For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್ ಪರಿಣಾಮ: ಇನ್ನೂ ಕೆಟ್ಟ ಪರಿಸ್ಥಿತಿ ಬರಲಿದೆ ಎಂದ ವಿಶ್ವಸಂಸ್ಥೆ

|

ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾವೈರಸ್‌ನಿಂದಾಗಿ ಜಗತ್ತು ಇನ್ನಷ್ಟು ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಯುದ್ಧದಿಂದ ಹಾನಿಗೊಳಗಾದ ರಾಷ್ಟ್ರಗಳಿಗೆ ಕೊರೊನಾವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಹಾಯ ಮಾಡಬೇಕೆಂದು ವಿಶ್ವಸಂಸ್ಥೆ ಒತ್ತಾಯಿಸಿದೆ.

ದೇಶದ ಹೋಟೆಲ್‌ ಉದ್ಯಮದ ಮೇಲೆ ಕೊರೊನಾ ಪ್ರಭಾವ:2020ರಲ್ಲಿ 20% ಆದಾಯವು ಸಿಗಲ್ಲದೇಶದ ಹೋಟೆಲ್‌ ಉದ್ಯಮದ ಮೇಲೆ ಕೊರೊನಾ ಪ್ರಭಾವ:2020ರಲ್ಲಿ 20% ಆದಾಯವು ಸಿಗಲ್ಲ

ಶುಕ್ರವಾರ(ಏಪ್ರಿಲ್ 3)ರಂದು ಮಾತನಾಡಿದ ವಿಶ್ವಸಂಸ್ಥೆ ಕಾರ್ಯದರ್ಶಿ ಜನರಲ್ ಆಂಟೋನಿಯೊ ಗುಟೆರಸ್ ಅವರು ಜಾಗತಿಕ ಕದನ ವಿರಾಮಕ್ಕಾಗಿ ಕರೆಕೊಟ್ಟರು. ಸಿರಿಯಾ, ಲಿಬಿಯಾ ಮತ್ತು ಯೆಮನ್‌ನಂತಹ ಹೋರಾಟದಿಂದ ಬಳಲುತ್ತಿರುವ ರಾಷ್ಟ್ರಗಳನ್ನು ಉಲ್ಲೇಖಿಸಿ 'ಕೆಟ್ಟದು ಇನ್ನೂ ಬರಬೇಕಿದೆ' ಎಂದು ಗುಟೆರಸ್ ಹೇಳಿದರು.

ಕೊರೊನಾವೈರಸ್: ಇನ್ನೂ ಕೆಟ್ಟ ಪರಿಸ್ಥಿತಿ ಬರಲಿದೆ ಎಂದ ವಿಶ್ವಸಂಸ್ಥೆ

ಕೋವಿಡ್-19 ಚಂಡಮಾರುತವು ವಿಶ್ವದ ಮೂಲೆ ಮೂಲೆಯಲ್ಲಿ ಎಲ್ಲಾ ರಾಷ್ಟ್ರಗಳ ಮೇಲೆ ಅಪ್ಪಳಿಸುತ್ತಿದೆ. ಆದರೆ ಕೆಲವು ರಾಷ್ಟ್ರಗಳಲ್ಲಿ ಇನ್ನೂ ಹೋರಾಟವು ಉಲ್ಪಣಗೊಂಡಿದೆ. ಇದು ವೈರಸ್ ವಿರುದ್ಧ ಹೋರಾಡುವ ಯೋಜನೆಗಳನ್ನು ಜಾರಿಗೆ ತರುವ ಸಾಮರ್ಥ್ಯವನ್ನು ಅಡ್ಡಿಪಡಿಸುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಕೊರೊನಾ ಎಫೆಕ್ಟ್: ಭಾರತದ ಬೆಳವಣಿಗೆ ದರವನ್ನು 30 ವರ್ಷಗಳ ಹಿಂದಕ್ಕೆ ತಗ್ಗಿಸಿದ ಫಿಚ್ ರೇಟಿಂಗ್ಸ್ಕೊರೊನಾ ಎಫೆಕ್ಟ್: ಭಾರತದ ಬೆಳವಣಿಗೆ ದರವನ್ನು 30 ವರ್ಷಗಳ ಹಿಂದಕ್ಕೆ ತಗ್ಗಿಸಿದ ಫಿಚ್ ರೇಟಿಂಗ್ಸ್

' ವೈರಸ್ ಪ್ರತಿ ದೇಶದ ಗಡಿಗಳಲ್ಲಿ ಎಷ್ಟು ವೇಗವಾಗಿ ಚಲಿಸಬಲ್ಲದು, ದೇಶಗಳನ್ನು ಧ್ವಂಸಗೊಳಿಸುವುದು ಮತ್ತು ಹೇಗೆ ಜೀವಗಳನ್ನು ಬಲಿ ತೆಗೆದುಕೊಳ್ಳಬಹುದು ಎಂಬುದನ್ನು ತೋರಿಸಿದೆ. ಹೀಗಾಗಿ ಕ್ಯಾಮರೂನ್, ಮಧ್ಯ ಆಫ್ರಿಕಾದ ಗಣರಾಜ್ಯ, ಕೊಲಂಬಿಯಾ, ಲಿಬಿಯಾ, ದಕ್ಷಿಣ ಸುಡಾನ್, ಸಿರಿಯಾ, ಉಕ್ರೇನ್ ಮತ್ತು ಯೆಮೆನ್ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಸಂಘರ್ಷಕ್ಕೆ ಒಳಗಾಗುವ ಪಕ್ಷಗಳು ತಮ್ಮ ಕರೆಗೆ ಬೆಂಬಲ ವ್ಯಕ್ತಪಡಿಸಿದೆ'' ಎಂದು ವಿಶ್ವಸಂಸ್ಥೆ ಹೇಳಿದೆ.

Read more about: ಕೊರೊನಾ corona
English summary

Coronavirus Worst Yet To Come For Countries In Conflict Says UN

UN Secretary-General Antonio Guterres Friday renewed his call for a global ceasefire, urging all parties to conflict to lay down arms
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X