ಲಾಕ್‌ಡೌನ್‌ನಿಂದ ಮತ್ತಷ್ಟು ವಿನಾಯಿತಿ: ಯಾವುದಕ್ಕೆ ಅನುಮತಿ? ಏನೆಲ್ಲಾ ಬಂದ್?

ಕೊರೊನಾಸೋಂಕು ತಡೆಗಟ್ಟಲು ಕೈಗೊಂಡಿರುವ ಲಾಕ್‌ಡೌನ್‌ ವಿಚಾರವಾಗಿ ಕೇಂದ್ರ ಸರ್ಕಾರವು ಶನಿವಾರ ಮತ್ತಷ್ಟು ವಿನಾಯಿತಿ ನೀಡಿದೆ. ಶುಕ್ರವಾರ ಮದ್ಯರಾತ್ರಿಯಿಂದಲೇ ಗ್ರೀನ್ ಜೋನ್ ಪ್ರದೇಶಗಳಲ್ಲಿನ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಏಪ್ರಿಲ್ 20ರಂದು ಕೆಲವು ಕ್ಷೇತ್ರಗಳಿಗೆ ಲಾಕ್‌ಡೌನ್‌ನ ವೇಳೆ ವಿನಾಯಿತಿ ನೀಡಲಾಗಿತ್ತು. ಇದೀಗ ಮತ್ತೊಂದು ಹಂತದಲ್ಲಿ ಲಾಕ್‌ಡೌನ್‌ ವಿನಾಯಿತಿ ಕೊಡಲಾಗಿದೆ. ಏನೆಲ್ಲಾ ಇರಲಿದೆ? ಯಾವುದಕ್ಕೆ ಲಾಕ್‌ಡೌನ್ ಮುಂದುವರಿಯಲಿದೆ ಎಂಬುದು ಈ ಕೆಳಕಂಡಂತಿದೆ.

ಪುರಸಭೆ ವ್ಯಾಪ್ತಿಯ, ಹೊರಗಿನ ಕಾಂಪ್ಲೆಕ್ಸ್ ತೆರೆಯಲು ಅನುಮತಿ

ಪುರಸಭೆ ವ್ಯಾಪ್ತಿಯ, ಹೊರಗಿನ ಕಾಂಪ್ಲೆಕ್ಸ್ ತೆರೆಯಲು ಅನುಮತಿ

ಶನಿವಾರ (ಏಪ್ರಿಲ್ 25)ರಂದು ಕೇಂದ್ರ ಸರ್ಕಾರ ಲಾಕ್ ಡೌನ್ ನಡುವೆಯೂ ಅಧಿಕೃತ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಿದೆ. ಪುರಸಭೆ ವ್ಯಾಪ್ತಿಯೊಳಗಿನ ಹಾಗೂ ಪುರಸಭೆ ವ್ಯಾಪ್ತಿ ಹೊರಗಿನ ಸ್ಥಳೀಯ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ ಗಳನ್ನು ತೆರೆಯಲು ಅವಕಾಶ ನೀಡಿದೆ ಎಂದು ವರದಿ ತಿಳಿಸಿದೆ. ಆದರೆ ಪುರಸಭೆ ವ್ಯಾಪ್ತಿಯೊಳಗಿನ ಮಾರುಕಟ್ಟೆ ಕಾಂಪ್ಲೆಕ್ಸ್ ತೆರೆಯಲು ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಹಾಟ್ ಸ್ಪಾಟ್ ಹಾಗೂ ನಿಯಂತ್ರಿತ ಪ್ರದೇಶಗಳಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿರುವ ಅಂಗಡಿಗಳು, ಮಲ್ಟಿ ಬ್ರಾಂಡ್ ಮತ್ತು ಸಿಂಗಲ್ ಬ್ರಾಂಡ್ ಮಾಲ್ ಗಳನ್ನು ತೆರೆಯಲು ಅವಕಾಶ ಇಲ್ಲ.

ಇವೆಲ್ಲಾ ತೆರೆಯಲಿದೆ!

ಇವೆಲ್ಲಾ ತೆರೆಯಲಿದೆ!

