For Quick Alerts
ALLOW NOTIFICATIONS  
For Daily Alerts

ಕೊರೊನಾದಿಂದ ಶೇ. 90ರಷ್ಟು ಭಾರತೀಯರು ನಷ್ಟ ಅನುಭವಿಸಿದ್ದಾರೆ: ವರದಿ

|

ಕೋವಿಡ್-19 ಸಾಂಕ್ರಾಮಿಕದ ಬಳಿಕ ಆಗಿರುವ ನಷ್ಟವನ್ನು ಪಟ್ಟಿ ಮಾಡಲು ಸಾಧ್ಯವೇ ಆಗದಂತಹ ಪರಿಸ್ಥಿತಿ ಇದೆ. ಏಕೆಂದರೆ ಇದ್ರಿಂದ ಕೇವಲ ಒಂದು ಪ್ರಾಂತ್ಯ, ನಗರ, ಜಿಲ್ಲೆ ರಾಜ್ಯದ ಜನರು ತೊಂದರೆಗೊಳಗಾಗಿಲ್ಲ. ಇಡೀ ಭಾರತವೇ ಕೊರೊನಾದಿಂದ ಕಂಗೆಟ್ಟಿ ಹೋಗಿದೆ. ಈ ಕೊರೊನಾ ಸಂದರ್ಭದಲ್ಲಿ ಕೋಟ್ಯಾಂತರ ಉದ್ಯೋಗ ನಷ್ಟ, ವೇತನ ಕಡಿತವನ್ನು ಕಾಣಬಹುದು.

 

ಎಚ್‌ಡಿಎಫ್‌ಸಿ ಲೈಫ್ ನಡೆಸಿದ ಅಧ್ಯಯನದ ಪ್ರಕಾರ ಸುಮಾರು ಶೇಕಡಾ 90ರಷ್ಟು ಭಾರತೀಯ ಗ್ರಾಹಕರು ವೇತನ ಕಡಿತ ಅಥವಾ ವ್ಯಾಪಾರ ನಷ್ಟವನ್ನು ಸ್ವಲ್ಪ ಮಟ್ಟಿಗೆ ಎದುರಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

 

ಭಾರತೀಯರಲ್ಲಿ ಕೋವಿಡ್‌ ಜೊತೆಗೆ ಎದುರಾಗಿರುವ ಪ್ರಮುಖ ಮೂರು ಆತಂಕಗಳಲ್ಲಿ ಆರ್ಥಿಕ ಕುಸಿತ (ಶೇಕಡಾ 67), ಉದ್ಯೋಗ ಅಭದ್ರತೆ (ಶೇಕಡಾ 51) ಮತ್ತು ಸಾಲದ ಭೈ (ಶೇಕಡಾ 41) ರಷ್ಟಿದ್ದು ಆದಾಯ ಕೊರತೆಯನ್ನು ಎದುರಿಸುತ್ತಿದ್ದಾರೆ.

ಆರ್ಥಿಕ ಜಾಗೃತಿ, ಸನ್ನದ್ಧತೆ ಮತ್ತು ಭದ್ರತೆಯ ಸೂಚಕವಾದ ಲೈಫ್ ಫ್ರೀಡಮ್ ಇಂಡೆಕ್ಸ್, 2019 ರಲ್ಲಿ 66.6 ರಿಂದ 2021 ರಲ್ಲಿ 4.8 ಪಾಯಿಂಟ್‌ಗಳನ್ನು ಕಡಿಮೆ ಮಾಡಿ 61.8 ಕ್ಕೆ ಇಳಿಸಿ, ಕೋವಿಡ್-19 ನ ಪ್ರತಿಕೂಲ ಪರಿಣಾಮವನ್ನು ಎತ್ತಿ ತೋರಿಸುತ್ತದೆ.

ಕೊರೊನಾದಿಂದ ಶೇ. 90ರಷ್ಟು ಭಾರತೀಯರು ನಷ್ಟ ಅನುಭವಿಸಿದ್ದಾರೆ: ವರದಿ

ಎಚ್‌ಡಿಎಫ್‌ಸಿ ಲೈಫ್ ಡಿಜಿಟಲ್ ಬಿಸಿನೆಸ್ ಮತ್ತು ಇ-ಕಾಮರ್ಸ್, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ವಿಶಾಲ್ ಸುಭರ್ವಾಲ್ ಹೇಳುವ ಪ್ರಕಾರ "ಆರೋಗ್ಯ ಕುಸಿತವು ವಿವಿಧ ಸವಾಲುಗಳನ್ನು ಎದುರಿಸುವ ಮೂಲಕ ಆರ್ಥಿಕ ಕಾಳಜಿಯಾಗಿ ಬದಲಾಗಿದೆ ಎಂಬುದನ್ನು ಸೂಚಿಸುತ್ತದೆ." ಎಂದು ತಿಳಿಸಿದ್ದಾರೆ.

ಅಂತೆಯೇ, ಹಣಕಾಸು ಸಮರ್ಪಕ ಮತ್ತು ಸಮರ್ಪಕ ಸೂಚ್ಯಂಕವು 8.7 ಪಾಯಿಂಟ್‌ ಕಡಿಮೆಯಾಗಿ ಶೇ. 62.8 ಕ್ಕೆ ಇಳಿದಿದೆ. ಗ್ರಾಹಕರು ತಮ್ಮ ಪ್ರಸ್ತುತ ಹಣಕಾಸು ಯೋಜನೆಗಳು ಸಮರ್ಪಕವಾಗಿಲ್ಲ ಎಂದು ಭಾವಿಸುತ್ತಾರೆ ಎಂದು ಸೂಚಿಸುತ್ತದೆ. ನಿರೀಕ್ಷೆಯಂತೆ, ಆರೋಗ್ಯ ವೆಚ್ಚಗಳ ಸ್ಕೋರ್ 2019 ಕ್ಕೆ ಹೋಲಿಸಿದರೆ 13 ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ ಎಂದು ಅಧ್ಯಯನ ತಿಳಿಸಿದೆ.

ಎಚ್‌ಡಿಎಫ್‌ಸಿ ಲೈಫ್ ಫ್ರೀಡಮ್ ಅಧ್ಯಯನದ ಪ್ರಕಾರ ಇದು ಲಭ್ಯವಿರುವ ಉತ್ಪನ್ನಗಳು, ಹಣಕಾಸು ಯೋಜನೆಗಳ ಸಮರ್ಪಕತೆ ಮತ್ತು ಅವರ ಪ್ರಸ್ತುತ ಆರ್ಥಿಕ ಸ್ವಾತಂತ್ರ್ಯದ ಸ್ಥಿತಿಯ ಬಗ್ಗೆ ಅವರ ಅರಿವನ್ನು ಖಚಿತಪಡಿಸುತ್ತದೆ.

ಇದು ನಾಲ್ಕು ಉಪ ಸೂಚ್ಯಂಕಗಳಾದ ಆರ್ಥಿಕ ಜಾಗೃತಿ ಸೂಚ್ಯಂಕ, ಹಣಕಾಸು ಯೋಜನೆ ಸೂಚ್ಯಂಕ, ಹಣಕಾಸು ಸಮರ್ಪಕತೆ ಮತ್ತು ಸಮರ್ಪಕ ಸೂಚ್ಯಂಕ ಮತ್ತು ಹಣಕಾಸು ಸ್ವಾತಂತ್ರ್ಯ ಸೂಚಿಯನ್ನು ಒಳಗೊಂಡಿದೆ. ನಾಲ್ಕು ಸೂಚ್ಯಂಕಗಳು ಒಟ್ಟಾಗಿ ಗ್ರಾಹಕರ 'ಆರ್ಥಿಕ ಸ್ವಾತಂತ್ರ್ಯ'ದ ಮಾಪನವನ್ನು ಸಕ್ರಿಯಗೊಳಿಸುತ್ತವೆ.

ಆರ್ಥಿಕ ಜಾಗೃತಿ ಹೆಚ್ಚುತ್ತಿದೆ..!

ಕೋವಿಡ್ ನಂತರದ ಪರಿಸ್ಥಿಯಲ್ಲಿ ಹಣಕಾಸು ಉತ್ಪನ್ನಗಳ ಸುತ್ತ ಆರ್ಥಿಕ ಅರಿವು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಸೂಚ್ಯಂಕವು 2019 ರಿಂದ 2.1 ಪಾಯಿಂಟ್‌ಗಳ ಏರಿಕೆಯಾಗಿ 53.4 ಕ್ಕೆ ತಲುಪಿದೆ.

"ಅನಿರೀಕ್ಷಿತ ಪ್ರತಿಕೂಲ ಘಟನೆಗಳ(ಕೋವಿಡ್-19) ಅಡಿಯಲ್ಲಿ ಒಬ್ಬರ ಜೀವನ ಮಟ್ಟವನ್ನು ಕಾಪಾಡಿಕೊಳ್ಳುವುದು ಆರ್ಥಿಕ ಭದ್ರತೆಯ ಅಗತ್ಯವನ್ನು ಪ್ರೇರೇಪಿಸುವ ಪ್ರಮುಖ ಅಂಶವಾಗಿದೆ" ಎಂದು ಅಧ್ಯಯನವು ಹೇಳಿದೆ.

ಟರ್ಮ್‌ ಇನ್ಸ್ಯೂರೆನ್ಸ್‌ಗೆ ಹೆಚ್ಚಿನ ಬೇಡಿಕೆ
ಇದರ ಜೊತೆಗೆ ಟರ್ಮ್ ಇನ್ಸೂರೆನ್ಸ್‌ಗಳ ಬೇಡಿಕೆ ಕೂಡ ಹೆಚ್ಚಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯವಾಗಿದೆ. ಕೋವಿಡ್-19 ಪೂರ್ವದಲ್ಲಿ ಇದ್ದಂತಹ ಪರಿಸ್ಥಿತಿಗಿಂತ ಅಪಾಯದ ಸ್ಥಿತಿ ಹೆಚ್ಚಿರುವುದರಿಂದ ಜನರು ಕುಟುಂಬದ ರಕ್ಷಣೆಗಾಗಿ ಈ ಟರ್ಮ್ ಇನ್ಶುರೆನ್ಸ್ ಮೊರೆ ಹೋಗಿದ್ದಾರೆ.

ಸಮೀಕ್ಷೆಯ ಪ್ರಕಾರ ಶೇಕಡಾ 41 ರಷ್ಟು ಜನರು ತಾವು ಮೊದಲ ತರಂಗದಲ್ಲಿ ಜೀವವಿಮಾ ಪಾಲಿಸಿಯನ್ನು ಖರೀದಿಸಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಎರಡನೇ ಕೋವಿಡ್‌ ತರಂಗದಲ್ಲಿ ಇದರ ಪ್ರಮಾಣ ಕೂಡ ಹೆಚ್ಚಾಗಿದೆ.

English summary

Covid-19 Impact: Indians Most Worried About Job Loss, Debt Says study

90 percent of Indian consumers have faced salary cuts or business losses to some extent and therefore continue to be concerned about COVID-19, a study conducted by HDFC Life
Story first published: Saturday, August 21, 2021, 14:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X