For Quick Alerts
ALLOW NOTIFICATIONS  
For Daily Alerts

ಆಕ್ಸಿಜನ್, ಕೋವಿಡ್ ಲಸಿಕೆಗಳ ಮೇಲಿನ ಕಸ್ಟಮ್ಸ್ ಸುಂಕ ಮನ್ನಾ ಮಾಡಿದ ಕೇಂದ್ರ ಸರ್ಕಾರ

|

ದೇಶದಲ್ಲಿ ದಿನೇ ದಿನೇ ದಾಖಲೆಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಂದ ತಲೆಕೆಡಿಸಿಕೊಂಡಿರುವ ಕೇಂದ್ರ ಸರ್ಕಾರವು, ಕೋವಿಡ್‌ ಲಸಿಕೆ ಮತ್ತು ಆಮ್ಲಜನಕ ಹಾಗೂ ಸಂಬಂಧಿತ ವೈದ್ಯಕೀಯ ಉಪಕರಣಗಳ ಮೇಲಿನ ಕಸ್ಟಮ್ಸ್‌ ಸುಂಕವನ್ನು ಮನ್ನಾ ಮಾಡಿದೆ.

 

ದೇಶದಲ್ಲಿ ದೊಡ್ಡ ಸಮಸ್ಯೆಯಾಗಿ ತಲೆದೂರಿರುವ ಆಮ್ಲಜನಕದ ಕೊರತೆಯನ್ನ ನೀಗಿಸಲು ಮತ್ತು ಕೋವಿಡ್ ಲಸಿಕೆಗಳ ಲಭ್ಯತೆಯನ್ನು ಹೆಚ್ಚಿಸಲು ತಕ್ಷಣವೇ ಜಾರಿಗೆ ಬರುವಂತೆ ಕಸ್ಟಮ್ಸ್ ಸುಂಕವನ್ನು ಹಾಗೂ ಆರೋಗ್ಯ ಸೆಸ್‌ ಅನ್ನು ಮೂರು ತಿಂಗಳವರೆಗೆ ಮನ್ನಾ ಮಾಡಲು ನಿರ್ಧರಿಸಿದೆ.

 
ಆಕ್ಸಿಜನ್, ಕೋವಿಡ್ ಲಸಿಕೆಗಳ ಮೇಲಿನ ಕಸ್ಟಮ್ಸ್ ಸುಂಕ ಮನ್ನಾ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಆಮ್ಲಜನಕದ ಲಭ್ಯತೆಯನ್ನು ಹೆಚ್ಚಿಸಲು ಚರ್ಚೆ ನಡೆಸಲಾಯಿತು. ನಂತರದಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಸತತ 2ನೇ ದಿನ ಚಿನ್ನದ ಬೆಲೆ ಇಳಿಕೆ: ಏಪ್ರಿಲ್ 24ರ ಬೆಲೆ ಹೀಗಿದೆಸತತ 2ನೇ ದಿನ ಚಿನ್ನದ ಬೆಲೆ ಇಳಿಕೆ: ಏಪ್ರಿಲ್ 24ರ ಬೆಲೆ ಹೀಗಿದೆ

ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲು ಮತ್ತು ಮನೆಯಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಬೇಕಾದ ಸಲಕರಣೆಗಳನ್ನು ತ್ವರಿತವಾಗಿ ಹೆಚ್ಚಿಸುವ ಅವಶ್ಯಕತೆಯಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಆಮ್ಲಜನಕ ಮತ್ತು ವೈದ್ಯಕೀಯ ಸರಬರಾಜುಗಳ ಲಭ್ಯತೆಯನ್ನು ಹೆಚ್ಚಿಸಲು ಸಹಕಾರದಿಂದ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಸಲಕರಣೆಗಳ ತಡೆರಹಿತ ಮತ್ತು ತ್ವರಿತ ಕಸ್ಟಮ್ ಕ್ಲಿಯರೆನ್ಸ್ ಖಚಿತಪಡಿಸಿಕೊಳ್ಳಲು ಪ್ರಧಾನಿ ಕಂದಾಯ ಇಲಾಖೆಗೆ ನಿರ್ದೇಶನ ನೀಡಿದರು.

English summary

Customs Duty To Be Waived Off On Oxygen And Covid Vaccines

Across the nation, the Centre on Saturday decided to waive off the customs duty and health cess on import of oxygen and oxygen related equipment
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X