1)ಪುರಸಭೆ ವ್ಯಾಪ್ತಿಯ ಸ್ಥಳೀಯ ಅಂಗಡಿಗಳು, ಸಣ್ಣ ಅಂಗಡಿ ತೆರೆಯಲು ಅವಕಾಶ
2)ಸಾಮಾಜಿಕ ಅಂತರ ಕಾಯ್ದುಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು 50ಪರ್ಸೆಂಟ್‌ರಷ್ಟು ಸಿಬ್ಬಂದಿಗಳೊಂದಿಗೆ ಪುರಸಭೆಯ ವ್ಯಾಪ್ತಿಯ ಪ್ರದೇಶದಲ್ಲಿ ಕಾರ್ಯನಿರ್ವಹಿಸಬಹುದು.
3)ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಮಾರ್ಕೆಟ್ ಅನ್ನು ತೆರೆಯಬಹುದಾಗಿದೆ
4)ನಗರ ಪ್ರದೇಶದಲ್ಲಿ ತುರ್ತುಯೇತರ ವಸ್ತು ಮತ್ತು ಸೇವೆಗಳಿಗೆ ಅವಕಾಶ ನೀಡಲಾಗಿದೆ.
5)ಗ್ರಾಮೀಣ ಪ್ರದೇಶದಲ್ಲಿನ ತುರ್ತು ಅಗತ್ಯವಲ್ಲದ ಸೇವೆಯ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಲು ಅವಕಾಶವಿದೆ

ಯಾವುದಕ್ಕೆ ವಿನಾಯಿತಿ ಇಲ್ಲ?

ಯಾವುದಕ್ಕೆ ವಿನಾಯಿತಿ ಇಲ್ಲ?

1)ಪುರಸಭೆ ವ್ಯಾಪ್ತಿಯ ಮಲ್ಟಿ ಬ್ರಾಂಡ್ ಅಂಗಡಿಗಳು, ಸಿಂಗಲ್ ಬ್ರಾಂಡ್ ಮಾಲ್ಸ್ ಗಳು ತೆರೆಯುವಂತಿಲ್ಲ
2)ಮಾರ್ಕೆಟ್ ಕಾಂಪ್ಲೆಕ್ಸ್ ನ ಅಂಗಡಿ, ಮಲ್ಟಿ ಬ್ರಾಂಡ್, ಸಿಂಗಲ್ ಬ್ರಾಂಡ್ ಮಾಲ್ ಗಳನ್ನು ತೆರೆಯುವಂತಿಲ್ಲ
3) ಸಿನಿಮಾ ಥೀಯೇಟರ್‌, ಮಾಲ್ಸ್, ಶಾಪಿಂಗ್ ಕಾಂಪ್ಲೆಕ್ಸ್, ಜಿಮ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್, ಮಕ್ಕಳ ಪಾರ್ಕ್, ಬಾರ್ ಅಂಡ್ ರೆಸ್ಟೋರೆಂಟ್, ಅಸೆಂಬ್ಲಿ ಹಾಲ್‌ಗಳು ತೆರೆಯುವಂತಿಲ್ಲ.
4)ದೊಡ್ಡ ಮಳಿಗೆ, ಮಾರುಕಟ್ಟೆ ಸ್ಥಳಗಳ ಬಂದ್ ಮುಂದುವರಿಯಲಿದೆ

ಮದ್ಯ ಮಾರಾಟಕ್ಕೆ ಅವಕಾಶವಿಲ್ಲ

ಮದ್ಯ ಮಾರಾಟಕ್ಕೆ ಅವಕಾಶವಿಲ್ಲ

ಮದ್ಯ ಪ್ರಿಯರಿಗೆ ಮತ್ತೆ ಶಾಕಿಂಗ್ ಸುದ್ದಿ ಇಲ್ಲಿದೆ. ಮದ್ಯ ಮಾರಾಟಕ್ಕೆ ವಿನಾಯಿತಿ ಸಿಗಬಹುದೆಂದು ನಿರೀಕ್ಷಿಸಲಾಗಿತ್ತು. ಗೃಹ ಸಚಿವಾಲಯ ಸ್ಪಷ್ಟಪಡಿಸಿರುವ ಪ್ರಕಾರ, ಮದ್ಯದ ಅಂಗಡಿಗಳನ್ನು ತೆರೆಯುವಂತಿಲ್ಲ. ಆಲ್ಕೋಹಾಲ್ ಪ್ರತ್ಯೇಕ ಕಾಯ್ದೆಯಡಿ ಬರಲಿದ್ದು, ಇದು ಶಾಪ್ಸ್ ಆ್ಯಂಡ್ ಎಸ್ಟಾಬ್ಲಿಷ್ ಮೆಂಟ್ ಕಾಯ್ದೆಯಡಿ ಬರುವುದಿಲ್ಲ. ಹೀಗಾಗಿ ಲಾಕ್ ಡೌನ್ ವೇಳೆ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+