ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಈಗಾಗಲೇ ತೈಲ ಬೇಡಿಕೆಯು ನೆಲಕಚ್ಚಿದ್ದು, ಬೇಡಿಕೆಯು ತೀವ್ರ ಕುಸಿದಿದೆ ಹಾಗೂ ಪೂರೈಕೆ ಹೆಚ್ಚಳ ಮುಂದುವರಿದಿದೆ. ಇದರಿಂದಾಗಿ ಈಗಾಗಲೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ತೈಲ ಶೇಖರಣಾ ಘಟಕಗಳು ಭರ್ತಿಯಾಗುವ ಹಂತ ತಲುಪಿದ್ದು, ಅಮೆರಿಕಾದಲ್ಲಿನ ತೈಲ ಶೇಖರಣಾ ಘಟಕಗಳು ಸಾರ್ವಕಾಲಿಕ ಗರಿಷ್ಟ ಮಟ್ಟ ತಲುಪಿದೆ.
ಸದ್ಯ ಬೇಡಿಕೆ ಕುಸಿತ ಮತ್ತು ಪೂರೈಕೆ ಹೆಚ್ಚಳದಿಂದಾಗಿ ಶೇಖರಣಾ ಸ್ಥಳದ ಸಂಭಾವ್ಯ ಕೊರತೆಯು ಎದುರು ಕಾಣಸಿಗುತ್ತದೆ. ಅಮೆರಿಕಾದಲ್ಲಿ ಡಬ್ಲ್ಯೂಟಿಐ ಕ್ಯಾಶ್ ರೋಲ್ ಎಂದು ಕರೆಯಲ್ಪಡುವ ತೈಲ ದಾಸ್ತಾನು ಇನ್ನು ಕೆಲವೇ ದಿನಗಳಲ್ಲಿ ಭರ್ತಿಯಾಗಲಿದೆ. 2008ರ ಬಳಿಕೆ ಅತ್ಯಂತ ಕಡಿಮೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಇದರಿಂದಾಗಿ ತೈಲ ಬೆಲೆಗಳು ಸೋಮವಾರ ಮತ್ತಷ್ಟು ಕುಸಿದಿದೆ.

ಏಪ್ರಿಲ್ 17 ರ ವಾರದಲ್ಲಿ ಯುಎಸ್ ಕಚ್ಚಾ ದಾಸ್ತಾನುಗಳು 518.6 ಮಿಲಿಯನ್ ಬ್ಯಾರೆಲ್‌ಗಳಿಗೆ ಏರಿದ ನಂತರ ಯುಎಸ್ ತೈಲ ಭವಿಷ್ಯವು ನಷ್ಟಕ್ಕೆ ಕಾರಣವಾಯಿತು. ಇದು 2017 ರಲ್ಲಿ ಸ್ಥಾಪಿಸಲಾದ 535 ಮಿಲಿಯನ್ ಬ್ಯಾರೆಲ್‌ಗಳ ಸಾರ್ವಕಾಲಿಕ ದಾಖಲೆಯ ಸಮೀಪದಲ್ಲಿದೆ. ಆದರೆ ಸಮುದ್ರದಲ್ಲಿನ ಕಚ್ಚಾ ತೈಲ ಸಂಗ್ರಹವು ಸಾರ್ವಕಾಲಿಕ ಗರಿಷ್ಠ 160 ಮಿಲಿಯನ್ ಬ್ಯಾರೆಲ್‌ಗಳಿಗೆ ತಲುಪಿದೆ.
ಯು.ಎಸ್. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ ಫ್ಯೂಚರ್ಸ್ 0122 ಜಿಎಂಟಿ ವೇಳೆಗೆ ಬ್ಯಾರೆಲ್‌ಗೆ 1.22 ಡಾಲರ್ ಅಥವಾ 7.2 ಪರ್ಸೆಂಟ್‌ರಷ್ಟು ಇಳಿದು 15.72 ಡಾಲರ್‌ಗೆ ತಲುಪಿದೆ, ಆದರೆ ಬ್ರೆಂಟ್ ಕಚ್ಚಾ ಬ್ಯಾರೆಲ್‌ಗೆ 33 ಸೆಂಟ್ಸ್ ಅಥವಾ 1.5 ಪರ್ಸೆಂಟ್ ಇಳಿದು 21.11 ಡಾಲರ್‌ಗೆ ತಲುಪಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Renault Duster 2026: ಕಡಿಮೆ ಬೆಲೆಗೆ ಉತ್ತಮ ಕಾರು; 10.49 ಲಕ್ಷ ಬೆಲೆಯಲ್ಲಿ ಹೊಸ ರೆನಾಲ್ಟ್ ಡಸ್ಟರ್-ವಿಶೇಷತೆ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ



Click it and Unblock the Notifications