ಕೊರೊನಾವೈರಸ್ ಎಫೆಕ್ಟ್: ಉದ್ಯೋಗಿಗಳ ವೇತನ ಕಡಿತಗೊಳಿಸಿದ ಇಂಡಿಗೊ

ಕೊರೊನಾವೈರಸ್ ಹರಡುವಿಕೆಯಿಂದಾಗಿ ದೇಶದ ಆರ್ಥಿಕತೆ ನೇರ ಪರಿಣಾಮ ಬೀರುತ್ತಿದ್ದು ಹಲವು ಉದ್ಯಮಗಳಿಗೆ ಪೆಟ್ಟು ನೀಡಿದೆ. ಸಾರಿಗೆ ಉದ್ಯಮದ ಮೇಲೂ ಪ್ರಭಾವ ಬೀರುತ್ತಿದ್ದು ಅನೇಕ ವಿಮಾನಯಾನ ಸಂಸ್ಥೆಗಳು ಈಗಾಗಲೇ ವಿಮಾನಗಳನ್ನು ರದ್ದು ಮಾಡಿವೆ. ಇದರ ಜೊತೆಗೆ ಇಂಡಿಗೊ ಏರ್‌ಲೈನ್ಸ್ ತನ್ನ ಉದ್ಯೋಗಿಗಳ 25 ಪರ್ಸೆಂಟ್ ವೇತನವನ್ನು ಕಡಿತಗೊಳಿಸಿದೆ.

ಕೊರೊನಾವೈರಸ್ ಎಫೆಕ್ಟ್: ಉದ್ಯೋಗಿಗಳ ವೇತನ ಕಡಿತಗೊಳಿಸಿದ ಇಂಡಿಗೊ

ಕೊರೊನಾವೈರಸ್‌ನಿಂದಾಗಿ ತೀವ್ರವಾಗಿ ನಷ್ಟ ಎದುರಿಸುವಂತಾಗಿದೆ ಹೀಗಾಗಿ ಎಲ್ಲಾ ಉದ್ಯೋಗಿಗಳ ವೇತನವನ್ನು ಕಡಿತಗೊಳಿಸುವುದಾಗಿ ಇಂಡಿಗೊ ಇಂದು(ಗುರುವಾರ) ಘೋಷಿಸಿದೆ.
ಹಿರಿಯ ಉಪಾಧ್ಯಕ್ಷರು ಮತ್ತು ಅದಕ್ಕಿಂತ ಹೆಚ್ಚಿನವರು 20 ಪರ್ಸೆಂಟ್ ವೇತನ ಕಡಿಗೊಂಡರೆ, ಉಪಾಧ್ಯಕ್ಷರು ಮತ್ತು ಕಾಕ್‌ಪಿಟ್ ಸಿಬ್ಬಂದಿಯ 15 ಪರ್ಸೆಂಟ್ ವೇತನ ಕಡಿತಗೊಳ್ಳಲಿದೆ ಎಂದು ಇಂಡಿಗೊ ಸಿಇಒ ರೊನೋಜಾಯ್ ದತ್ತಾ ಹೇಳಿದ್ದಾರೆ.

ಆದಾಯದಲ್ಲಿ ತೀವ್ರ ಕುಸಿತದೊಂದಿಗೆ, ವಿಮಾನಯಾನ ಉದ್ಯಮದ ಉಳಿವು ಈಗ ಅಪಾಯದಲ್ಲಿದೆ ಎಂದು ವೇತನ ಕಡಿತವನ್ನು ಘೋಷಿಸುವಾಗ ದತ್ತಾ ಹೇಳಿದರು. ಇಂಡಿಗೊದ ವಿಮಾನ ಕಾರ್ಯಾಚರಣೆ ಮುಖ್ಯಸ್ಥ ಆಶಿಮ್ ಮಿತ್ರಾ ಅವರು ಇಂದು ಬೆಳಿಗ್ಗೆ ಪೈಲಟ್‌ಗಳಿಗೆ ಇಮೇಲ್ ಬರೆದಿದ್ದು, ಆರ್ಥಿಕ ವಾತಾವರಣವು ಗಮನಾರ್ಹವಾಗಿ ಹದಗೆಟ್ಟಿದೆ ಮತ್ತು ಈ ತೀವ್ರ ಕುಸಿತದಿಂದ ಯಾವುದೇ ವಿಮಾನಯಾನ ಸಂಸ್ಥೆಗಳನ್ನು ಬೇರ್ಪಡಿಸಲಾಗಿಲ್ಲ ವೇತನ ಕಡಿತಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+