For Quick Alerts
ALLOW NOTIFICATIONS  
For Daily Alerts

ತೈಲ ಬಿಕ್ಕಟ್ಟು ಬಗೆಹರಿಯುವ ವಿಶ್ವಾಸ:ಕಚ್ಚಾ ತೈಲ ಬೆಲೆ ಏರಿಕೆ

|

ರಷ್ಯಾ ಮತ್ತು ಸೌದಿ ಅರೇಬಿಯಾ ನಡುವೆ ತೈಲ ಬಿಕ್ಕಟ್ಟು ಶೀಘ್ರದಲ್ಲೇ ಶಮನಗೊಳ್ಳುವ ಸಾಧ್ಯತೆಯಿರುವುದರಿಂದ ಗುರುವಾರ ಕಚ್ಚಾ ತೈಲ ಬೆಲೆ ಏರಿಕೆ ಕಂಡಿದೆ.

ಉತ್ಪಾದನೆ ತಗ್ಗಿಸಲು ಈ ಮೊದಲು ಒಪ್ಪದ ರಷ್ಯಾ ಇದೀಗ ತಾನೂ ಉತ್ಪಾದನೆ ಕಡಿತಗೊಳಿಸಲು ಸಿದ್ಧವಿರುವುದಾಗಿ ತಿಳಿಸಿದೆ. ಗುರುವಾರ ಒಪೆಕ್ ರಾಷ್ಟ್ರಗಳು ಸೇರಿದಂತೆ ಪ್ರಮುಖ ತೈಲ ಉತ್ಪಾದಿಸುವ ದೇಶಗಳು ಒಪ್ಪಂದಕ್ಕೆ ಬರುವ ಕುರಿತು ವಿಡಿಯೋ ಕಾನ್ಫರೆನ್ಸ್ ಸಭೆ ನಿಗದಿಯಾಗಿತ್ತು.

ತೈಲ ಬಿಕ್ಕಟ್ಟು ಬಗೆಹರಿಯುವ ವಿಶ್ವಾಸ:ಕಚ್ಚಾ ತೈಲ ಬೆಲೆ ಏರಿಕೆ

 

ಈ ಹಿಂದಿನ ಒಪೆಕ್ ರಾಷ್ಟ್ರಗಳ ಒತ್ತಾಯದಂತೆ ರಷ್ಯಾ ಕೂಡ ಪ್ರತಿ ದಿನ 16 ಲಕ್ಷ ಬ್ಯಾರೆಲ್‌ಗಳ ಉತ್ಪಾದನೆ ತಗ್ಗಿಸಲು ಪ್ರಕಟಿಸಿದೆ. ಈ ಪ್ರಕಟಣೆ ಆದ ಬಳಿಕ ಡಾಲರ್ ಎದುರಿನ ರಷ್ಯಾದ ಕರೆನ್ಸಿ ರೂಬಲ್ ಬೆಲೆ ಏರಿಕೆಯಾಗಿತ್ತು.

ಗುರುವಾರ ನಡೆದ ಸಭೆ ಬಳಿಕ ಪ್ರತಿ ದಿನ 1.20 ಕೋಟಿ ಬ್ಯಾರೆಲ್‌ಗಳಷ್ಟು ಉತ್ಪಾದನೆ ತಗ್ಗಿಸುವ ಸಂಬಂಧ ಚರ್ಚೆ ನಡೆಸಲಾಗಿದೆ. ಇತರೆ ಉತ್ಪಾದಕರು ಪ್ರತಿ ದಿನ 50 ಲಕ್ಷ ಬ್ಯಾರೆಲ್‌ಗಳಷ್ಟು ಕಡಿತಗೊಳಿಸಬೇಕಿದೆ ಎಂದು 'ಒಪೆಕ್' ಮೂಲಗಳು ತಿಳಿಸಿದ್ದವು. ಈ ಎಲ್ಲಾ ಬೆಳವಣಿಗೆಯಿಂದಾಗಿ ಗುರುವಾರ ಕಚ್ಛಾ ತೈಲ ಬೆಲೆ ಏರಿಕೆ ಕಂಡಿತು.

English summary

Crude Oil Price Up On Hopes Of Production Cut

Crude oil prices strengthened ahead of their settlement yesterday, by hopes that the OPEC and its allies will strike a production cut agreement
Story first published: Friday, April 10, 2020, 9:02 [IST]
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more