೂ ಅಧಿಕವಾಗಿದ್ದು, ಈ ರಾಷ್ಟ್ರಗಳಲ್ಲಿ ಚೀನಾದ ನೇರ ಹೂಡಿಕೆ 110 ಬಿಲಿಯನ್ ಡಾಲರ್‌ಗಳನ್ನು ತಲುಪಿದೆ ಎನ್ನಲಾಗಿದೆ.

ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು 2013ರಲ್ಲಿ ಅಧಿಕಾರಕ್ಕೆ ಬಂದಾಗ ಬಿಆರ್‌ಐ ಅನ್ನು ಪ್ರಾರಂಭಿಸಿದರು. ಇದು ಆಗ್ನೇಯ ಏಷ್ಯಾ, ಮಧ್ಯ ಏಷ್ಯಾ, ಕೊಲ್ಲಿ ಪ್ರದೇಶ, ಆಫ್ರಿಕಾ ಮತ್ತು ಯುರೋಪ್‌ಗಳನ್ನು ಭೂ ಮತ್ತು ಸಮುದ್ರ ಮಾರ್ಗಗಳ ಜಾಲದೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಆದರೆ ಈ ಯೋಜನೆಯನ್ನು ಅಮೆರಿಕಾದ ಟ್ರಂಪ್ ಆಡಳಿತವು ಟೀಕಿಸುತ್ತಲೇ ಬಂದಿದೆ.

English summary

Corona Impact China Belt And Road Initiative Affected

China on Sunday admitted that its multi-billion dollar Belt and Road Initiative (BRI) has been affected by the coronavirus pandemic
Story first published: Monday, May 25, 2020, 15:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X