ಬೆಂಗಳೂರಿನಲ್ಲಿ ಮೊದಲ ಬಾರಿಗೆ 12 ವಿಶ್ವ ದರ್ಜೆಯ ರಸ್ತೆಗಳಿಗೆ ಸಿಎಸ್ಆರ್ ನಿಧಿ

ಬೆಂಗಳೂರು, ಜನವರಿ 08: ಇದೇ ಮೊದಲ ಬಾರಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯು ನಗರದ ಹೃದಯಭಾಗದಲ್ಲಿ ಒಟ್ಟು 13.41 ಕಿಮೀ ಉದ್ದದ 12 ಟೆಂಡರ್‌ಶುರ್ ರಸ್ತೆಗಳನ್ನು ನಿರ್ವಹಿಸಲು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯನ್ನು ಬಳಸಿಕೊಳ್ಳಲು ನಿರ್ಧರಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ರಸ್ತೆಗಳನ್ನು ಅಗತ್ಯವಿದ್ದಾಗ ಡಾಂಬರೀಕರಣಗೊಳಿಸಿದರೆ, ಖಾಸಗಿ ಕಂಪನಿಗಳು ಅವುಗಳನ್ನು ಸ್ಪಿಕ್ ಮತ್ತು ಸ್ಪ್ಯಾನ್ ಆಗಿ ಇರಿಸಲು ಬಯಸುತ್ತವೆ. ಆದರೆ ಇದಕ್ಕೆ ಪ್ರತಿಯಾಗಿ ಕಂಪನಿಗಳು ಬ್ರ್ಯಾಂಡಿಂಗ್‌ಗಾಗಿ ಮೀಸಲಾದ ಸ್ಥಳವನ್ನು ಪಡೆಯುತ್ತವೆ.

ಬೆಂಗಳೂರಿನಲ್ಲಿ ವಿಶ್ವ ದರ್ಜೆಯ ರಸ್ತೆಗಳಿಗೆ ಅನುಮೋದನೆ

ಬಿಬಿಎಂಪಿಯು ಈ ರಸ್ತೆಗಳ ನಿರ್ವಹಣಾ ವೆಚ್ಚವನ್ನು ವರ್ಷಕ್ಕೆ 50 ಲಕ್ಷ/ಕಿಮೀ ಎಂದು ಅಂದಾಜಿಸಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ವಹಣೆಗಾಗಿ ಗುರುತಿಸಲಾದ ರಸ್ತೆಗಳಲ್ಲಿ ಚರ್ಚ್ ಸ್ಟ್ರೀಟ್, ಕನ್ನಿಂಗ್ಹ್ಯಾಮ್ ರಸ್ತೆ, ರೆಸಿಡೆನ್ಸಿ ರಸ್ತೆ, ರಿಚ್ಮಂಡ್ ರಸ್ತೆ ಮತ್ತು ಸೇಂಟ್ ಮಾರ್ಕ್ಸ್ ರಸ್ತೆ ಸೇರಿವೆ.

ಸಂಸ್ಥೆಗಳು ಅಗತ್ಯವಿದ್ದಾಗ ಈ ರಸ್ತೆಗಳಲ್ಲಿ ಫುಟ್‌ಪಾತ್ ಇಂಟರ್‌ಲಾಕ್‌ಗಳನ್ನು ಸರಿಪಡಿಸಬೇಕು. ಸೈಕಲ್ ಲೇನ್‌ಗಳಿಗೆ ಬಣ್ಣ ಬಳಿಯಬೇಕು, ಅಲಂಕಾರಿಕ ಸಸ್ಯಗಳನ್ನು ನಿರ್ವಹಿಸಬೇಕು, ಮುರಿದ ಡ್ರೈನ್ ಸ್ಲ್ಯಾಬ್‌ಗಳನ್ನು ಸರಿಪಡಿಸಬೇಕು, ನಿಷ್ಕ್ರಿಯ ಬೀದಿ ದೀಪಗಳನ್ನು ಬದಲಾಯಿಸಬೇಕು ಮತ್ತು ರಸ್ತೆಗಳನ್ನು ಸುಂದರಗೊಳಿಸಬೇಕು. ರಸ್ತೆಗಳಿಗೆ ಡಾಂಬರೀಕರಣ ಮತ್ತು ಮುಖ್ಯ ರಸ್ತೆಗೆ ಬಣ್ಣ ಬಳಿಯುವುದು ಬಿಬಿಎಂಪಿ ಜವಾಬ್ದಾರಿಯಾಗಿದೆ.

