ಕ್ರಿಪ್ಟೋಕರೆನ್ಸಿಗಳು ಭಾರತದ ಹಣಕಾಸಿನ ಸ್ಥಿರತೆ ಮತ್ತು ವಿತ್ತೀಯ ಸ್ಥಿರತೆಗೆ ಗಂಭೀರ ಬೆದರಿಕೆಯನ್ನುಂಟು ಮಾಡುತ್ತಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಎಚ್ಚರಿಸಿದ್ದಾರೆ. ಅವರ ಪ್ರಕಾರ, ಕ್ರಿಪ್ಟೋಕರೆನ್ಸಿಗಳು ರಿಸರ್ವ್ ಬ್ಯಾಂಕ್ ಗೆ ಹಣದ ಪೂರೈಕೆಯನ್ನು ನಿಯಂತ್ರಿಸುವ ಅಧಿಕಾರವನ್ನು ಕಸಿದುಕೊಳ್ಳವ ಪರಿಸ್ಥಿತಿ ಸೃಷ್ಟಿಯಾಗಿ ಇದು ಆರ್ಥಿಕ ಅಸ್ಥಿರತೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಪೀಟರ್‌ಸನ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್‌ನ್ಯಾಶನಲ್ ಎಕನಾಮಿಕ್ಸ್‌ಗೆ ಭೇಟಿ ನೀಡಿದ ಸಂದರ್ಭ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, " ಕ್ರಿಪ್ಟೋಕರೆನ್ಸಿಗಳು ಹಣಕಾಸಿನ ವ್ಯವಸ್ಥೆಯಲ್ಲಿ ಪ್ರಾಬಲ್ಯ ಸಾಧಿಸಲು ಅವಕಾಶ ನೀಡಬಾರದು. ಯಾಕೆಂದರೆ ಕ್ರಿಪ್ಟೋಕರೆನ್ಸಿಗಳು ದೇಶದ ಆರ್ಥಿಕ ಮತ್ತು ಹಣಕಾಸಿನ ಸ್ಥಿರತೆಗೆ ಗಂಭೀರ ಬೆದರಿಕೆಯನ್ನುಂಟು ಮಾಡಬಹುದು.

ಇದು ದೊಡ್ಡ ಆರ್ಥಿಕ ಸ್ಥಿರತೆಯ ಅಪಾಯಗಳು ಮತ್ತು ಬೃಹತ್ ವಿತ್ತೀಯ ಅಸ್ಥಿರತೆಯನ್ನುಂಟು ಮಾಡುವ ಪರಿಸ್ಥಿತಿಯನ್ನು ಸೃಷ್ಟಿಸಬಹುದು. ಇದು ಬ್ಯಾಂಕಿಂಗ್ ವ್ಯವಸ್ಥೆಗೆ ತೀವ್ರ ಅಪಾಯವನ್ನುಂಟುಮಾಡುತ್ತದೆ. ಪರಿಣಾಮ ರಿಸರ್ವ್ ಬ್ಯಾಂಕ್ ಹಣದ ಪೂರೈಕೆಯ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳಬಹುದು" ಎಂದು ಎಚ್ಚರಿಸಿದ್ದಾರೆ.
ಆರ್‌ಬಿಐ ದೇಶದಲ್ಲಿರುವ ಹಣದ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಆರ್ಥಿಕ ವ್ಯವಸ್ಥೆಯನ್ನು ಸ್ಥಿರವಾಗಿರಿಸುತ್ತದೆ. ಕ್ರಿಪ್ಟೋಕರೆನ್ಸಿಗಳು ಈ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತವೆ ಏಕೆಂದರೆ ಅವುಗಳನ್ನು ಯಾವುದೇ ಒಂದು ದೇಶ ಅಥವಾ ಸರ್ಕಾರ ನಿಯಂತ್ರಿಸುವುದಿಲ್ಲ. ಇದರಿಂದ ಕೇಂದ್ರ ಬ್ಯಾಂಕ್‌ಗೆ ಹಣದ ಪೂರೈಕೆಯನ್ನು ನಿಖರವಾಗಿ ಅಂದಾಜಿಸುವುದು ಮತ್ತು ನಿಯಂತ್ರಿಸುವುದು ಕಷ್ಟವಾಗುತ್ತದೆ.
