ನವದೆಹಲಿ, ಮಾರ್ಚ್ 16: ಸಿಬಿಲ್ ಸ್ಕೋರ್ - ಈ ಶಬ್ಧ ಯಾರಿಗೆ ಗೊತ್ತಿಲ್ಲ ಹೇಳಿ. ಮನೆ ಸಾಲ , ವಾಹನ ಸಾಲ, ವಯಕ್ತಿಕ ಸಾಲ ಹೀಗೆ ಬ್ಯಾಂಕ್ ನಿಂದ ಯಾವುದೇ ರೀತಿಯ ಸಾಲ ಪಿಕೆಯಬೇಕಿದ್ರೂ ಮೊದಲು ಪರಿಗಣನೆಗೆ ಬರೋದು ಈ ಸಿಬಿಲ್ ಸ್ಕೋರ್. ಅಷ್ಟೇ ಯಾಕೆ ಯಾವುದಾದ್ರೂ ಆನ್ಲೈನ್ ಆಪ್ ಗಳಲ್ಲಿ ಇನ್ಸ್ಟಂಟ್ ಲೋನ್ ತಗೋಬೇಕು ಅಂದ್ರೂ ಈ ಸಿಬಿಲ್ ಸ್ಕೋರ್ ಮುಖ್ಯ. ಆದ್ರೆ ಇತ್ತೀಚೆಗೆ ಈ ಸಿಬಿಲ್ ರಿಪೋರ್ಟ್ಸ್ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಹಿಂದೆಂದಿಗಿಂತಲೂ ದೊಡ್ಡ ಸಂಖ್ಯೆಯಲ್ಲಿ ದೂರುಗಳು ದಾಖಲಾಗಿದೆ.
ಅಷ್ಟಕ್ಕೂ ಈ ಸಿಬಿಲ್ ಸಂಸ್ಥೆ ಅಂದ್ರೆ ಇದೊಂದು ಖಾಸಗಿ ಸಂಸ್ಥೆ. ನಿಮ್ಮ ಹಣಕಾಸಿನ ವಹಿವಾಟು ಹೇಗಿದೆ, ಎಷ್ಟು ಲೋನ್ ನಿಮ್ಮ ಹೆಸರಲ್ಲಿದೆ. ಎಲ್ಲವನ್ನೂ ಸರಿಯಾಗಿ ಪಾವತಿ ಮಾಡುತ್ತಿದ್ದರೋ ಯಾವ್ದಾದ್ರೂ ಪೇಮೆಂಟ್ ಲೇಟ್ ಆಗಿದ್ಯೋ.. ಈ ಎಲ್ಲಾ ಅಂಶಗಳನ್ನು ಅಳೆದು ತೂಗಿ ನಿಮಗೆ ಸಿಬಿಲ್ ಸ್ಕೋರ್ ಅಂತ ಒಂದು ನಂಬರ್ ನೀಡಲಾಗತ್ತೆ. ಆ ನಂಬರ್ ಆಧರಿಸಿ ನಿಮಗೆ ಲೋನ್ ನೀಡಬೇಕಾ ಬೇಡ್ವಾ ಎಂಬುದನ್ನು ಬ್ಯಾಂಕ್ ನಿರ್ಧರಿಸುತ್ತವೆ . ಹೀಗೆ ಇದೊಂದು ಮಾನದಂಡವಾಗಿದೆ.

ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಏಪ್ರಿಲ್ 1, 2022 ಮತ್ತು ಮಾರ್ಚ್ 31, 2023 ರ ನಡುವೆ CIBIL ವಿರುದ್ಧ 796 ದೂರುಗಳು ದಾಖಲಾಗಿವೆ. ಮೂಲಗಳ ವರದಿಯ ಪ್ರಕಾರ ಇದು ಕ್ರೆಡಿಟ್ ಬ್ಯೂರೋ ವಿರುದ್ಧದ ದಾಕಲಾಗಿರುವ ಅತಿ ಹೆಚ್ಚು ದೂರಿನ ಸಂಖ್ಯೆ ಇದಾಗಿದೆ.
ಮಾರ್ಚ್ 11 ರಂದು ಪ್ರಕಟವಾದ ಆರ್‌ಬಿಐ ವಾರ್ಷಿಕ ವರದಿಯ ಪ್ರಕಾರ, ಆರ್‌ಬಿಐ ಕ್ರೆಡಿಟ್ ಮಾಹಿತಿ ಕಂಪನಿಗಳ (ಸಿಐಸಿ) ವಿರುದ್ಧ ಒಟ್ಟು 1,039 ದೂರುಗಳನ್ನು ವರದಿ ಮಾಡಿದೆ. ಈ ಪೈಕಿ ಹೆಚ್ಚಿನ ದೂರುಗಳು CIC ಗಳ ವಿರುದ್ಧ ಸಾಲಗಳು ಮತ್ತು ಮುಂಗಡಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಬಗ್ಗೆ ಆಗಿದೆ. ಉದಾಹರಣೆಗೆ, CIBIL ಸಾಲಗಳು ಮತ್ತು ಮುಂಗಡಗಳಿಗಾಗಿ 581 ದೂರುಗಳನ್ನು ಮತ್ತು ಕ್ರೆಡಿಟ್ ಕಾರ್ಡ್‌ಗಳ ವಿವಾದಗಳಿಗೆ 42 ದೂರುಗಳು ಬಂದಿದೆ
ಆಗಸ್ಟ್ 2022 ರವರೆಗೆ, ಈ CIC ಗಳ ವಿರುದ್ಧ ದೂರು ನೀಡಿರುವ ಜನರು ತಮ್ಮ ಕ್ರೆಡಿಟ್ ಸ್ಕೋರ್ ವರದಿಗಳಲ್ಲಿನ ವ್ಯತ್ಯಾಸಗಳು ಆಗಿದ್ದು ಈ ಕುರಿತು ತಮ್ಮ ಪ್ರತಿಕ್ರಿಯಿಸಲು ಈ ಕಂಪನಿಗಳು ವಿಫಲವಾಗಿದೆ. ಇದರಿಂದ ಹಲವಾರು ಮಂದಿಗೆ ಆರ್ಥಿಕ ಹಿನ್ನಡೆ ಉಂಟಾಗಿತ್ತು. ಉದಾಹರಣೆಗೆ, ಸಾಲದ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು ಅಥವಾ ಕಳಪೆ ಕ್ರೆಡಿಟ್ ಸ್ಕೋರ್ ಕಾರಣ ಹಣಕಾಸು ಸಂಸ್ಥೆಗಳಿಂದ ಉತ್ತಮ ಬಡ್ಡಿದರ ಅಲಭ್ಯವಾಗಿತ್ತು.
ನೀವು ಕೂಡ ದೂರು ದಾಖಲಿಸಬಹುದು !
ನೀವು ಓಂಬುಡ್ಸ್‌ಮನ್‌ಗೆ ಹಲವಾರು ರೀತಿಯಲ್ಲಿ ದೂರು ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ದೂರು ಸಲ್ಲಿಸಲು, ನೀವು https://cms.rbi.org.in ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬಹುದು. [email protected] ಗೆ ಇಮೇಲ್ ಕಳುಹಿಸುವ ಮೂಲಕ ಅಥವಾ ಟೋಲ್-ಫ್ರೀ ಸಂಖ್ಯೆ 14448 ನಲ್ಲಿ ಸಂಪರ್ಕ ಕೇಂದ್ರಕ್ಕೆ ಕರೆ ಮಾಡುವ ಮೂಲಕ ದೂರು ನೀಡಬಹುದು . ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು 'ಕೇಂದ್ರೀಕೃತ ರಶೀದಿ'ಗೆ ಕಳುಹಿಸುವ ಮೂಲಕ ನಿಮ್ಮ ದೂರನ್ನು ಸಲ್ಲಿಸಬಹುದು. ಇದಕ್ಕಾಗಿಯೇ ವಿಚಾರಣಾ ಕೇಂದ್ರ'ವನ್ನು ಚಂಡೀಗಢದಲ್ಲಿ ಆರ್‌ಬಿಐ ಈಗಾಗಲೇ ಸ್ಥಾಪಿಸಿದೆ.
More From GoodReturns

ಹಣದುಬ್ಬರ ವರದಿ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ ಅಥವಾ ಹೆಚ್ಚಾಗುತ್ತಾ?

ಆರ್‌ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?



Click it and Unblock the Notifications