ಬಿಬಿಎಂಪಿ ಸಂಸ್ಥೆಗಳಿಗೆ ಬ್ರ್ಯಾಂಡಿಂಗ್‌ಗಾಗಿ ಒಂದು ಕಿಲೋಮೀಟರ್‌ನಲ್ಲಿ ನಾಲ್ಕು ಸ್ಥಳಗಳಲ್ಲಿ 3 ಅಡಿ x 2 ಅಡಿ ಜಾಗವನ್ನು ನೀಡುತ್ತದೆ. ಆದರೆ ಯಾವುದೇ ವಾಣಿಜ್ಯ ಜಾಹೀರಾತುಗಳನ್ನು ಅನುಮತಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆಗಳ ವಾರ್ಷಿಕ ನಿರ್ವಹಣೆಗೆ ಖಾಸಗಿ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವ ಪರಿಕಲ್ಪನೆಯು ಬೆಂಗಳೂರಿಗೆ ಹೊಸದಾದರೂ, ಬಿಬಿಎಂಪಿ ಮತ್ತು ನಮ್ಮ ಮೆಟ್ರೊ ಎರಡೂ ನಗರದ ಹಲವಾರು ಭಾಗಗಳಲ್ಲಿ ರಸ್ತೆ ಮೀಡಿಯನ್‌ಗಳನ್ನು ನಿರ್ವಹಿಸಲು ಬಿಲ್ಡರ್‌ಗಳು ಸೇರಿದಂತೆ ಕಾರ್ಪೊರೇಟ್ ಸಂಸ್ಥೆಗಳ ಸಹಾಯವನ್ನು ಪಡೆದಿವೆ.

ಇದರಿಂದ ಹಲವು ಸಂಸ್ಥೆಗಳು ಮುಂದೆ ಬರಲಿವೆ ಎಂದು ಬಿಬಿಎಂಪಿ ಇಂಜಿನಿಯರಿಂಗ್ ಇನ್ ಚೀಫ್ ಬಿ.ಎಸ್.ಪ್ರಹ್ಲಾದ್ ಭರವಸೆ ವ್ಯಕ್ತಪಡಿಸಿದ್ದಾರೆ. 12 ಟೆಂಡರ್‌ಶೂರ್ ರಸ್ತೆಗಳನ್ನು ವಿಶ್ವ ದರ್ಜೆಯ ರಸ್ತೆಗಳಾಗಿವೆ. ಆದರೆ ಗುತ್ತಿಗೆದಾರರಿಗೆ ವಿಳಂಬ ಪಾವತಿ ಸೇರಿದಂತೆ ವಿವಿಧ ಕಾರಣಗಳಿಂದ ಬಿಬಿಎಂಪಿ ಅವುಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ನಾವು ಸಿಎಸ್ಆರ್ ನಿಧಿಯನ್ನು ಬಳಸಿಕೊಳ್ಳಲು ಆಶಿಸುತ್ತೇವೆ. ಇದರಿಂದ ಖಾಸಗಿ ಕಂಪನಿಗಳಿಗೂ ನಗರಕ್ಕೆ ಕೊಡುಗೆ ನೀಡಲು ಅವಕಾಶ ಸಿಗಲಿದೆ ಎಂದರು.

ಲಾಭರಹಿತ ಯುನೈಟೆಡ್ ವೇ ಬೆಂಗಳೂರಿನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ರಸ್ತೆಗಳು ತಮ್ಮ ಕಚೇರಿಗಳಿಗೆ ಹತ್ತಿರವಾಗಿದ್ದರೆ ಕಂಪನಿಗಳು ಆಸಕ್ತಿ ವಹಿಸುತ್ತವೆ. ಕಂಪನಿಗಳು ಅಧಿಕಾರಿಗಳೊಂದಿಗೆ ಸುಗಮ ಮತ್ತು ಪಾರದರ್ಶಕ ರೀತಿಯಲ್ಲಿ ಕಾರ್ಯವಿಧಾನವೂ ಇರಬೇಕು. ಇದಕ್ಕೆ ಹಣಕಾಸು ಸಮಸ್ಯೆಯಾಗುವುದಿಲ್ಲ ಎಂದು ಅನ್ಬಾಕ್ಸಿಂಗ್ ಬೆಂಗಳೂರು ಮುಖ್ಯಸ್ಥರಾಗಿರುವ ಪ್ರಕಾಶ್ ಹೇಳಿದರು.

ವಿಶ್ವದರ್ಜೆಯ ಮಾದರಿಗೆ ಗುರುತಿಸಲಾದ ರಸ್ತೆಗಳು:

ರೆಸಿಡೆನ್ಸಿ ರಸ್ತೆ,
ರಿಚ್ಮಂಡ್ ರಸ್ತೆ.
ಮ್ಯೂಸಿಯಂ ರಸ್ತೆ,
ವಿಟ್ಟಲ್ ಮಲ್ಯ ರಸ್ತೆ,
ಸೇಂಟ್ ಮಾರ್ಕ್ಸ್ ರಸ್ತೆ,
ಕಮಿಷರಿಯಟ್ ರಸ್ತೆ,
ಕನ್ನಿಂಗ್ಹ್ಯಾಮ್ ರಸ್ತೆ,
ಕೆಜಿ ರಸ್ತೆ,
ನೃಪತುಂಗ ರಸ್ತೆ,
ಮೋದಿ ಆಸ್ಪತ್ರೆ ರಸ್ತೆ,
ಚರ್ಚ್ ಸ್ಟ್ರೀಟ್,
ಮ್ಯೂಸಿಯಂ ಕ್ರಾಸ್ ರಸ್ತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+