ಒಂದು ವೇಳೆ ಆರ್‌ಬಿಐ ಆರ್ಥಿಕತೆಯಲ್ಲಿ ಹಣದ ಪೂರೈಕೆಯ ನಿಯಂತ್ರಣವನ್ನು ಕಳೆದುಕೊಂಡರೆ, ಆ ಸಂದರ್ಭ ಆರ್‌ಬಿಐ ವ್ಯವಸ್ಥೆಯಲ್ಲಿ ಲಭ್ಯವಿರುವ ದ್ರವ್ಯತೆಯನ್ನು ಹೇಗೆ ಪರಿಶೀಲಿಸುತ್ತದೆ? ಹಣದ ಪೂರೈಕೆಯ ನಿಯಂತ್ರಣ ಕಳೆದುಕೊಂಡರೆ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ? ಆದ್ದರಿಂದ, ನಾವು ಕ್ರಿಪ್ಟೋ ಆರ್ಥಿಕತೆಗೆ ಬಹು ದೊಡ್ಡ ಅಪಾಯವಾಗಿದೆ ಹೀಗಾಗಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇದರ ವಹಿವಾಟುಗಳ ಬಗ್ಗೆ ತಿಳುವಳಿಕೆ ಇರಬೇಕು, "ಎಂದು ಹೇಳಿದ್ದಾರೆ.
"ಕ್ರಿಪ್ಟೋಕರೆನ್ಸಿಗಳು ಆರ್ಥಿಕ ವ್ಯವಸ್ಥೆಯಲ್ಲಿ ಹೊಸ ಆಯಾಮವನ್ನು ತಂದಿರುವುದು ನಿಜ. ಆದರೆ ಇದರೊಂದಿಗೆ ಅನೇಕ ಸಮಸ್ಯೆಗಳೂ ಹುಟ್ಟಿಕೊಂಡಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಗ್ಗಟ್ಟು ಅತ್ಯಗತ್ಯ.
ಕ್ರಿಪ್ಟೋಕರೆನ್ಸಿಗಳು ಪ್ರೋತ್ಸಾಹಿಸಬೇಕಾದ ವಿಚಾರವಲ್ಲ ಎಂಬುವುದು ನನ್ನ ಭಾವನೆ ಮತ್ತು ಈ ನನ್ನ ದೃಷ್ಟಿಕೋನವು ಹೆಚ್ಚು ಜನಪ್ರಿಯವಾದ ದೃಷ್ಟಿಕೋನವಲ್ಲ. ಆದರೆ ಆರ್ಥಿಕ ಸ್ಥಿರತೆಯ ಪಾಲಕರಾಗಿ, ಕ್ರಿಪ್ಟೋಕರೆನ್ಸಿಗಳಲ್ಲಿನ ಸಂಭವನೀಯ ತೊಂದರೆಗಳ ಬಗ್ಗೆ ಸರ್ಕಾರಗಳು ಹೆಚ್ಚು ಜಾಗೃತರಾಗುತ್ತಿರುವ ಎಲ್ಲ ದೇಶದ ಕೇಂದ್ರ ಬ್ಯಾಂಕ್‌ಗಳಿಗೆ ಇದು ಒಂದು ಪ್ರಮುಖ ಕಾಳಜಿ ವಿಚಾರವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.
ಭಾರತವು ಕ್ರಿಪ್ಟೋಕರೆನ್ಸಿಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಜಾಗತಿಕವಾಗಿ ಗಮನ ಸೆಳೆದ ಮೊದಲ ದೇಶಗಳಲ್ಲಿ ಒಂದಾಗಿದೆ.. ಭಾರತದ ಅಧ್ಯಕ್ಷತೆಯಲ್ಲಿ ಜಿ20 ನಲ್ಲಿ, ವಿವಿಧ ದೇಶಗಳು ಕ್ರಿಪ್ಟೋಗಳನ್ನು ಹೇಗೆ ನಿಯಂತ್ರಿಸಬೇಕು, ಹೇಗೆ ವ್ಯವಹರಿಸಬೇಕು ಎಂಬುದರ ಕುರಿತು ಅಂತರರಾಷ್ಟ್ರೀಯ ತಿಳುವಳಿಕೆಯನ್ನು ಅಭಿವೃದ್ಧಿಪಡಿಸುವ ಒಪ್ಪಂದವಿತ್ತು. ಈ ನಿಟ್ಟಿನಲ್ಲಿ ಕೆಲವು ಪ್ರಗತಿಯನ್ನು ಸಾಧಿಸಲಾಗಿದೆ. ಎಂದು ಹೇಳಿದ್ದಾರೆ.
