ಕೊರೊನಾ ಎಫೆಕ್ಟ್: ಗೂಗಲ್‌ನಲ್ಲಿ 1 ವರ್ಷ ಹೊಸ ಉದ್ಯೋಗಿಗಳ ನೇಮಕಾತಿಗೆ ತಡೆ

ಕೊರೊನಾವೈರಸ್ ಸೋಂಕು ವಿಶ್ವದ ಬಹುತೇಕ ಎಲ್ಲಾ ಉದ್ಯಮಗಳ ಮೇಲೂ ಪರಿಣಾಮ ಬೀರಿದ್ದು, ಕೋಟ್ಯಾಂತರ ಉದ್ಯೋಗ ನಷ್ಟದ ಜೊತೆಗೆ ಹೊಸ ನೇಮಕಾತಿಗೂ ಅಡ್ಡಗಾಲಿಟ್ಟಿದೆ. ಬಹುತೇಕ ಕಂಪನಿಗಳು ವೇತನ, ಉದ್ಯೋಗ ಕಡಿತದ ಜೊತೆಗೆ ಹೊಸ ಉದ್ಯೋಗಿಗಳ ನೇಮಕಾತಿಗೂ ತಡೆ ನೀಡಿದೆ. ಇದೇ ಸಾಲಿಗೆ ಗೂಗಲ್ ಕೂಡ ಸೇರಿದೆ.

2019 ರಲ್ಲಿ 20,000 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದ್ದ ಗೂಗಲ್ ಸಂಸ್ಥೆ ಈ ವರ್ಷ ಅಷ್ಟೇ ಸಂಖ್ಯೆಯ ನೇಮಕಾತಿಗೆ ಯೋಜನೆ ರೂಪಿಸಿತ್ತು. ಆದರೆ ಕೊರೊನಾ ಪರಿಣಾಮ ಒಂದು ವರ್ಷಗಳ ಕಾಲ ಹೊಸ ನೇಮಕಾತಿಗಳಿಗೆ ಗೂಗಲ್ ತಡೆ ಹಿಡಿದಿದೆ.

ಗೂಗಲ್‌ನಲ್ಲಿ 1 ವರ್ಷ ಹೊಸ ಉದ್ಯೋಗಿಗಳ ನೇಮಕಾತಿಗೆ ತಡೆ

ಹೊಸ ನೇಮಕಾತಿಗಳ ಬದಲಾಗಿ ಡಾಟಾ ಕೇಂದ್ರಗಳು, ಮಾರುಕಟ್ಟೆ ಮುಂತಾದ ಆಯಕಟ್ಟಿನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಗೂಗಲ್ ನಿರ್ಧರಿಸಿದೆ. "ಹೊಸ ನೇಮಕಾತಿಗಳನ್ನು ಕಡಿಮೆ ಮಾಡುತ್ತೇವೆ. ಆದರೆ ಆಯಕಟ್ಟಿನ ಕ್ಷೇತ್ರಗಳತ್ತ ಹೆಚ್ಚು ಗಮನ ಹರಿಸುತ್ತೇವೆ ಎಂದು ಗೂಗಲ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರಾಹಕರು ಹಾಗೂ ಉದ್ಯಮಗಳು ಗೂಗಲ್ ಮೇಲೆ ಅವಲಂಬಿತವಾಗಿರುವ ಕ್ಷೇತ್ರಗಳತ್ತ ಗಮನ ಹರಿಸುತ್ತೇವೆ ಎಂದು ಸುಂದರ್ ಪಿಚ್ಚೈ ಹೇಳಿದ್ದಾರೆ. ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ (ಎಸ್ಎಂಬಿಎಸ್) ಆರೋಗ್ಯ ಸಂಸ್ಥೆಗಳಿಗೆ, ಆರೋಗ್ಯ ಸಿಬ್ಬಂದಿಗಳಿಗೆ 800 ಮಿಲಿಯನ್ ನೆರವು ನೀಡುವುದಾಗಿ ಕಳೆದ ತಿಂಗಳು ಸುಂದರ್ ಪಿಚ್ಚೈ ಘೋಷಿಸಿದ್ದರು.

ಜೊತೆಗೆ ಭಾರತ ಮೂಲದವರೇ ಆದ ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಅವರು ದೇಶಕ್ಕೆ 5 ಕೋಟಿ ದೇಣಿಗೆ ನೀಡಿದ್ದಾರೆ. ಆನ್‌ಲೈನ್ ಲಾಭರಹಿತ ವೇದಿಕೆ 'ಗೀವ್ ಇಂಡಿಯಾ' ಮೂಲಕ 5 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+