For Quick Alerts
ALLOW NOTIFICATIONS  
For Daily Alerts

ಕ್ರಿಪ್ಟೋಕರೆನ್ಸಿ ಚೇತರಿಕೆ: ಬಿಟ್‌ಕಾಯಿನ್‌ ಮೌಲ್ಯ ಸ್ವಲ್ಪ ಏರಿಕೆ

|

ಜಾಗತಿಕ ಮಟ್ಟದ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿದಿದೆ. ರವಿವಾರ (ಜೂನ್ 19)ದಂದು ಬಿಟ್‌ಕಾಯಿನ್ ಸೇರಿದಂತೆ ಹಲವು ಡಿಜಿಟಲ್ ಕರೆನ್ಸಿ ಮೌಲ್ಯ ಕುಸಿತ ಕಂಡಿದ್ದವು. ಆದರೆ, ಸೋಮವಾರ ಜೂನ್ 20ರಂದು ಆರಂಭಿಕ ವಹಿವಾಟಿನಲ್ಲಿ ಬಿಟ್ ಕಾಯಿನ್, ಇಥೆರಿಯಂ, ಶಿಬು ಇನು ಹಾಗೂ ಡಾಜ್ ಕಾಯಿನ್ ಮೌಲ್ಯ ಏರಿಕೆ ಕಾಣುತ್ತಿದೆ. ಆದರೆ, ಕಳೆದ ಎರಡು ತಿಂಗಳಲ್ಲಿ ಮಾರುಕಟ್ಟೆ ಮೌಲ್ಯ ಶೇ 43ರಷ್ಟು ಕುಸಿತ ಕಂಡಿದೆ. ಕ್ರಿಪ್ಟೋ ಮಾರುಕಟ್ಟೆ ಈ ಸಮಯಕ್ಕೆ 879,928,368,080.263 ಡಾಲರ್ ತನಕ ತಲುಪಿದೆ.

ಬಿಟ್ ಕಾಯಿನ್ ಈ ಸಮಯಕ್ಕೆ ಪ್ರತಿ ಕಾಯಿನ್ ಬೆಲೆ $20,055.68ರಂತೆ ವ್ಯವಹರಿಸುತ್ತಿದೆ. ಭಾನುವಾರದಂದು ಬಿಟ್ ಕಾಯಿನ್ ಅಲ್ಲದೆ, ಎರಡನೇ ಅತಿದೊಡ್ಡ ಡಿಜಿಟಲ್ ಕರೆನ್ಸಿ ಎಥೆರಿಯಂ ಕೂಡಾ ಇಳಿಕೆ ಕಂಡಿದೆ.

ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯಾಗಿದ್ದು, ಇದು ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ ಆಗಿದೆ. ಈ ಕ್ರಿಪ್ಟೋ ಕರೆನ್ಸಿಗೆ ಯಾವುದೇ ರೀತಿಯ ಮುದ್ರಣ ರೂಪ ಇರುವುದಿಲ್ಲ. ಬಿಟ್ ಕಾಯಿನ್ ಎಂಬ ಕರೆನ್ಸಿಯು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿರುತ್ತದೆ. ರೂಪಾಯಿ, ಡಾಲರ್, ಯುರೋಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕ್ ಇದ್ಯಾವುದು ಇರುವುದಿಲ್ಲ.

ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ

ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ

ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಪ್ರಸ್ತುತ 20,016.88 ಯುಎಸ್ ಡಾಲರ್‌ಗೆ ಬೆಲೆಯಲ್ಲಿ ವಹಿವಾಟು ನಡೆಸುತ್ತಿದ್ದು, ಶೇ 9.18ರಷ್ಟು ಏರಿಕೆಯಾಗಿದೆ. ಈ ಮೂಲಕ ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 382,490,535,957 ಯುಎಸ್ ಡಾಲರ್‌ನಷ್ಟಿದೆ. ಕಳೆದ 24 ಗಂಟೆಗಳಲ್ಲಿ, ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 20,837.26 ಡಾಲರ್ ಮತ್ತು ಕಡಿಮೆ ಬೆಲೆ 18,955.27 ಡಾಲರ್ ಆಗಿತ್ತು. ಕಳೆದ ವಾರದಲ್ಲಿ ಶೇ. 21.21ರಷ್ಟು ಏರಿಕೆಯಾಗಿದೆ. ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 68,990.90 ಡಾಲರ್ ಆಗಿದೆ.

