ಭಾರತದಲ್ಲಿ ನೋಟ್ ಬ್ಯಾನ್ ಆಗುವ ಮೊದಲು ಈ ನಕಲಿ ಕರೆನ್ಸಿಗಳ ಜಾಲ ಹೆಚ್ಚಿತ್ತು. ಆದ್ರೆ ನೋಟ್ ಬ್ಯಾನ್ ಆದ ನಂತರ ಸ್ವಲ್ಪ ಮಟ್ಟಿಗೆ ಈ ಪ್ರಕರಣಗಳು ಕಡಿಮೆಯಾಗುತ್ತ ಬಂದವು ಅಲ್ಲದೆ 2016 ನಂತರ ಅಂದರೆ ಇಲ್ಲಿಯವರೆಗೆ, ಅದರಲ್ಲೂ ಕರ್ನಾಟಕದಲ್ಲಿ ಇಂತಹ ಪ್ರಕರಣಗಳು ಶೇಕಡಾ 60 ರಷ್ಟು ಕಡಿಮೆಯಾಗಿದೆ. ಹಾಗೆ ಇಂತಹ ನಕಲಿ ಕರೆನ್ಸಿಗಳು ಪತ್ತೆ ಪ್ರಮಾಣವು ಶೇಕಡಾ 60 ಇದ್ದದ್ದು, ಈ ಶೇಕಡಾ 46 ಕ್ಕೆ ಸುಧಾರಿಸಿದೆ ಎಂದು ಡಿಹೆಚ್ ಪರಿಶೀಲಿಸಿದೆ.
ನವೆಂಬರ್ 8, 2016ರಂದು 500 ಮತ್ತು 1,000 ರೂಪಾಯಿ ನೋಟುಗಳು ಬ್ಯಾನ್ ಪ್ರಕ್ರಿಯೆಯು, ಇಂತಹ ಪ್ರಕರಣಗಳನ್ನ ತಡೆಯುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸಿದೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಅಲ್ಲದೆ ಈ 2011 ಮತ್ತು 2016 ರ ನಡುವೆ, ಕರ್ನಾಟಕವು ವರ್ಷಕ್ಕೆ ಸುಮಾರು 76 ಪ್ರಕರಣಗಳನ್ನು ವರದಿ ಮಾಡಿದೆ, ಹೆಚ್ಚಿನ ಪ್ರಕರಣಗಳು (102) 2011ರಲ್ಲಿ ದಾಖಲಾದ ಪ್ರಕರಣಗಳಾಗಿವೆ. ಅದಲ್ಲದೆ, ನೋಟು ಬ್ಯಾನದದ ಆದ ನಂತರ, ಇಂತಹ ಪ್ರಕರಣಗಳು ವಾರ್ಷಿಕ ಸರಾಸರಿ 30ಕ್ಕೆ ಕುಸಿದಿದೆ. ಒಂದು ವರ್ಷದಲ್ಲಿ (40) ಹೆಚ್ಚಿನ ಪ್ರಕರಣಗಳು 2017ರಲ್ಲಿ ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2011ರಲ್ಲಿ 102 ಇದ್ದ ಪ್ರಕರಣಗಳ ಸಂಖ್ಯೆ 2014ರ ಒಳಗೆ 52 ಆಗಿದೆ. ಈ ನಡುವೆ ವರ್ಷದಿಂದ ವರ್ಷಕ್ಕೆ ಸ್ಥಿರವಾದ ಇಳಿಕೆಯನ್ನು ಕಂಡಿವೆ. ನೋಟು ಬ್ಯಾನ್ ಆದ ವರ್ಷವಾದ 2016ರಲ್ಲಿ, 95 ಪ್ರಕರಣಗಳು ವರದಿಯಾಗಿವೆ. ಮುಖ್ಯವಾಗಿ ಕರೆನ್ಸಿಗಳು ಬದಲಾದ ಸಮಯದಲ್ಲಿ ನಕಲಿ ನೋಟುಗಳನ್ನು ತಳ್ಳಲು ಖೋಟಾನೋಟುದಾರರು ಕೊನೆಯ ಕ್ಷಣದಲ್ಲಿ ಹಲವು ಪ್ರಯತ್ನಗಳನ್ನ ಮಾಡಿದ್ದರು.
ನೋಟು ಬ್ಯಾನ್ ಆಗುವುದಕ್ಕೂ ಮುನ್ನವೇ ಈ ಪ್ರಕರಣಗಳಲ್ಲಿ ವರ್ಷದಿಂದ ವರ್ಷಕ್ಕೆ ಇಳಿಕೆ ಕಂಡುಬಂದಿದೆ ಆದರೆ ರಾತ್ರೋರಾತ್ರಿ ನೋಟು ರದ್ದತಿ ಆದಮೇಲಂತೂ ಈ ಖೋಟಾನೋಟುದಾರರಿಗೆ ಸಂಕಷ್ಟಗಖಳು ಎದುರಾಗಿದ್ದವು ಎಂದು ಅಪರಾಧ ತನಿಖಾ ವಿಭಾಗದ (ಸಿಐಡಿ) ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಡಿಎಚ್‌ಗೆ ತಿಳಿಸಿದ್ದಾರೆ.
ಆದರೆ ನೋಟು ಬ್ಯಾನ್ ಪ್ರಕ್ರಿಯೆ ಮಾತ್ರ ಪ್ರಕರಣಗಳ ಕುಸಿತಕ್ಕೆ ಕಾರಣವಲ್ಲ. ಪದೇ ಪದೇ ಪೊಲೀಸ್ ದಬ್ಬಾಳಿಕೆಗಳು ನಕಲಿ ಕರೆನ್ಸಿ ವ್ಯವಹಾರವನ್ನು ಮುಂದುವರಿಸುವ ದರೋಡೆಕೋರರ ಸಾಮರ್ಥ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತವೆ ಎಂದರು.
ಸೈಬರ್ ಅಪರಾಧಿಗಳಂತೆಯೇ ಈ ನಕಲಿ ಕರೆನ್ಸಿಗಳ ಜಾಲ ಈ ಅತ್ಯಾಧುನಿಕ ಯುಗದಲ್ಲಿ ವಿವಿಧ ಪದರಗಳಲ್ಲಿ ಕಾರ್ಯನಿರ್ವಹಿಸುತ್ತವೆ. ನೋಟುಗಳನ್ನು ವಿನ್ಯಾಸಗೊಳಿಸುವ, ಉತ್ಪಾದಿಸುವ ಮತ್ತು ವಿತರಿಸುವ ಪ್ರತಿ ಹಂತದಲ್ಲಿ 10-20 ಜನರು ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ. ಹಾಗಾಗಿ, ಒಮ್ಮೆ ಅವರನ್ನ ಬಂಧಿಸಿದ ನಂತರ, ಹಳೆ ತಂಡದಂತೆ ಮತ್ತೊಂದು ತಂಡವನ್ನು ನಿರ್ಮಿಸಲು ಅವರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ನಕಲಿ ನೋಟು ಪ್ರಕರಣಗಳ ಮೇಲ್ವಿಚಾರಣೆ ನಡೆಸುತ್ತಿರುವ ಸಿಐಡಿ ಅಧಿಕಾರಿ ನೋಟು ಬ್ಯಾನ್ ಆದ ನಂತರ ನಕಲಿ ನೋಟುದಾರರು ಎದುರಿಸಿದ ಸವಾಲುಗಳ ಬಗ್ಗೆ ಹೇಳಿದ್ರು.
ಹೊಸ ಕರೆನ್ಸಿ ನೋಟುಗಳು ಹೊಸ ವಿನ್ಯಾಸಗಳು ಮತ್ತು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬಂದಿವೆ. ಅವುಗಳನ್ನು ನಕಲಿ ಮಾಡುವುದು ಬಹಳ ಕಷ್ಟ. ಇನ್ನು ಈ ಖೋಟಾನೋಟು ತಯಾರಕರು ಅವುಗಳನ್ನು ಪುನರಾವರ್ತಿಸುವಲ್ಲಿ ನಿಪುಣತೆಯನ್ನು ಹೊಂದಿರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ರು.
ನಕಲು ಮಾಡುವಾಗ ಉತ್ತಮ ಕೆಲಸ ಮಾಡದಿದ್ದರೆ ಸಿಕ್ಕಿಬೀಳುವ ಭಯ ನಕಲಿ ನೋಟ್ ಪ್ರಿಂಟ್ ಮಾಡುವವರಿಗೆ ಇರುತ್ತದೆ. ಖೋಟಾನೋಟುದಾರರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡರೆ ಇಂತಹ ಪ್ರಕರಣಗಳು ಕೂಡ ಹೆಚ್ಚಾಗಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಖೋಟಾ ನೋಟ್ ಮಾಡುವವರು ಈ ಸೈಬರ್ ವಂಚನೆಗಳತ್ತ ಸಾಗಿರಬಹುದು. ಅಲ್ಲದೆ ಇದು ಕಡಿಮೆ ಅತ್ಯಾಧುನಿಕ ಮತ್ತು ಕಾರ್ಯಗತಗೊಳಿಸಲು ಸುಲಭವಾಗಿದೆ ಎಂದು ಅಧಿಕಾರಿ ಹೇಳಿದರು. ಹಾಗೆ ಯಾವುದೇ ನಿಜವಾದ ವಹಿವಾಟು ಇಲ್ಲದೆ ಪಾವತಿಗಳನ್ನು ಅನುಕರಿಸುವಂತ ಅಪ್ಲಿಕೇಶನ್‌ಗಳಿವೆ. ಅಂತಹ ಅನೇಕ ಪ್ರಕರಣಗಳು 2020ರ ನಂತರ ಕಾಣಿಸಿಕೊಂಡಿವೆ ಎಂದು ಅವರು ಹೇಳಿದರು.
