ನವೆಂಬರ್ 22ರಂದು CSB ಬ್ಯಾಂಕ್ ಐಪಿಒ ಶುರು

ಕೇರಳ ಮೂಲದ ಖಾಸಗಿ ವಲಯದ ಸಾಲಗಾರ CSB ಬ್ಯಾಂಕ್ ಅಥವಾ ಈ ಹಿಂದೆ ಕರೆಯಲ್ಪಡುವ ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್ ಐಪಿಒ ಶುರು ಮಾಡುವುದಾಗಿ ಮಂಗಳವಾರ ಘೋಷಿಸಿದೆ.

ಮಂಗಳವಾರ ಪ್ರಕಟಣೆ ಹೊರಡಿಸಿರುವ CSB ಬ್ಯಾಂಕ್, ನವೆಂಬರ್ 22 ರಿಂದ 26ರ ನಡುವೆ 193 ರಿಂದ 195ರ ಬೆಲೆಯಲ್ಲಿ ಸುಮಾರು 410 ಕೋಟಿ ಮೌಲ್ಯದ ಐಪಿಒ ಪ್ರಾರಂಭಿಸುವುದಾಗಿ ತಿಳಿಸಿದೆ. ಪ್ರಸ್ತಾಪಕ್ಕಾಗಿ ಬಿಡ್ ಗಳನ್ನು ಕನಿಷ್ಟ 75 ಷೇರುಗಳು ಮತ್ತು ಗುಣಾಕಾರಗಳಿಗೆ ಅನ್ವಯಿಸಬಹುದು. ಷೇರು ವಿತರಣೆ ಮೂಲಕ ಕಂಪನಿಯು ಆರಂಭಿಕವಾಗಿ 24 ಕೋಟಿ ರುಪಾಯಿ ಬಂಡವಾಳ ಸಂಗ್ರಹಿಸುವ ಗುರಿ ಹೊಂದಿದೆ.

ನವೆಂಬರ್ 22ರಂದು CSB ಬ್ಯಾಂಕ್ ಐಪಿಒ ಶುರು

ಈಗಾಗಲೇ ಅಸ್ತಿತ್ವದಲ್ಲಿರುವ ಷೇರುದಾರರು ಸೇರಿದಂತೆ ಐಸಿಐಸಿಸಿ ಲೊಂಬಾರ್ಡ್ ಜನರಲ್ ಇನ್ಷುರೆನ್ಸ್, ಹೆಚ್‌ಡಿಎಫ್‌ಸಿ ಲೈಫ್ ಇನ್ಷುರೆನ್ಸ್, ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷುರೆನ್ಸ, ಫೆಡರಲ್ ಬ್ಯಾಂಕ್, ಬ್ರಿಡ್ಜ್ ಇಂಡಿಯಾ ಫಂಡ್, ಸ್ಯಾಟಲೈಟ್ ಮಲ್ಟಿಕಾಮ್, ವೇ 2 ಹೆಲ್ತ್ ಸೆಕ್ಯುರಿಟೀಸ್ ಮತ್ತು ಎಡೆಲ್‌ವೀಸ್ ಟೋಕಿಯೊ ಲೈಫ್ ಇನ್ಷುರೆನ್ಸ್ ಸೇರಿದಂತೆ ಅಸ್ತಿತ್ವದಲ್ಲಿರುವ 19.78 ಮಿಲಿಯನ್ ಷೇರುಗಳನ್ನು 385.71 ಕೋಟಿಗೆ ಮಾರಾಟ ಮಾಡುತ್ತಾರೆ.

ಭಾರತದ ಅತ್ಯಂತ ಹಳೆಯ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ CSB ಬ್ಯಾಂಕ್ ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಬಲವಾದ ಅಸ್ತಿತ್ವವನ್ನು ಹೊಂದಿದೆ.

ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ 6 ತಿಂಗಳಲ್ಲಿ 810 ಕೋಟಿ ಆದಾಯವನ್ನು ಗಳಿಸಿರುವುದಾಗಿ ಬ್ಯಾಂಕ್ ಹೇಳಿದೆ. 2019-20ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕಂಪನಿಯು 44.3 ಕೋಟಿ ರುಪಾಯಿ ಲಾಭಗಳಿಸಿರುವುದಾಗಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+