Edu -ಫಿನ್‌ಟೆಕ್ ಸ್ಟಾರ್ಟ್‌ಅಪ್‌ನಲ್ಲಿ ಕ್ರಿಕೆಟಿಗ ರೋಹಿತ್ ಶರ್ಮಾ ಹೂಡಿಕೆ

ಬೆಂಗಳೂರು, ಜೂನ್‌ 21: ಭಾರತದ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು LEO1, edu-fintech ಕಂಪನಿಯಲ್ಲಿ ಹೂಡಿಕೆ ಮಾಡುವ ಮೂಲಕ ಫಿನ್ಟೆಕ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಈ ಕಾರ್ಯತಂತ್ರ ದ ಹೂಡಿಕೆಯನ್ನು ಬುಧವಾರ, ಜೂನ್ 19 ರಂದು ಘೋಷಿಸಲಾಯಿತಾದರೂ ಸಂಸ್ಥೆಯೂ ರೋಹಿತ್ ಅವರ ಹೂಡಿಕೆಯ ಮೊತ್ತ ಮತ್ತು ಮೌಲ್ಯಮಾಪನವನ್ನು ಬಹಿರಂಗಪಡಿಸಿಲ್ಲ. LEO1, edu-fintech ಕಂಪನಿಯನ್ನು ಈ ಹಿಂದೆ ಫೈನಾನ್ಸ್‌ಪೀರ್ ಎಂದು ಕರೆಯಲಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ, ಕಂಪನಿಯು ಎರಡು ಹೂಡಿಕೆ ಸುತ್ತುಗಳ ಮೂಲಕ ಸುಮಾರು 290 ಕೋಟಿ ($35 ಮಿಲಿಯನ್) ನಿಧಿ ಸಂಗ್ರಹಿಸಿದೆ ಎಂದು ಸಂಸ್ಥೆ ತಿಳಿಸಿದೆ.

ಸ್ಟಾರ್ಟ್‌ಅಪ್‌ನಲ್ಲಿ ಕ್ರಿಕೆಟಿಗ  ರೋಹಿತ್ ಶರ್ಮಾ ಹೂಡಿಕೆ

LEO1 ಬಗ್ಗೆ

ಈ LEO1 edu-fintech ಕಂಪನಿಯೂ LEO1 ಶಿಕ್ಷಣ ಸಂಸ್ಥೆಗಳಲ್ಲಿ ದೀರ್ಘಾವಧಿಯಿಂದ ಬಾಕಿ ಉಳಿದಿರುವ ನಗದು ಹರಿವಿನ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ ಮತ್ತು ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ನವೀನ ಪರಿಹಾರಗಳನ್ನು ಒದಗಿಸುತ್ತದೆ.

LEO1 ಗಮನಾರ್ಹ ಹೂಡಿಕೆದಾರರು:

ರೋಹಿತ್ ಶರ್ಮಾ ಅವರ ಹೂಡಿಕೆಯ ಜೊತೆಗೆ, LEO1 ಗಮನಾರ್ಹ ಹೂಡಿಕೆದಾರರಿದ್ದು ಅವರೆಂದರೆ QED ಇನ್ವೆಸ್ಟರ್ಸ್, ಆವಿಷ್ಕಾ ರ್ ಕ್ಯಾಪಿಟಲ್, ಆರ್ಡೆಂಟ್ ಇನ್ವೆಸ್ಟರ್ಸ್ LLC ಮತ್ತು 9 ಯುನಿಕಾರ್ನ್ ಗಳಿಂದ ಹಣವನ್ನು ಪಡೆದುಕೊಂಡಿದೆ.

ಪಾಲುದಾರಿಕೆಯ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು?

"ಕಲಿಕೆಯಲ್ಲಿ ಕ್ರಾಂತಿಯನ್ನುಂಟು ಮಾಡುವ ಮತ್ತು ಗುಣಮಟ್ಟದ ಶಿಕ್ಷಣವನ್ನು ಎಲ್ಲರಿಗೂ ಪ್ರವೇಶಿಸುವಂತೆ ಮಾಡುವ ಉದ್ದೇಶದಲ್ಲಿ LEO1 ಅನ್ನು ಬೆಂಬಲಿಸಲು ನಾನು ರೋಮಾಂಚನಗೊಂಡಿದ್ದೇನೆ. . ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಜೀವನದಲ್ಲಿ ಗಮನಾರ್ಹವಾದ ಬದಲಾವಣೆಯನ್ನು ಉಂಟುಮಾಡುವ ಅವರ ಸಕಾರಾತ್ಮಕ ಪರಿಣಾಮ ಬೀರುವ ಅವರ ಕೆಲಸ ಮಾಡುವ ವಿಧಾನ, ಅಚಲವಾದ ಬದ್ಧತೆ, ಮತ್ತು ಉದ್ಯಮಶೀಲ ಮನೋಭಾವ ಸ್ಪೂರ್ತಿದಾಯಕವಾಗಿದೆ" ಎಂದು ಹೇಳಿದ್ದಾರೆ.