ಕ್ರಿಪ್ಟೋಕರೆನ್ಸಿಗಳು ಹಣದ ಎಲ್ಲಾ ಗುಣಗಳನ್ನು ಹೊಂದಿವೆ. ಹೀಗಾಗಿ ಮೊದಲು, ನಾವು ಕ್ರಿಪ್ಟೋಕರೆನ್ಸಿಗಳ ಮೂಲವನ್ನು ಅರ್ಥಮಾಡಿಕೊಳ್ಳಬೇಕು. ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುವ ಖಾಸಗಿಯಾಗಿ ನೀಡಲಾದ ಕ್ರಿಪ್ಟೋಕರೆನ್ಸಿಗಳೊಂದಿಗೆ ಸರ್ಕಾರವು ಸಮಸ್ಯೆ ಇಲ್ಲ.
ಕ್ರಿಪ್ಟೋಕರೆನ್ಸಿಗಳು ಸಾಂಪ್ರದಾಯಿಕ ಹಣಕಾಸಿನ ವ್ಯವಸ್ಥೆ, ಫಿಯೆಟ್ ಕರೆನ್ಸಿಯನ್ನು ಬೈಪಾಸ್ ಮಾಡಬಹುದು ಏಕೆಂದರೆ, ಅವು ಬ್ಯಾಂಕುಗಳು ಅಥವಾ ಸರ್ಕಾರಗಳ ನಿಯಂತ್ರಣದಿಂದ ಮುಕ್ತವಾಗಿರುತ್ತವೆ. ಕ್ರಿಪ್ಟೋ ಸ್ವತ್ತುಗಳು ಜನಪ್ರಿಯವಾಗುತ್ತಾ ಹೋದಂತೆ, ಜನರು ತಮ್ಮ ಹಣವನ್ನು ಕ್ರಿಪ್ಟೋ ಸ್ವತ್ತುಗಳಲ್ಲಿ ಹೂಡಲು ಪ್ರಾರಂಭಿಸುತ್ತಾರೆ.
ಇದರಿಂದ ಕೇಂದ್ರ ಬ್ಯಾಂಕ್‌ನ ಮೇಲಿನ ನಿಯಂತ್ರಣ ಕಡಿಮೆಯಾಗುತ್ತದೆ. ಕ್ರಿಪ್ಟೋ ಸ್ವತ್ತುಗಳ ಮೌಲ್ಯವು ತುಂಬಾ ಚಂಚಲವಾಗಿರುತ್ತದೆ. ಹೀಗಾಗಿ ಈ ಮಾರುಕಟ್ಟೆಯಲ್ಲಿ ಯಾವುದೇ ದೊಡ್ಡ ಬದಲಾವಣೆಯಾದರೂ ಇದು ಇಡೀ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು
"ಭಾರತವು ಕ್ರಿಪ್ಟೋಕರೆನ್ಸಿಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು. ಪ್ರತಿಯೊಂದು ದೇಶವು ತನ್ನದೇ ಆದ ಆರ್ಥಿಕ ಪರಿಸ್ಥಿತಿ ಮತ್ತು ಸಾಮಾಜಿಕ ಸಂದರ್ಭಗಳನ್ನು ಹೊಂದಿರುತ್ತದೆ. ಆದ್ದರಿಂದ, ಪ್ರತಿಯೊಂದು ದೇಶವು ಕ್ರಿಪ್ಟೋಕರೆನ್ಸಿಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ತನ್ನದೇ ಆದ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿದೆ. ಭಾರತದ ಆರ್ಥಿಕ ವ್ಯವಸ್ಥೆಯು ದೊಡ್ಡದಾಗಿದೆ ಆದರೆ ಭಾರತವು ಈ ವಿಷಯದಲ್ಲಿ ಬಹಳ ಜಾಗರೂಕವಾಗಿರಬೇಕು ಎಂದು ನಾನು ಭಾವಿಸುತ್ತೇನೆ" ಎಂದು ದಾಸ್ ಹೇಳಿದ್ದಾರೆ.
More From GoodReturns

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications