ಭಾರತದಲ್ಲಿ 18 ರಿಂದ 44 ವರ್ಷದೊಳಗಿನ ಒಟ್ಟಾರೆ ಜನಸಂಖ್ಯೆಗೆ, ಕೊರೊನಾ ಲಸಿಕೆಯ ವೆಚ್ಚವೆಷ್ಟು?

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆಗಳನ್ನು ನೀಡುವುದಾಗಿ ಘೋಷಿಸಿತು. ಈ ಮೊದಲು 45 ವರ್ಷ ವಯಸ್ಸಿನವರಿಗೆ ಉಚಿತ ಲಸಿಕೆ ನೀಡುತ್ತಿದ್ದರೆ, ಇದೀಗ 18 ರಿಂದ 44 ವಯಸ್ಸಿನ ಜನರು ಅವುಗಳನ್ನು ಹಣ ಪಾವತಿಸಿ ಪಡೆಯಬೇಕಾಗುತ್ತದೆ ಎಂದು ಸೂಚಿಸಿದೆ.

ಇದರರ್ಥ ರಾಜ್ಯ ಸರ್ಕಾರಗಳು ಲಸಿಕೆಗಳನ್ನು ಉಚಿತವಾಗಿ ಪೂರೈಸಲು ನಿರ್ಧರಿಸದಿದ್ದರೆ, ಜನರು ಅದನ್ನು ಹಣ ನೀಡಿ ಪಡೆಯಬೇಕಾಗುತ್ತದೆ. ಇಲ್ಲಿಯವರೆಗೆ ಏಳು ರಾಜ್ಯ ಸರ್ಕಾರಗಳು ಉಚಿತ ಲಸಿಕೆಗಳನ್ನು ನೀಡುವುದಾಗಿ ಘೋಷಿಸಿವೆ.

8 ರಿಂದ 44 ವರ್ಷದೊಳಗಿನ ಜನಸಂಖ್ಯೆಗೆ ಲಸಿಕೆ ಹಾಕಲು ಎಷ್ಟು ವೆಚ್ಚವಾಗುತ್ತದೆ?

ಕೋವಿಡ್-19 ಲಸಿಕೆ ಖರೀದಿ ಮತ್ತು ಇತರ ಪ್ರಮುಖ ವಿಚಾರಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಬೇಕಿದೆ. ಇಲ್ಲಿಯವರೆಗೆ ಆಕ್ಸ್‌ಫರ್ಡ್ / ಅಸ್ಟ್ರಾಜೆನೆಕಾ ಲಸಿಕೆ ಬೆಲೆ ಮಾತ್ರ ಘೋಷಣೆಯಾಗಿದೆ. ರಾಜ್ಯ ಸರ್ಕಾರಗಳಿಗೆ ಒಂದು ಡೋಸ್‌ಗೆ 400 ರೂಪಾಯಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಡೋಸ್‌ಗೆ 600 ರೂಪಾಯಿ ಘೋಷಿಸಿದ್ದು, ಇತರ ಲಸಿಕೆಗಳ ಬೆಲೆ ಘೋಷಣೆಯಾಗಬೇಕಿದೆ.

18 ರಿಂದ 44 ವರ್ಷದೊಳಗಿನ ಜನಸಂಖ್ಯೆಗೆ ಕೊರೊನಾ ಲಸಿಕೆಯ ವೆಚ್ಚವೆಷ್ಟು?

ಸದ್ಯ ಆಕ್ಸ್‌ಫರ್ಡ್‌/ಅಸ್ಟ್ರಾಜೆನೆಕಾ ಲಸಿಕೆಯ ಬೆಲೆಯನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ 18 ರಿಂದ 44 ವರ್ಷದೊಳಗಿನ ಜನರಿಗೆ ಲಸಿಕೆ ನೀಡಲು 47,500 ಕೋಟಿ ರೂಪಾಯಿಗಳಿಂದ, 71,500 ಕೋಟಿಗಳವರೆಗೆ ಇರಬಹುದು. ಭಾರತದಲ್ಲಿ 18 ರಿಂದ 44 ವರ್ಷ ವಯಸ್ಸಿನ ಒಟ್ಟು ಜನಸಂಖ್ಯೆ 594.6 ಮಿಲಿಯನ್ ಎಂದು ನಿರೀಕ್ಷಿಸಲಾಗಿದೆ. 800 ಅಥವಾ 1200 ರೂಪಾಯಿನಿಂದ ಗುಣಿಸಿದಾಗ (ಎರಡು ಡೋಸ್ಗೆ) ಒಟ್ಟು ವೆಚ್ಚ 47,566 ಕೋಟಿ ಅಥವಾ 71,349 ರೂಪಾಯಿ ಆಗುತ್ತದೆ.

ರಾಜ್ಯಗಳ ಮೇಲೆ ಹಣಕಾಸಿನ ಹೊರೆ ಏನು?

ರಾಜ್ಯಗಳ ಮೇಲಿನ ವ್ಯಾಕ್ಸಿನೇಷನ್‌ನ ಸಂಪೂರ್ಣ ವೆಚ್ಚ ಸದ್ಯ ಬಹಿರಂಗಗೊಂಡಿಲ್ಲ. ವ್ಯಾಕ್ಸಿನೇಷನ್‌ನ ಹಣಕಾಸಿನ ಹೊರೆಯನ್ನು ರಾಜ್ಯಗಳ ಒಟ್ಟು ಬಜೆಟ್ ವೆಚ್ಚದ ಪಾಲು ಎಂದು ವ್ಯಾಖ್ಯಾನಿಸಲಾಗಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ಡೇಟಾಬೇಸ್ ಮತ್ತು ಜನಸಂಖ್ಯಾ ಪ್ರೊಜೆಕ್ಷನ್ ವರದಿಯ ಅಂಕಿ-ಅಂಶಗಳ ಪ್ರಕಾರ 21 ರಾಜ್ಯಗಳಲ್ಲಿ, ಬಿಹಾರವು ಹೆಚ್ಚಿನ ಹೊರೆಯನ್ನು ಎದುರಿಸಲಿದ್ದು, 2021-22ರಲ್ಲಿ ಒಟ್ಟು ರಾಜ್ಯ ಖರ್ಚಿನ ಶೇಕಡಾ 1.8ರಷ್ಟು ಇರಲಿದೆ.

2020-21ರಲ್ಲಿ ರಾಜ್ಯಗಳ ಒಟ್ಟು ಆರೋಗ್ಯ ಖರ್ಚಿನಲ್ಲಿ ಶೇಕಡಾ 26ರಷ್ಟು ವ್ಯಾಕ್ಸಿನೇಷನ್ ವೆಚ್ಚವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+