ಹಣಕಾಸಿನ SAAS ಎಂದರೇನು?

LEO1 ಇತ್ತೀಚೆಗೆ 'ಫೈನಾನ್ಶಿಯಲ್ SAAS' ಉತ್ಪನ್ನವನ್ನು ಪರಿಚಯಿಸಿದೆ .ಇದು ಶಿಕ್ಷಣ ವಲಯದೊಳಗಿನ ಹಣಕಾಸಿನ ವಹಿವಾಟುಗಳಿಗೆ ಸಮಗ್ರ ಪರಿಹಾರವನ್ನು ಒದಗಿಸುತ್ತದೆ. ಇದು ಕ್ಯಾಂಪಸ್ ಆವರಣದಲ್ಲಿ ಸ್ಮಾರ್ಟ್ ಕಾರ್ಡ್ ಮತ್ತು LEO1 ಸ್ಮಾರ್ಟ್ ಐಡಿ ಕಾರ್ಡ್ ಎರಡರಲ್ಲೂ ಕಾರ್ಯನಿರ್ವಹಿಸುವ LEO1 ಪಾವತಿ ಕಾರ್ಡ್ ಅನ್ನು ಒಳಗೊಂಡಿದೆ. ಕ್ಯಾಂಪಸ್‌ನಲ್ಲಿ ಅಥವಾ ಹೊರಗೆ ಇನ್‌ಸ್ಟಿಟ್ಯೂಟ್ ಶುಲ್ಕಗಳು, ಚಿಲ್ಲರೆ ಖರೀದಿಗಳು, ಆನ್‌ಲೈನ್ ವಹಿವಾಟುಗಳು ಮತ್ತು ಎಟಿಎಂ ವಿಥ್ ಡ್ರಾ, ಟ್ಯಾಪ್ ಆಂಡ್ ಪೇ ಮುಂದಾದ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ. ಅದೇ ಸಮಯದಲ್ಲಿ, ಸ್ಮಾರ್ಟ್ ಐಡಿ ಕಾರ್ಡ್‌ನ ಪಾತ್ರವು ಕ್ಯಾಂಪಸ್ ಸೌಲಭ್ಯಗಳು ಮತ್ತು ಸೇವೆಗಳಿಗೆ ಪ್ರವೇಶವನ್ನು ಸುಗಮಗೊಳಿಸುತ್ತದೆ, ವಿದ್ಯಾರ್ಥಿಗಳಿಗೆ ತೊಂದರೆ-ಮುಕ್ತ ಅನುಭವವನ್ನು ಖಚಿತಪಡಿಸುತ್ತದೆ.

ವೇದಿಕೆಯು ಅಗತ್ಯವಿರುವವರಿಗೆ ತಕ್ಷಣದ ಶಿಕ್ಷಣ ಸಾಲಗಳನ್ನು ನೀಡುತ್ತದೆ, ಶೈಕ್ಷಣಿಕ ವೆಚ್ಚಗಳಿಗೆ ನಿಧಿಯ ಪ್ರವೇಶವನ್ನು ಸರಳಗೊಳಿಸುತ್ತದೆ. ಫಿನ್‌ಟೆಕ್ ಕಂಪನಿಯು ರಾಷ್ಟ್ರವ್ಯಾಪಿ 31 ಪ್ರಮುಖ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ.

LEO1 ನ CEO ಮತ್ತು ಸಂಸ್ಥಾಪಕ ರೋಹಿತ್ ಗಜ್ಭಿಯೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಅನಿಯಮಿತ ನಗದು ಹರಿವಿನ ನಿರ್ಣಾಯಕ ಸಮಸ್ಯೆಯನ್ನು ಪರಿಹರಿಸುವ ಕಂಪನಿಯ ಧ್ಯೇಯವನ್ನು ಒತ್ತಿ ಹೇಳಿದ್ದು, " ಶಿಕ್ಷಣವು ಮನೆಯ ಗಳಿಕೆಯ ಶೇಕಡಾ 15-20 ರಷ್ಟು ಗಮನಾರ್ಹ ಭಾಗವನ್ನು ಹೊಂದಿರುತ್ತದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಸಕಾಲಿಕ ಪಾವತಿಗಳನ್ನು ಹಲವು ಬಾರಿ ಸಾಧ್ಯವಾಗುವುದಿಲ್ಲ. LEO1 ಈ ಸವಾಲುಗಳನ್ನು ನಮ್ಮ 'ಫೈನಾನ್ಶಿಯಲ್ SAAS' ಮಾದರಿಯ ಮೂಲಕ ಪರಿಹರಿಸುತ್ತದೆ ಮತ್ತು ಅದು ಅವರಲ್ಲಿ ಜವಾಬ್ದಾರಿಯುತ ಆರ್ಥಿಕ ನಡವಳಿಕೆಯನ್ನು ಪ್ರೇರೇಪಿಸುತ್ತದೆ" ಎಂದು ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+