ಕೊರೊನಾವೈರಸ್ ಭೀತಿ: 2020ರ ಭಾರತದ ಬೆಳವಣಿಗೆ ದರವನ್ನು 5.2 ಪರ್ಸೆಂಟ್‌ಗೆ ತಗ್ಗಿಸಿದ ಎಸ್ & ಪಿ

ವಿಶ್ವದಾದ್ಯಂತ ಕೊರೊನಾವೈರಸ್ ಹರಡುವಿಕೆಯಿಂದ ಜಾಗತಿಕ ಆರ್ಥಿಕತೆಯು ಆರ್ಥಿಕ ಹಿಂಜರಿತವನ್ನು ಪ್ರವೇಶಿಸುತ್ತಿದೆ ಎಂದು ಹೇಳಿರುವ ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ಬುಧವಾರ ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು 2020 ಕ್ಕೆ 5.2 ಪರ್ಸೆಂಟ್‌ಗೆ ಇಳಿಸಿದೆ.

ಇದಕ್ಕೂ ಮೊದಲು 2020ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ 5.7 ಪರ್ಸೆಂಟ್ ಆಗಬಹುದು ಎಂದು ಅಂದಾಜಿಸಿತ್ತು. ಆದರೆ ಇತರೆ ರಾಷ್ಟ್ರಗಳಂತೆ ಭಾರತದಲ್ಲೂ ಕೊರೊನಾವೈರಸ್‌ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತಿದ್ದು ಬೆಳವಣಿಗೆ ದರ ಇಳಿಕೆಯ ಮುನ್ಸೂಚನೆ ನೀಡಿದೆ.

2020ರ ಭಾರತದ ಬೆಳವಣಿಗೆ ದರವನ್ನು 5.2% ಗೆ ತಗ್ಗಿಸಿದ ಎಸ್ & ಪಿ

2020 ರಲ್ಲಿ ಏಷ್ಯಾ-ಪೆಸಿಫಿಕ್ ಆರ್ಥಿಕ ಬೆಳವಣಿಗೆಯು "ಜಾಗತಿಕ ಆರ್ಥಿಕತೆಯು ಆರ್ಥಿಕ ಹಿಂಜರಿತವನ್ನು ಪ್ರವೇಶಿಸುತ್ತಿರುವುದರಿಂದ" ಶೇಕಡಾ 3 ಕ್ಕಿಂತಲೂ ಕಡಿಮೆಯಾಗುತ್ತದೆ ಎಂದು ಎಸ್ & ಪಿ ಪ್ರಕಟಣೆಯಲ್ಲಿ ತಿಳಿಸಿದೆ.

"ಚೀನಾದಲ್ಲಿ ಅಗಾಧವಾದ ಮೊದಲ ತ್ರೈಮಾಸಿಕ ಆಘಾತ, ಯುಎಸ್ ಮತ್ತು ಯುರೋಪಿನಾದ್ಯಂತ ವ್ಯಾಪಾ ವಹಿವಾಟು ಸ್ಥಗಿತಗೊಳಿಸುವಿಕೆ ಮತ್ತು ಸ್ಥಳೀಯ ವೈರಸ್ ಹರಡುವಿಕೆಯು ಏಷ್ಯಾ-ಪೆಸಿಫಿಕ್‌ನಾದ್ಯಂತ ಆಳವಾದ ಆರ್ಥಿಕ ಹಿಂಜರಿತವನ್ನು ಖಾತರಿಪಡಿಸುತ್ತದೆ" ಎಂದು ಎಸ್ & ಪಿ ಗ್ಲೋಬಲ್ ರೇಟಿಂಗ್ಸ್‌ನ ಏಷ್ಯಾ-ಪೆಸಿಫಿಕ್ ಮುಖ್ಯ ಅರ್ಥಶಾಸ್ತ್ರಜ್ಞ ಶಾನ್ ರೋಚೆ ಹೇಳಿದ್ದಾರೆ.

ನಮ್ಮ ಶಾಶ್ವತ ಆದಾಯ ನಷ್ಟದ ಅಂದಾಜು ಕನಿಷ್ಠ 400 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ರೋಚೆ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+