ಮದ್ಯ ಮಾರಾಟದಲ್ಲಿ ಇಳಿಕೆ; ಇದು ಕೊರೊನಾ ತೆರಿಗೆ ಎಫೆಕ್ಟ್

ಲಾಕ್ ಡೌನ್ ತಿಂಗಳ ಅವಧಿಯಲ್ಲಿನ ಮದ್ಯ ಮಾರಾಟದಲ್ಲಿ ಸಂಪೂರ್ಣ ನಿಷೇಧ, ಕೆಲವು ರಾಜ್ಯಗಳಲ್ಲಿ ಕೊರೊನಾ ತೆರಿಗೆಗಳಲ್ಲಿ ಭಾರೀ ಏರಿಕೆ ಕಾರಣದಿಂದಾಗಿ ಭಾರತದಾದ್ಯಂತ ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಮದ್ಯ ಮಾರಾಟ 29% ಇಳಿಕೆಯಾಗಿದೆ ಎಂದು ಕಾನ್ಫಡರೇಷನ್ ಆಫ್ ಇಂಡಿಯನ್ ಆಲ್ಕೋಹಾಲಿಕ್ ಬಿವರೇಜ್ ಕಂಪೆನೀಸ್ (CIABC) ದತ್ತಾಂಶಗಳಿಂದ ಬಯಲಾಗಿದೆ.

ಕೆಲವು ರಾಜ್ಯಗಳು ಆದಾಯ ಹೆಚ್ಚಳ ಮಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಮದ್ಯದ ಮೇಲೆ ಕೊರೊನಾ ತೆರಿಗೆ ಎಂದು ಹಾಕಿದವು.

"ಆಂಧ್ರಪ್ರದೇಶ, ಛತ್ತೀಸ್ ಗಢ, ಪಶ್ಚಿಮ ಬಂಗಾಲ ಮತ್ತು ರಾಜಸ್ಥಾನದಂಥ ರಾಜ್ಯಗಳಲ್ಲಿ ಸ್ಥಿತಿ ಬಹಳ ಕೆಟ್ಟದಾಗಿದೆ. ಅಲ್ಲೆಲ್ಲ ಕೊರೊನಾ ತೆರಿಗೆ ಹೆಚ್ಚಳ ಮಾಡಿದ್ದರಿಂದ ಮಾರಾಟದಲ್ಲಿ ಭಾರೀ ಇಳಿಕೆ ಕಂಡಿದೆ. ಅಖಿಲ ಭಾರತ ಮಾರಾಟ ಪ್ರಮಾಣವು ಐಎಂಎಫ್ ಎಲ್ ಗೆ 2020- 21ರ ಮೊದಲಾರ್ಧವು 29% ಇಳಿಕೆಯಾಗಿದೆ," ಎಂದು CIABC ಹೇಳಿದೆ.

ಮದ್ಯ ಮಾರಾಟದಲ್ಲಿ ಇಳಿಕೆ; ಇದು ಕೊರೊನಾ ತೆರಿಗೆ ಎಫೆಕ್ಟ್

ಸಿಐಎಬಿಸಿ ತಿಳಿಸಿರುವ ಪ್ರಕಾರ, ಎಲ್ಲಿ ಮದ್ಯದ ಮೇಲೆ ಹೆಚ್ಚಿನ ಕೊರೊನಾ ತೆರಿಗೆ ಹಾಕಲಾಗಿದೆಯೋ ಅಂಥ ಕಡೆ ಮಾರಾಟದ ಮೇಲೆ ಪ್ರಭಾವ ಆಗಿದೆ. ಆ ರೀತಿ ಆಂಧ್ರಪ್ರದೇಶ, ಛತ್ತೀಸ್ ಗಢ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಲ ಹಾಗೂ ರಾಜಸ್ಥಾನ ಈ ರಾಜ್ಯಗಳಲ್ಲಿ ಹೆಚ್ಚಿನ ತೆರಿಗೆ ವಿಧಿಸಿದ್ದು, ಮಾರಾಟ ಇಳಿಕೆ ಆಗಿದೆ. ಇಲ್ಲಿ ಈಗಲೂ ಕೊರೊನಾ ತೆರಿಗೆ ಮುಂದುವರಿದಿದೆ.

ಶೀಘ್ರವಾಗಿ ಮದ್ಯದ ಮೇಲಿನ ಕೊರೊನಾ ತೆರಿಗೆಯನ್ನು ಹಿಂಪಡೆದಲ್ಲಿ ಈಗ ಇಳಿಕೆ ಆಗಿರುವ ಮಾರಾಟ ಸುಧಾರಿಸಬಹುದು ಹಾಗೂ ಗ್ರಾಹಕರ ಸಮಸ್ಯೆ ಕೂಡ ನಿವಾರಣೆ ಆಗಬಹುದು ಎಂದು ಸಿಐಎಬಿಸಿ ಡೈರೆಕ್ಟರ್ ಜನರಲಿ ವಿನೋದ್ ಗಿರಿ ಅಭಿಪ್ರಾಯ ಪಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+