ಕೊರೊನಾವೈರಸ್ ಭಯದಿಂದಾಗಿ ಮಾಸ್ಕ್‌ಗಳ ಬೆಲೆ 300 ಪರ್ಸೆಂಟ್ ಹೆಚ್ಚಳ

ಭಾರತದಲ್ಲಿ ಕೊರೊನಾವೈರಸ್‌ ಭಯದಿಂದಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾಸ್ಕ್‌ಗಳ ಬೆಲೆಯಲ್ಲಿ ಭಾರೀ ಏರಿಕೆ ದಾಖಲಾಗಿದ್ದು, ಮೆಡಿಕಲ್ ಶಾಪ್‌ಗಳಲ್ಲಿ, ಆನ್‌ಲೈನ್‌ ಮಾರ್ಕೆಟ್‌ನಲ್ಲಿ ಮಾಸ್ಕ್‌ಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ.

ಈಗಾಗಲೇ ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಮಾಸ್ಕ್‌ಗಳನ್ನು ಧರಿಸಲು ಮುಂದಾಗುತ್ತಿದ್ದಾರೆ. ಆದರೆ ಬೇಡಿಕೆ ಹೆಚ್ಚಿದ್ದು ಪೂರೈಕೆಯ ಲಭ್ಯತೆ ಕಡಿಮೆಯಾಗಿದೆ.

ಕೊರೊನಾವೈರಸ್ ಭಯದಿಂದಾಗಿ ಮಾಸ್ಕ್‌ಗಳ ಬೆಲೆ 300 ಪರ್ಸೆಂಟ್ ಹೆಚ್ಚಳ

ಶಸ್ತ್ರಚಿಕಿತ್ಸೆಯ ಮಾಸ್ಕ್‌ಗಳು 300 ಪರ್ಸೆಂಟ್‌ರಷ್ಟು ಏರಿಕೆ ಕಂಡಿದೆ. ಈ ಹಿಂದೆ 10 ರುಪಾಯಿ ಇದ್ದ ಬೆಲೆಯು 40 ರುಪಾಯಿಗೆ ತಲುಪಿದೆ. ಆದರೂ ಜನರು ಖರೀದಿಗೆ ಮುಗಿಬಿದ್ದಿದ್ದಾರೆ. ಎನ್ 95 ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳ ಬೆಲೆಗಳು ಕೂಡ ಹೆಚ್ಚಾಗಿದೆ.

ಜಾಗತಿಕ ಮಟ್ಟದಲ್ಲಿ ಇದರ ಬೇಡಿಕೆ ಹೆಚ್ಚಿರುವುದರಿಂದ ವ್ಯಾಪಕ ಪೂರೈಕೆ ಸ್ಥಗಿತಗೊಂಡಿದೆ. ಸ್ಥಳೀಯ ಅಂಗಡಿಯವರಿಗೆ ದೇಶಿಯ ಮಾಸ್ಕ್ ತಯಾರಕರು ಸ್ಟಾಕ್‌ಗಳನ್ನು ಒದಗಿಸುತ್ತಿದ್ದಾರೆ. ಪೂರೈಕೆಯ ವ್ಯತ್ಯಯವು ಆಸ್ಪತ್ರೆಯಲ್ಲಿ ಕೆಲಸ ಮಾಡುವವರಿಗೂ ಪರಿಣಾಮ ಬೀರಿದೆ.

ಆಸ್ಪತ್ರೆಯ ಸಿಬ್ಬಂದಿಗಳು ಸೋಂಕನ್ನು ಹಿಡಿಯುವ ಗರಿಷ್ಠ ಅಪಾಯವನ್ನು ಹೊಂದಿರುತ್ತಾರೆ. ಏಕೆಂದರೆ ಅವರು ರೋಗಿಗಳೊಂದಿಗೆ ನೇರವಾಗಿ ಸಂಪರ್ಕದಲ್ಲಿರುತ್ತಾರೆ. ಭಯ ಅಥವಾ ಆತಂಕವಿಲ್ಲದೆ ಕೆಲಸ ಮಾಡಲು ಅವರಿಗೆ ಸಾಧ್ಯವಿರುವ ಎಲ್ಲ ರಕ್ಷಣಾ ಸಾಧನಗಳನ್ನು ಒದಗಿಸಬೇಕಾಗಿದೆ "ಎಂದು ವೈದ್ಯರೊಬ್ಬರು ಉಲ್ಲೇಖಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+