ಜಾಗತಿಕ ಮಟ್ಟದ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿದಿದೆ. ಬುಧವಾರ (ಮೇ 11)ದಂದು ಬಿಟ್‌ಕಾಯಿನ್ ಸೇರಿದಂತೆ ಹಲವು ಡಿಜಿಟಲ್ ಕರೆನ್ಸಿ ಮೌಲ್ಯ ಕುಸಿತ ಕಂಡು ಬಂದಿದೆ. ಕಳೆದ ಮೂರು ದಿನಗಳಲ್ಲಿ 1.66 ಟ್ರಿಲಿಯನ್ ಡಾಲರ್ ನಂತೆ ವ್ಯವಹರಿಸುತ್ತಿದ್ದ ಕ್ರಿಪ್ಟೋ ಮಾರುಕಟ್ಟೆ ಈ ಸಮಯಕ್ಕೆ 1.36 ಟ್ರಿಲಿಯನ್ ಡಾಲರ್ ನಂತೆ ವ್ಯವಹರಿಸುತ್ತಿದೆ.
ಈ ಸಮಯಕ್ಕೆ ಪ್ರತಿ ಕಾಯಿನ್ ಬೆಲೆ $30,850.42ರಂತೆ ವ್ಯವಹರಿಸುತ್ತಿದೆ. ಜಾಗತಿಕವಾಗಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಕಳೆದ 24 ಗಂಟೆಗಳಲ್ಲಿ ಶೇ 5.30ರಷ್ಟು ಇಳಿಮುಖವಾಗಿದ್ದು, ಕಳೆದ ವಾರದಲ್ಲಿ ಶೇ 22 ರಷ್ಟು ಕುಸಿತ ಕಂಡಿದೆ. ಟೆರಾ ಯುಎಸ್ ಡಿ (ಯುಎಸ್ ಟಿ) ಬೆಲೆ ಶೇ 50ರಷ್ಟು ಕುಸಿತ ಕಂಡು 0.4408 ಡಾಲರ್ ನಂತೆ ವ್ಯವಹರಿಸುತ್ತಿದೆ. ಕಳೆದ 7 ದಿನಗಳಲ್ಲಿ ಶೇ 94ರಷ್ಟು ಕುಸಿತ ಕಂಡು, 24 ಗಂಟೆಗಳಲ್ಲಿ 82ರಷ್ಟು ಕುಸಿತವಾಗಿದೆ.
US ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (FOMC) ಕಳೆದ ವಾರ ಬಡ್ಡಿದರಗಳನ್ನು ಶೇಕಡಾ 0.5 ರಷ್ಟು ಹೆಚ್ಚಿಸಲು ಮತ ಹಾಕಿದೆ. ಇದು ಎರಡು ದಶಕಗಳಲ್ಲಿ ಅದರ ಅತಿದೊಡ್ಡ ಮೇಲ್ಮುಖ ಹೊಂದಾಣಿಕೆಯನ್ನು ಗುರುತಿಸುತ್ತದೆ.

ಈ ವರ್ಷದಲ್ಲಿ ಬಿಟ್ ಕಾಯಿನ್ ಶೇ 20ರಷ್ಟು ಇಳಿಕೆಯಾಗಿದೆ. ಭಾನುವಾರದಂದು ಬಿಟ್ ಕಾಯಿನ್ ಅಲ್ಲದೆ, ಎರಡನೇ ಅತಿದೊಡ್ಡ ಡಿಜಿಟಲ್ ಕರೆನ್ಸಿ ಎಥೆರಿಯಂ ಶೇ 6.82ರಷ್ಟು ಕುಸಿತ ಕಂಡು $2,264.95ನಂತೆ ವ್ಯವಹರಿಸುತ್ತಿದೆ. ಬಿಟ್‌ಕಾಯಿನ್ ಏಪ್ರಿಲ್ ತಿಂಗಳಲ್ಲಿ ಶೇಕಡಾ 17 ರಷ್ಟು ಮೌಲ್ಯ ಕುಸಿತ ಕಂಡು, ಕೆಟ್ಟ ಫಲಿತಾಂಶ ವರದಿ ಮಾಡಿದೆ. ಇದು ಈ ವರ್ಷದ ಕೆಟ್ಟ ಮಾಸಿಕ ಕಾರ್ಯಕ್ಷಮತೆಯಾಗಿದೆ.
ಹೊಸ ವರದಿಯ ಪ್ರಕಾರ, ತಮ್ಮ ವ್ಯಾಲೆಟ್‌ಗಳಿಗೆ ಪಾಸ್‌ವರ್ಡ್‌ಗಳನ್ನು ಮರೆತುಬಿಡುವುದು ಅಥವಾ ಅವರ "seed phrases" ದಾಖಲು ಮಾಡುವಾಗ ತಪ್ಪು ಮಾಡುವಂತಹ ವಿವಿಧ ಕಾರಣಗಳಿಂದಾಗಿ ಬಿಟ್‌ಕಾಯಿನ್ ಹೂಡಿಕೆದಾರರು ಈ ವರ್ಷ $545 ಮಿಲಿಯನ್ ವರೆಗೆ ಕಳೆದುಕೊಳ್ಳುವ ಸಾಧ್ಯತೆಯಿದೆ.
seed phrase ನಿಮ್ಮ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ನಿಂದ ರಚಿಸಲಾದ ಪದಗಳ ಸರಣಿಯಾಗಿದ್ದು ಅದು ಆ ವ್ಯಾಲೆಟ್‌ಗೆ ಸಂಬಂಧಿಸಿದ ಕ್ರಿಪ್ಟೋಗೆ ಪ್ರವೇಶವನ್ನು ನೀಡುತ್ತದೆ. ಎಲ್ಲಾ ಬಿಟ್‌ಕಾಯಿನ್‌ಗಳಲ್ಲಿ ಕನಿಷ್ಠ 20 ಪ್ರತಿಶತದಷ್ಟು ಕಳೆದುಹೋಗಿದೆ.
ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯಾಗಿದ್ದು, ಇದು ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ ಆಗಿದೆ. ಈ ಕ್ರಿಪ್ಟೋ ಕರೆನ್ಸಿಗೆ ಯಾವುದೇ ರೀತಿಯ ಮುದ್ರಣ ರೂಪ ಇರುವುದಿಲ್ಲ. ಬಿಟ್ ಕಾಯಿನ್ ಎಂಬ ಕರೆನ್ಸಿಯು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿರುತ್ತದೆ. ರೂಪಾಯಿ, ಡಾಲರ್, ಯುರೋಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕ್ ಇದ್ಯಾವುದು ಇರುವುದಿಲ್ಲ.
ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಪ್ರಸ್ತುತ ಮಾರುಕಟ್ಟೆ ಮೌಲ್ಯ 582,234,930,289 ಡಾಲರ್ ನಷ್ಟಿದೆ. ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 68,990.90 ಡಾಲರ್ ಆಗಿದೆ. ಎಥೆರಿಯಮ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 281,352,801,405 ಯುಎಸ್ ಡಾಲರ್ ಆಗಿದೆ. ಎಥೆರಿಯಮ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 4,865.57 ಡಾಲರ್‌ನಷ್ಟಿದೆ.


Click it and Unblock the Notifications