ನಕಲಿ ನೋಟು ಪ್ರಕರಣಗಳ ತನಿಖೆ ನಡೆಸುತ್ತಿರುವ ಮತ್ತೋರ್ವ ಸಿಐಡಿ ಅಧಿಕಾರಿ, ಈ ನಕಲಿ ನೋಟುಗಳನ್ನು ಎಟಿಎಂಗಳಲ್ಲಿ ಠೇವಣಿ ಇಡುವುದರಿಂದ ನಕಲಿ ನೋಟುಗಳು ಹೆಚ್ಚಾಗಿ ಹರಡುತ್ತಿದ್ದು, ಅಲ್ಲಿ ಸಿಕ್ಕಿಬೀಳುವ ಸಾಧ್ಯತೆ ಬಹಳ ಕಡಿಮೆ ಇದೆ.
ನೋಟ್ ಬ್ಯಾನ್‌ನಿಂದಾಗಿ ಖೋಟಾನೋಟ್‌ಗಳ ಜಾಲ ಕಡಿಮೆಯಾಯಿತು. ಅದ್ರೆ ಇದರ ಜೊತೆಗೆ ಡಿಜಿಟಲ್ ವಂಚಕರ ಸಂಖ್ಯೆ ಕೂಡ ಹೆಚ್ಚಾಯಿತು. ಡಿಜಿಟಲ್ ಬ್ಯಂಕಿಂಗ್ ಯುಪಿಐ ಪೇಮೆಂಟ್‌ಗಳು ಆರಂಭವಾಗ್ತಿದ್ದಂತೆ ತಂತ್ರಜ್ಞಾನವನ್ನ ಬಳಸಿಕೊಂಡು ವಂಚಕರು ಜನರನ್ನ ಮೋಸ ಮಾಡಲು ಆರಂಭಿಸಿದರು. ಕರ್ನಾಟಕ ಪೊಲೀಸ್ ಸೈಬರ್ ಕ್ರೈಮ್ ವಿಭಾಗ, ನೋಟು ಬ್ಯಾನ್ ಸಮಯದಲ್ಲಿ ಮತ್ತು ನಂತರ ಆನ್‌ಲೈನ್ ವಂಚನೆಗಳನ್ನು ಹೆಚ್ಚು ಎದುರಿಸುವಂತಾಯಿತು. ನಕಲಿ ಸಾಲ ಯೋಜನೆಗಳು ಮತ್ತು ಆನ್‌ಲೈನ್ ವಂಚನೆಗಳನ್ನು ನಡೆಸುತ್ತಿರುವ ಹಲವಾರು ಸಂಘಟಿತ ಗ್ಯಾಂಗ್‌ಗಳು ಪತ್ತೆಯಾದವು, ಈ ಯೋಜನೆಗಳಲ್ಲಿ ಭಾಗಿಯಾಗಿರುವ ಹಲವಾರು ವ್ಯಕ್ತಿಗಳ ಕರ್ನಾಟಕ ಸರ್ಕಾರ ಬಂಧಿಸಿತು.
ಇಂತಹ ವಂಚನೆಗಳ ಉಲ್ಬಣಕ್ಕೆ ಪ್ರತಿಕ್ರಿಯೆಯಾಗಿ, ಕರ್ನಾಟಕ ಸರ್ಕಾರ ಮತ್ತು ಪೊಲೀಸರು ಜಾಗೃತಿ ಅಭಿಯಾನಗಳನ್ನು ಪ್ರಾರಂಭಿಸಿದರು. ಈ ಅಭಿಯಾನಗಳು ಡಿಜಿಟಲ್ ವಹಿವಾಟುಗಳ ಅಪಾಯಗಳ ಬಗ್ಗೆ ಮತ್ತು ಫಿಶಿಂಗ್, ನಕಲಿ ವೆಬ್‌ಸೈಟ್‌ಗಳು ಮತ್ತು ಮೋಸದ ಲಿಂಕ್‌ಗಳಂತಹ ಹಗರಣಗಳನ್ನು ತಪ್ಪಿಸುವುದು ಹೇಗೆ ಎಂಬುದರ ಕುರಿತು ಸಾರ್ವಜನಿಕರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದ್ದವು.


Click it and Unblock the Notifications