ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಎದುರಾಗಿರುವ ಕೊರೊನಾ ವೈರಸ್ ಭೀತಿಯು ಸೂರತ್‌ನ ವಜ್ರ ಉದ್ಯಮಕ್ಕೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಂದಿನ ತಿಂಗಳು ಹಾಂಕಾಂಗ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಆಭರಣ ಪ್ರದರ್ಶನವು ರದ್ದುಗೊಳಿಸುವ ಸಾಧ್ಯತೆಯಿದ್ದು, ಹಾಗೇನಾದ್ರು ಆಗಿದ್ದಲ್ಲಿ ಸೂರತ್‌ನ ವಜ್ರ ಉದ್ಯಮಕ್ಕೆ ಸುಮಾರು 8,000 ಕೋಟಿಯಷ್ಟು ನಷ್ಟವಾಗುವ ಭೀತಿ ಎದುರಾಗಿದೆ.
ಸೂರತ್ ವಜ್ರ ಉದ್ಯಮಕ್ಕೆ ಹಾಂಕಾಂಗ್ ಒಂದು ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಆದರೆ ಏಕಾಏಕಿ ಕೊರೊನಾವೈರಸ್ ಭೀತಿ ಎಲ್ಲೆಡೆ ಹರಡಿದ್ದು ಮಾರ್ಚ್ ಮೊದಲ ವಾರದವರೆಗೆ ಶಾಲಾ-ಕಾಲೇಜುಗಳನ್ನು ಅಲ್ಲಿ ಮುಚ್ಚಲಾಗಿದೆ. ಜೊತೆಗೆ ಕೊರೊನಾವೈರಸ್ ಭೀತಿಯು ವ್ಯಾಪಾರ-ವಹಿವಾಟು ಮೇಲೂ ಪರಿಣಾಮ ಬೀರಿದೆ.

ಜೆಮ್ಸ್ ಮತ್ತು ಜ್ಯುವೆಲ್ಲರಿ ರಫ್ತು ಉತ್ತೇಜನ ಮಂಡಳಿಯ (ಜಿಜೆಇಪಿಸಿ) ಪ್ರಾದೇಶಿಕ ಅಧ್ಯಕ್ಷ ದಿನೇಶ್ ನವಡಿಯಾ ಅವರ ಪ್ರಕಾರ ಸುಮಾರು 50,000 ಕೋಟಿ ರುಪಾಯಿ ಮೌಲ್ಯದ ವಜ್ರಗಳನ್ನು ಪ್ರತಿ ವರ್ಷ ಹಾಂಕಾಂಗ್ ರಫ್ತು ಮಾಡಲಾಗುತ್ತದೆ.
"ಸೂರತ್‌ನಿಂದ ರಫ್ತು ಆಗುವ ವಜ್ರದ ಒಟ್ಟು ರಫ್ತಿನಲ್ಲಿ 37 ಪರ್ಸೆಂಟ್‌ರಷ್ಟಿದೆ. ಈಗ, ಕೊರೊನಾವೈರಸ್ ಹೆದರಿಕೆಯಿಂದಾಗಿ, ಹಾಂಗ್ ಕಾಂಗ್ ಒಂದು ತಿಂಗಳ ರಜೆಯನ್ನು ಘೋಷಿಸಿದೆ. ಅಲ್ಲಿ ಕಚೇರಿಗಳನ್ನು ಹೊಂದಿರುವ ಗುಜರಾತಿ ವ್ಯಾಪಾರಿಗಳು ಭಾರತಕ್ಕೆ ಹಿಂತಿರುಗುತ್ತಿದ್ದಾರೆ" ಎಂದು ದಿನೇಶ್ ನವಡಿಯಾ ಹೇಳಿದ್ದಾರೆ.
ಇದರ ಜೊತೆಗೆ ಸೂರತ್ ವಜ್ರ ಉದ್ಯಮವು ಫೆಬ್ರವರಿ ಮತ್ತು ಮಾರ್ಚ್ ತಿಂಗಳಿಗೆ ಸುಮಾರು 8,000 ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸುತ್ತಿದೆ ಎಂದು ಅವರು ಹೇಳಿದರು.


Click it and Unblock the Notifications