ಮೇ 4, 2020ರಿಂದ ಮತ್ತೆ ಎರಡು ವಾರ ಲಾಕ್ ಡೌನ್ ಅವಧಿ ವಿಸ್ತರಣೆ

ಮೇ 4, 2020ರಿಂದ ಮತ್ತೆರಡು ವಾರ ಲಾಕ್ ಡೌನ್ ವಿಸ್ತರಣೆ ಮಾಡಿ ಗೃಹ ವ್ಯವಹಾರಗಳ ಸಚಿವಾಲಯವು ಆದೇಶ ನೀಡಿದೆ. ವಿಪತ್ತು ನಿರ್ವಹಣೆ ಕಾಯ್ದೆ, 2005ರ ಅಡಿಯಲ್ಲಿ ಈ ಆದೇಶವನ್ನು ನೀಡಲಾಗಿದೆ. ದೇಶದ ಕೆಂಪು, ಹಸಿರು ಹಾಗೂ ಕಿತ್ತಳೆ ವಲಯಗಳಲ್ಲಿ ವಿವಿಧ ಚಟುವಟಿಕೆಗಳನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಹೊಸ ಮಾರ್ಗದರ್ಶಿ ಸೂತ್ರವನ್ನು ನೀಡಲಿದೆ.

ಹೊಸ ಮಾರ್ಗದರ್ಶಿ ಸೂತ್ರದಲ್ಲಿ ಕಿತ್ತಳೆ ಮತ್ತು ಹಸಿರು ವಲಯದಲ್ಲಿ ಬರುವಂಥ ಪ್ರದೇಶಕ್ಕೆ ದೊಡ್ಡ ಮಟ್ಟದಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಮಾಹಿತಿ ನೀಡಿದೆ. ಏಪ್ರಿಲ್ 30, 2020ರಂದು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು ಮತ್ತು ಅಹಮದಾಬಾದ್ ನಗರಗಳನ್ನು ಕೆಂಪು ವಲಯ ಎಂದು ಘೋಷಿಸಲಾಗಿತ್ತು.

ಇದೀಗ ಎರಡನೇ ಹಂತದ ಲಾಕ್ ಡೌನ್ ಮೇ 3ನೇ ತಾರೀಕು ಮುಗಿದ ಮೇಲೆ, 4ನೇ ತಾರೀಕಿನಿಂದ ಮತ್ತೆ ಎರಡು ವಾರಗಳ ಕಾಲ ವಿಸ್ತರಣೆ ಮಾಡಲಾಗಿದೆ. ನಿರ್ಬಂಧಿತ ಪ್ರದೇಶಗಳು, ಅಪಾಯಕಾರಿ ಸ್ಥಳಗಳು ಎಂದು ವಿಂಗಡಣೆ ಮಾಡಿದ ಕಡೆ ಗಂಭೀರವಾದ ನಿಗಾ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.

ಮೇ 4, 2020ರಿಂದ ಮತ್ತೆ ಎರಡು ವಾರ ಲಾಕ್ ಡೌನ್ ಅವಧಿ ವಿಸ್ತರಣೆ

ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 19 ಹಾಗೂ 14 ಕೆಂಪು ವಲಯಗಳು ಇದ್ದು, ಅತಿ ಹೆಚ್ಚು ಕೆಂಪು ವಲಯ ಇರುವ ರಾಜ್ಯಗಳಾಗಿವೆ. ಆ ನಂತರ ತಮಿಳುನಾಡಿನಲ್ಲಿ 12, ದೆಹಲಿಯ 11 ಜಿಲ್ಲೆಗಳನ್ನೂ ಕೆಂಪು ವಲಯ ಎಂದು ಘೋಷಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+