ಇತ್ತೀಚಿನ ದಿನಗಳಲ್ಲಿ ಡೆಬಿಟ್ ಕಾರ್ಡ್‌ಗಳಿಗಿಂತ ಕ್ರೆಡಿಟ್ ಕಾರ್ಡ್‌ಗಳ ಬಳಕೆ ಹೆಚ್ಚಾಗಿದೆ. ಇದಕ್ಕೆ ಕಾರಣವೆಂದರೆ ಕ್ರೆಡಿಟ್ ಕಾರ್ಡ್‌ಗಳಲ್ಲಿ ಹಲವು ಅನುಕೂಲಗಳು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. ಈ ಕಾರ್ಡ್‌ಗಳು ಆಪತ್ ಕಾಲದ ಆಪತ್ ಬಾಂಧವ ಎಂದರೆ ತಪ್ಪಾಗಲಾರದು. ಈ ಕಾರ್ಡ್‌ಗಳನ್ನು ಬಳಸಿ ಜನರು ಬಹಳಷ್ಟು ಹಣವನ್ನು ಉಳಿಸಬಹುದು.
ಡೆಬಿಟ್ ಕಾರ್ಡ್‌ಗಳಲ್ಲಿ ಇಲ್ಲದ ವ್ಯವಸ್ಥೆ ಕ್ರೆಡಿಟ್ ಕಾರ್ಡ್‌ನಲ್ಲಿ ಇರುವುದು ಕ್ಯಾಶ್ ಬ್ಯಾಕ್ ಸಿಗುತ್ತದೆ. ಇದರಿಂದ ನೀವು ಮಾರುಕಟ್ಟೆಯಲ್ಲಿ ಯಾವುದೇ ವಸ್ತುವನ್ನು ಕೊಂಡಾಗ ಕ್ಯಾಶ್ ಬ್ಯಾಕ್ ಲಭಿಸುತ್ತದೆ. ಅನೇಕ ಕಂಪನಿಗಳು ದಿನಸಿ, ಇಂಧನ, ಯುಟಿಲಿಟಿ ಬಿಲ್‌ಗಳು ಮತ್ತು ಶಾಪಿಂಗ್‌ನಲ್ಲಿ ಸ್ಥಿರ ಕ್ಯಾಶ್‌ಬ್ಯಾಕ್ ನೀಡುತ್ತವೆ.

ಕ್ರೆಡಿಟ್ ಕಾರ್ಡ್‌ನ ಒಂದು ದೊಡ್ಡ ಪ್ರಯೋಜನವೆಂದರೆ ಅದರ ಮೇಲೆ ನಿಮಗೆ ಕಂಪನಿಗಳಿಂದ ವಿಶೇಷ ರಿಯಾಯಿತಿಗಳು ಮತ್ತು ಕೊಡುಗೆಗಳ ಪ್ರಯೋಜನವನ್ನು ಸಹ ನೀಡಲಾಗುತ್ತದೆ. ವಿಶೇಷ ಬ್ರಾಂಡ್ ಕ್ರೆಡಿಟ್ ಕಾರ್ಡ್‌ಗಳನ್ನು ಅನೇಕ ಕಂಪನಿಗಳು ನೀಡುತ್ತವೆ. ಇವುಗಳ ಮೇಲೆ ವಿಶೇಷ ರಿಯಾಯಿತಿಗಳ ಲಾಭವನ್ನೂ ನೀವು ಪಡೆಯುತ್ತೀರಿ.
ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಕ್ರೆಡಿಟ್ ಕಾರ್ಡ್ ಉತ್ತಮ ಮಾಧ್ಯಮವಾಗಿದೆ. ನಿಮ್ಮ ಕ್ರೆಡಿಟ್ ಸ್ಕೋರ್ ಕೆಟ್ಟದಾಗಿದ್ದರೆ, ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಪಾವತಿಸುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಬಹುದು.

ನಿಮಗೆ ಬಡ್ಡಿ ರಹಿತ ಮೊತ್ತವನ್ನು ನೀಡುವ ಏಕೈಕ ಹಣಕಾಸು ವ್ಯವಸ್ಥೆ ಅಂದರೆ ಕ್ರೆಡಿಟ್ ಕಾರ್ಡ್. ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳು 50 ದಿನಗಳ ಬಡ್ಡಿ ರಹಿತ ಅವಧಿಯನ್ನು ಹೊಂದಿರುತ್ತವೆ. ಇದರ ಮೂಲಕ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಬಿಲ್ ಅನ್ನು ಸುಲಭವಾಗಿ ಪಾವತಿಸಬಹುದು.
ಹಣಕಾಸಿನ ಅಗತ್ಯವಿದ್ದಲ್ಲಿ, ಅದು ಸುಲಭವಾಗಿ ತುರ್ತು ನಿಧಿಯಾಗಿ ಕಾರ್ಯನಿರ್ವಹಿಸುತ್ತದೆ. ಅದರ ಸಹಾಯದಿಂದ ನೀವು ಸುಲಭವಾಗಿ ಹಣವನ್ನು ಪಡೆಯಬಹುದು. ಆದಾಗ್ಯೂ, ಕ್ರೆಡಿಟ್ ಕಾರ್ಡ್ ಹಣವನ್ನು ಬಳಸುವಾಗ ನಾವು ಜಾಗರೂಕರಾಗಿರಬೇಕು ಮತ್ತು ಸಮಯಕ್ಕೆ ಮರುಪಾವತಿ ಮಾಡಬೇಕು.


Click it and Unblock the Notifications