ಇಪಿಎಫ್ ವಿಥ್ ಡ್ರಾ ನಿಯಮದ ಪ್ರಕಾರ ಈಗ ಎಷ್ಟು ವಿಥ್ ಡ್ರಾ ಮಾಡಬಹುದು?

ಕೊರೊನಾ ವೈರಾಣು ಹಬ್ಬದಿರುವಂತೆ ಸರ್ಕಾರದಿಂದ 21 ದಿನಗಳ ಲಾಕ್ ಡೌನ್ ಘೋಷಿಸಿರುವುದು ನಿಮಗೆಲ್ಲ ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಭವಿಷ್ಯ ನಿಧಿ ವಿಥ್ ಡ್ರಾಗೆ ಸಂಬಂಧಿಸಿದಂತೆ ಹೊಸದಾಗಿ ವಿನಾಯ್ತಿ ನೀಡಲಾಗಿದೆ. ಅದರರ್ಥ EPFO ಸದಸ್ಯರು ತಮ್ಮ ಅಗತ್ಯಗಳಿಗೆ ಹಣ ವಿಥ್ ಡ್ರಾ ಮಾಡಬಹುದು. ಆದರೆ ಎಷ್ಟು ಹಣ ತೆಗೆದುಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.

ಮೂಲವೇತನ+ ತುಟ್ಟಿ ಭತ್ಯೆ (ಡಿಎ) ಸೇರಿ ಮೂರು ತಿಂಗಳ ಮೊತ್ತ (ಪೂರ್ತಿ ವೇತನ ಅಲ್ಲ) ಅಥವಾ ಪಿಎಫ್ ಒಟ್ಟು ಮೊತ್ತದ ಶೇಕಡಾ 75ರಷ್ಟು ಇವೆರಡರಲ್ಲಿ ಯಾವ ಮೊತ್ತವು ಕಡಿಮೆಯೋ ಅಷ್ಟನ್ನು ವಿಥ್ ಡ್ರಾ ಮಾಡಬಹುದು. ಆ ಮುಂಗಡವನ್ನು ಹಿಂತಿರುಗಿಸಬೇಕು ಅಂತೇನೂ ಇಲ್ಲ. ಇದಕ್ಕಾಗಿ ಇಪಿಎಫ್ ಯೋಜನೆ 1952ರಲ್ಲಿ ಬದಲಾವಣೆ ಮಾಡಲಾಗಿದೆ.

ಇಪಿಎಫ್ ವಿಥ್ ಡ್ರಾ ನಿಯಮದ ಪ್ರಕಾರ ಈಗ ಎಷ್ಟು ವಿಥ್ ಡ್ರಾ ಮಾಡಬಹುದು?

ಅನಾರೋಗ್ಯ, ಮನೆ ಖರೀದಿ ಸೇರಿದಂತೆ ಇತರ ಕಾರಣಗಳಿಗಾಗಿ ಮರುಪಾವತಿ ಮಾಡುವ ಅಗತ್ಯ ಇಲ್ಲದೆ ಪಿಎಫ್ ಹಣ ವಿಥ್ ಡ್ರಾ ಮಾಡಬಹುದಿತ್ತು. ಆದರೆ ಕೊರೊನಾ ವ್ಯಾಪಕವಾಗಿ ಹರಡಿರುವುದರಿಂದ ತುರ್ತು ಹಣಕಾಸಿನ ಅಗತ್ಯಗಳಿಗೆ ಸಮಸ್ಯೆ ಆಗಬಾರದು ಎಂದು ಸರ್ಕಾರದಿಂದ ಈ ನಿರ್ಧಾರ ಮಾಡಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+