For Quick Alerts
ALLOW NOTIFICATIONS  
For Daily Alerts

ಫಿಟ್ನೆಸ್ ಪಾಠ ಕಲಿಸಿದ ಕೊರೊನಾ: ಬೈಸಿಕಲ್ ಬೇಡಿಕೆ ಶೇ. 20ರಷ್ಟು ಏರಿಕೆ

|

ಕೋವಿಡ್-19 ಸಾಂಕ್ರಾಮಿಕಕ್ಕೂ ಮೊದಲು ಬೆಳಿಗ್ಗೆ ವಾಕಿಂಗ್‌ ಹೋಗುವವರು ಸಾಮಾನ್ಯವಾಗಿ ಹೆಚ್ಚಾಗಿಯೇ ಇದ್ರು. ಭಾರತದ ಹೆಚ್ಚಿನ ಮಹಾನಗರಗಳು ಮತ್ತು ಪಟ್ಟಣಗಳಲ್ಲಿ ದೈನಂದಿನ ಜೀವನದ ವಿಧಾನಗಳಲ್ಲಿ ಇದು ಒಂದಾಗಿತ್ತು. ಅದರಲ್ಲೂ ಎರಡು ಮೂರು ಜನರು ಒಟ್ಟಾಗಿ ವಾಕಿಂಗ್‌ ಹೋಗುವುದು ಸಾಮಾನ್ಯವಾಗಿತ್ತು.

ಆದ್ರೆ ಕಳೆದು ಒಂದು ವರ್ಷದಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಸಾಮಾಜಿಕ ದೂರ ರೂಢಿಯಾಗಿರುವುದರಿಂದ ಸಾಂಪ್ರದಾಯಿಕ ನಡಿಗೆ ಬೈಸಿಕಲ್‌ಗೆ ಕರೆದೊಯ್ದಿದೆ. ಉದಾಹರಣೆಗೆ ಮುಂಬೈನಲ್ಲಿ ಕಾರ್ಟರ್ ರೋಡ್, ಬ್ಯಾಂಡ್‌ ಸ್ಟ್ಯಾಂಡ್ ಅಥವಾ ಮೆರೈನ್ ಡ್ರೈವ್‌ನಂಹತ ಪ್ರಮುಖ ವಾಯುವಿಹಾರಗಳ ರಸ್ತೆಗಳಲ್ಲಿ ಸೈಕ್ಲಿಸ್ಟ್‌ಗಳು ಹೆಚ್ಚಿದ್ದಾರೆ.

ಆರೋಗ್ಯದ ಕಡೆಗೆ ಹೆಚ್ಚಿದೆ ಜನರ ಕಾಳಜಿ

ಆರೋಗ್ಯದ ಕಡೆಗೆ ಹೆಚ್ಚಿದೆ ಜನರ ಕಾಳಜಿ

ಕೋವಿಡ್-19 ವೈರಸ್‌ ಜನರಲ್ಲಿ ಆರೋಗ್ಯ, ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿವಹಿಸುವಂತೆ ಪಾಠ ಕಲಿಸಿರುವುದಂತು ಸುಳ್ಳಲ್ಲ. ಹೀಗಾಗಿ ಕಿರಿಯರಿಂದ, ಹಿರಿಯ ವಯಸ್ಕರಿನವರೆಗೆ ಬೈಸಿಕಲ್‌ನ ಬಳಕೆ ಹೆಚ್ಚಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೈಸಿಕಲ್ ಬೇಡಿಕೆಯು ಸಾಮಾನ್ಯವಾಗಿ ಹೆಚ್ಚಾಗಿದೆ.

ಕೋವಿಡ್ -19 ಸಾಂಕ್ರಾಮಿಕವು ಫಿಟ್‌ನೆಸ್ ಪ್ರಜ್ಞೆ ಮತ್ತು ವಿರಾಮದ ಅಗತ್ಯತೆಗಳನ್ನು ಸುಧಾರಿಸುವ ಕಾರಣದಿಂದಾಗಿ ಬೈಸಿಕಲ್‌ಗಳಿಗೆ ಬೇಡಿಕೆಯನ್ನು ಹೆಚ್ಚಿಸಿದೆ.