ಎಥೆರಿಯಮ್ ಕ್ರಿಪ್ಟೋ ಕರೆನ್ಸಿ

ಎಥೆರಿಯಮ್ ಕ್ರಿಪ್ಟೋ ಕರೆನ್ಸಿ

ಎಥೆರಿಯಮ್ ಕ್ರಿಪ್ಟೋ ಕರೆನ್ಸಿ ಪ್ರಸ್ತುತ 1,077.85 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 12.52ರಷ್ಟು ಏರಿಕೆಯಾಗಿದ್ದು, ಈ ಮೂಲಕ ಎಥೆರಿಯಮ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 219,863,066,885 ಯುಎಸ್ ಡಾಲರ್ ಆಗಿದೆ. ಕಳೆದ 24 ಗಂಟೆಗಳಲ್ಲಿ, ಎಥೆರಿಯಮ್ ಕ್ರಿಪ್ಟೋ ಕರೆನ್ಸಿಯ ಗರಿಷ್ಠ ಬೆಲೆ 1,142.34 ಡಾಲರ್ ಮತ್ತು ಕಡಿಮೆ ಬೆಲೆ 990.32 ಡಾಲರ್ ಆಗಿತ್ತು. ಕಳೆದ ವಾರ ಶೇ.0.04ರಷ್ಟು ಏರಿಕೆ ಕಂಡಿದೆ. ಎಥೆರಿಯಮ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 4,865.57 ಡಾಲರ್‌ನಷ್ಟಿದೆ.

ಟೆಥರ್ ಕ್ರಿಪ್ಟೋ ಕರೆನ್ಸಿ

ಟೆಥರ್ ಕ್ರಿಪ್ಟೋ ಕರೆನ್ಸಿ

ಟೆಥರ್ ಕ್ರಿಪ್ಟೋ ಕರೆನ್ಸಿ ಪ್ರಸ್ತುತ 0.9988 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 0,00ರಷ್ಟು ಯಥಾಸ್ಥಿತಿಯಲ್ಲಿದ್ದು, ಈ ಮೂಲಕ ಟೆಥರ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 67,839,245,320 ಡಾಲರ್‌ ಆಗಿದೆ. ಕಳೆದ 24 ಗಂಟೆಗಳಲ್ಲಿ, ಟೆಥರ್ ಕ್ರಿಪ್ಟೋ ಕರೆನ್ಸಿಯ ಗರಿಷ್ಠ ಬೆಲೆ 0.999 ಡಾಲರ್ ಮತ್ತು ಕನಿಷ್ಠ ಬೆಲೆ 0.9986 ಡಾಲರ್ ಆಗಿತ್ತು. ಕಳೆದ ವಾರ ಶೇ 0.04ರಷ್ಟು ಏರಿಕೆಯಾಗಿದೆ.

ಸೊಲೊನಾ ಕ್ರಿಪ್ಟೋ ಕರೆನ್ಸಿ

ಸೊಲೊನಾ ಕ್ರಿಪ್ಟೋ ಕರೆನ್ಸಿ

ಸೊಲೊನಾ ಕ್ರಿಪ್ಟೋ ಕರೆನ್ಸಿ ಪ್ರಸ್ತುತ 34.73 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 9.76ರಷ್ಟು ಏರಿಕೆಯಾಗಿದ್ದು, ಈ ಮೂಲಕ ಸೊಲೊನಾ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 11,821,499,982 ಡಾಲರ್‌ ಆಗಿದೆ. ಕಳೆದ 24 ಗಂಟೆಗಳಲ್ಲಿ, ಸೊಲೊನಾ ಕ್ರಿಪ್ಟೋ ಕರೆನ್ಸಿಯ ಗರಿಷ್ಠ ಬೆಲೆ 35.16 ಡಾಲರ್ ಮತ್ತು ಕನಿಷ್ಠ ಬೆಲೆ 31.69 ಡಾಲರ್ ಆಗಿತ್ತು. ಕಳೆದ ವಾರ ಶೇ 27.68ರಷ್ಟು ಏರಿಕೆಯಾಗಿದೆ.

English summary

Cryptocurrency Market Cap, Bitcoin, Ethereum, Dogecoin zoom up on June 20

Cryptocurrency Market Cap: Bitcoin, Ethereum, Shiba Inu and Dogecoin zoom up to 13%. investors fear it may lead to a further meltdown in the new-age asset class. Know market cap, Bitcoin, Ethereum prices today (June 20 2022)
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X