 

ಬೈಸಿಕಲ್ ಬೆಳವಣಿಗೆ ಶೇ. 100ರಷ್ಟು ಹೆಚ್ಚಳ ಸಾಧ್ಯತೆ

ಬೈಸಿಕಲ್ ಬೆಳವಣಿಗೆ ಶೇ. 100ರಷ್ಟು ಹೆಚ್ಚಳ ಸಾಧ್ಯತೆ

''ಪ್ರೀಮಿಯಂ ಬೈಸಿಕಲ್ ಬೆಳವಣಿಗೆಯು ಕೋವಿಡ್ ಪೂರ್ವದ ಕಾಲಕ್ಕಿಂತ ಆರು ಪಟ್ಟು ಹೆಚ್ಚಾಗಿದೆ. ನಾವು ಪ್ರಸ್ತುತ 2022 ರ ಆರ್ಥಿಕ ವರ್ಷದಲ್ಲಿ ಕನಿಷ್ಠ 100 ಪ್ರತಿಶತದಷ್ಟು ಬೆಳವಣಿಗೆಯನ್ನು ನೋಡುತ್ತಿದ್ದೇವೆ, ಏಕೆಂದರೆ ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ಪ್ರಾರಂಭವಾದ ಬೈಸಿಕಲ್‌ಗಳಿಗೆ ಬಲವಾದ ಬೇಡಿಕೆ ಮುಂದಿನ ಎರಡು ವರ್ಷಗಳವರೆಗೆ ಮುಂದುವರಿಯಲಿದೆ" ಎಂದು ಫೈರ್‌ಫಾಕ್ಸ್ ಬೈಕ್‌ಗಳ ಸಿಇಒ ಸುಕಂತಾ ದಾಸ್ ಹೇಳಿದ್ದಾರೆ.

'' 2020ರ ಮೇ ತಿಂಗಳಿನಿಂದ ತಮ್ಮ ಕಂಪನಿಯು ಆನ್‌ಲೈನ್ ಮಾರಾಟದಲ್ಲಿ ಹತ್ತು ಪಟ್ಟು ಹೆಚ್ಚಳ ಕಂಡಿದೆ'' ಎಂದು ಸುಕಾಂತ್ ದಾಸ್‌ ಹೇಳಿದ್ದಾರೆ.

 ಸ್ಥಳೀಯ ಲಾಕ್‌ಡೌನ್ ವಿಸ್ತರಣೆ : ಬೇಡಿಕೆ ಮತ್ತು ಖರ್ಚಿನ ಮೇಲೆ ಆಳವಾದ ಪರಿಣಾಮ ಸ್ಥಳೀಯ ಲಾಕ್‌ಡೌನ್ ವಿಸ್ತರಣೆ : ಬೇಡಿಕೆ ಮತ್ತು ಖರ್ಚಿನ ಮೇಲೆ ಆಳವಾದ ಪರಿಣಾಮ

ಪ್ರಸಕ್ತ ಹಣಕಾಸು ವರ್ಷದಲ್ಲಿ ಬೈಸಿಕಲ್ ಬೇಡಿಕೆ ಶೇ. 20ರಷ್ಟು ಏರಿಕೆ

ಪ್ರಸಕ್ತ ಹಣಕಾಸು ವರ್ಷದಲ್ಲಿ ಬೈಸಿಕಲ್ ಬೇಡಿಕೆ ಶೇ. 20ರಷ್ಟು ಏರಿಕೆ

ಇತ್ತೀಚಿನ CRISIL ವರದಿಯ ಪ್ರಕಾರ ಭಾರತೀಯ ಬೈಸಿಕಲ್ ಉದ್ಯಮವು ಹೆಚ್ಚಿನ ಬೆಳವಣಿಗೆ ಕಾಣುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ 1.2 ಕೋಟಿ ಯುನಿಟ್‌ಗಳಿಗೆ ಹೋಲಿಸಿದರೆ ಮಾರಾಟವು 1.45 ಕೋಟಿ ಯುನಿಟ್‌ಗಳನ್ನು ಮುಟ್ಟುವ ಸಾಧ್ಯತೆಯೊಂದಿಗೆ ಬೈಸಿಕಲ್‌ಗಳ ಬೇಡಿಕೆ ಶೇಕಡಾ 20 ರಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ.

ಬೈಸಿಕಲ್ ತಯಾರಿಕೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ

ಬೈಸಿಕಲ್ ತಯಾರಿಕೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ

ವಿಶ್ವದಲ್ಲೇ ಬೈಸಿಕಲ್ ಉತ್ಪಾದಿಸುವ ದೇಶದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಬೈಸಿಕಲ್ ಉದ್ಯಮವು ಸ್ಟ್ಯಾಂಡರ್ಡ್‌, ಪ್ರೀಮಿಯಂ, ಕಿಡ್ಸ್ ಮತ್ತು ರಫ್ತು ಎಂದು ನಾಲ್ಕು ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಸ್ಟ್ಯಾಂಡರ್ಡ್ ಬೈಸಿಕಲ್‌ಗಳ ಬೇಡಿಕೆಯು ಅತಿದೊಡ್ಡ ವಿಭಾಗವಾಗಿದೆ.(2020 ರಲ್ಲಿ ಮಾರಾಟವಾದ ಎಲ್ಲಾ ಸೈಕಲ್‌ಗಳಲ್ಲಿ ಅರ್ಧದಷ್ಟು ಭಾಗವನ್ನು ಹೊಂದಿದೆ)

ಸರ್ಕಾರಿ ಇಲಾಖೆಗಳು ಈ ಸೈಕಲ್‌ಗಳನ್ನು ಟೆಂಡರ್ ಪ್ರಕ್ರಿಯೆಯ ಮೂಲಕ ಸಂಗ್ರಹಿಸಿ ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ ವಿತರಿಸುತ್ತವೆ. ಪ್ರೀಮಿಯಂ ಮತ್ತು ಮಕ್ಕಳ ಸೈಕಲ್‌ಗಳ ಬೇಡಿಕೆ (ಸುಮಾರು 40 ಪ್ರತಿಶತ) ಹೆಚ್ಚಿದ್ದು, ಫಿಟ್‌ನೆಸ್ ಮತ್ತು ವಿರಾಮ ಅಗತ್ಯಗಳಿಂದ ಬೇಡಿಕೆ ಹೊಂದಿದೆ. ಇನ್ನು ಇತರ ರೀತಿಯ ಬೈಸಿಕಲ್‌ಗಳ ರಫ್ತು ಮತ್ತು ಮಾರಾಟವು ಉಳಿದ ಶೇಕಡಾ 10 ರ ಬೇಡಿಕೆಯನ್ನು ಹೊಂದಿದೆ.

2020ರ ಆರ್ಥಿಕ ವರ್ಷದಲ್ಲಿ, ಸರ್ಕಾರದ ಖರೀದಿ ಕುಸಿದಿದ್ದರಿಂದ ಮತ್ತು ಹಲವಾರು ಬೈಸಿಕಲ್ ತಯಾರಕರು ಉತ್ಪಾದನೆ ನಿಲ್ಲಿಸಿದ್ದರಿಂದ, ಉತ್ಪಾದನೆಯು ಶೇಕಡಾ 22 ರಷ್ಟು ಭಾರಿ ಪ್ರಮಾಣದಲ್ಲಿ ಸಂಕುಚಿತಗೊಂಡಿತು. ಆದಾಗ್ಯೂ, ಉದ್ಯಮದ ಭವಿಷ್ಯವು ಹಣಕಾಸು ವರ್ಷ 2020-21 ರಲ್ಲಿ ಉತ್ತಮವಾಗಿದೆ.

 

Read more about: india ಭಾರತ
English summary

Covid Lockdown Impact: Bicycle Demand Surges By 20 Percent

The report says that demand for bicycles has shot up by 20 per cent with sales likely to touch 1.45 crore units compared with 1.2 crore units last fiscal.
Story first published: Monday, May 31, 2021, 14:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X