ನವದೆಹಲಿ, ಮಾರ್ಚ್ 19: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೆಲವು ಬ್ಯಾಂಕ್‌ಗಳಿಗೆ ಸೈಬರ್ ದಾಳಿಯಿಂದ ಎಚ್ಚರವಾಗಿರಲು ಮತ್ತು ಇಂಥ ಸಂಧರ್ಭಗಳನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿರುವಂತೆ ಸೂಚನೆ ಕೊಟ್ಟಿದೆ.
ಆ ಮೂಲಕ ಮುಂಬರುವ ದಿನಗಳಲ್ಲಿ ಬ್ಯಾಂಕ್ ಗಳಿಗೆ ಎದುರಾಗಬಹುದಾದ ಸೈಬರ್ ಅಟ್ಯಾಕ್ ಬಗ್ಗೆ ಎಚ್ಚರಿಸಿದೆ.. ಸಂಸತ್ತಿನಲ್ಲಿ ಸರ್ಕಾರ ತಿಳಿಸಿರುವ ಪ್ರಕಾರ, ಭಾರತದ ಬ್ಯಾಂಕುಗಳು ಜೂನ್ 2018ರಿಂದ 2022 ರ ವರೆಗೆ ಹ್ಯಾಕರ್‌ಗಳು ಮತ್ತು ದುಷ್ಕರ್ಮಿಗಳಿಂದ 248 ಬಾರಿ ಯಶಸ್ವಿ ದಾಳಿಗೆ ಒಳಗಾಗಿವೆ.

ಆರ್‌ಬಿಐ ಇದಕ್ಕಾಗಿ CSITE ಎಂಬ ತಂತ್ರಜ್ಞಾನವನ್ನು ಬಳಸಿದೆ. ಇದರ ಸಹಾಯದಿಂದ ಇತರೆ ಬ್ಯಾಂಕ್ ಗಳ ಭದ್ರತೆಯ ವಿಧಾನ ಎಷ್ಟು ಸದೃಢವಾಗಿದೆ ಅಥವಾ ಎಲ್ಲಿ ಲೋಪದೋಷವಿದೆ ಎಂಬುದನ್ನು ಕಂಡುಹಿಡಿದು , ಆ ಹಂತದಲ್ಲಿ ಸೆಕ್ಯೂರಿಟಿಯನ್ನ ಹೆಚ್ಚು ಮಾಡಿಕೊಳ್ಳಲು ಸೂಚಿಸುತ್ತದೆ. ಹೀಗೆ ಪರೀಕ್ಷೆ ನಡೆಸಿದಾಗ ಸಾಕಷ್ಟು ಬ್ಯಾಂಕ್ ನ ಸೆಕ್ಯೂರಿಟಿಯಲ್ಲಿ ಲೋಪ ಇರೋದು ಕಂಡುಬಂದಿದೆ.
ಎಮರ್ಜೆನ್ಸಿ , ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ನ ಸುರಕ್ಷತೆ ಮತ್ತು ವಂಚನೆ ಪತ್ತೆ ಮಾಡುವ ವಿಧಾನ ಸೇರಿದಂತೆ ಬ್ಯಾಂಕ್‌ಗಳ ವಿವಿಧ ಸಾಮರ್ಥ್ಯಗಳನ್ನು ತಿಳಿಯಲು CSITE ಸಹಾಯ ಮಾಡುತ್ತದೆ.RBI ತಪಾಸಣೆ ತಂಡ ಈ ಎಲ್ಲಾ ಬ್ಯಾಂಕ್ ಗಳ ಐಟಿ ವ್ಯವಸ್ಥೆಗಳನ್ನು ಆಳವಾಗಿ ನೋಡಿ, ಅಪಾಯ ಇರಬಹುದಾದ ಬೂದು ಪ್ರದೇಶಗಳನ್ನು ಗುರುತಿಸುತ್ತದೆ.
ಈ CSITE ಕೇಂದ್ರ ಬ್ಯಾಂಕ್ ನಡೆಸುವ ವಾರ್ಷಿಕ ಅಪಾಯದ ಮೌಲ್ಯಮಾಪನ ತಪಾಸಣೆಗಿಂತ ಭಿನ್ನವಾಗಿದೆ. ಸೈಬರ್ ದಾಳಿಗಳು ಹೆಚ್ಚಾಗುತ್ತಿದ್ದಂತೆ ಕೆಲವು ವರ್ಷಗಳ ಹಿಂದೆ ಸ್ಟೆಪ್-ಅಪ್ ಜಾಗರೂಕತೆಯ ಭಾಗವಾಗಿ ಈ ವ್ಯವಸ್ಥೆ ಪ್ರಾರಂಭವಾಗಿದೆ. ಬ್ಯಾಂಕ್‌ಗಳ ಸೈಬರ್ ಭದ್ರತಾ ಸಾಮರ್ಥ್ಯಗಳಲ್ಲಿನ ನ್ಯೂನತೆಗಳನ್ನು ಗುರುತಿಸಲು ಆರ್‌ಬಿಐ ಪ್ರತ್ಯೇಕ ತಪಾಸಣೆ ನಡೆಸುತ್ತದೆ.

ತಂತ್ರಜ್ಞಾನ ಎಷ್ಟು ಪೂರಕವೋ ಅಷ್ಟೇ ಮಾರಕ !
ಫೆಬ್ರವರಿ 9 ರಂದು, ಆರ್‌ಬಿಐ ಡೆಪ್ಯುಟಿ ಗವರ್ನರ್ ಟಿ ರಬಿ ಶಂಕರ್ ಬ್ಯಾಂಕಿಂಗ್ ವಲಯ ಹೊಸ ಸೈಬರ್ ಭದ್ರತಾ ಅಪಾಯಗಳಿಗೆ ಸಿದ್ಧವಾಗಬೇಕಿದೆ ಎಂದು ಹೇಳಿದ್ದರು. ನಾವು ಗ್ರಾಹಕರ ಅನುಕೂಲ ಮತ್ತು ಇತರ ವಿಷಯಗಳ ಬಗ್ಗೆ ಯೋಚಿಸಬೇಕಾಗಿದೆ ಮತ್ತು ಅದಕ್ಕೆ ಸರಿ ಹೊಂದುವ ಸೇವೆಗಳನ್ನು ಒದಗಿಸಬೇಕಾಗಿದೆ ಎಂದು ಮುಂಬೈನ 19 ನೇ ಬ್ಯಾಂಕಿಂಗ್ ತಂತ್ರಜ್ಞಾನ ಸಮ್ಮೇಳನದಲ್ಲಿ ಉಲ್ಲೇಖಿಸಿದ್ದರು.
ಕೃತಕ ಬುದ್ಧಿಮತ್ತೆ (AI) ದುರುಪಯೋಗದ ಅಪಾಯಗಳನ್ನು ಗುರುತಿಸಲು ಮತ್ತು ತಗ್ಗಿಸಲು ಬ್ಯಾಂಕುಗಳು ತಮ್ಮ ಎನ್‌ಕ್ರಿಪ್ಟ್ ಮಾಡಲಾದ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮರುನಿರ್ಮಾಣ ಮಾಡಬೇಕು ಎಂದು ಶಂಕರ್ ಹೇಳಿದ್ದಾರೆ. ನಾವು AI ಯೊಂದಿಗಿನ ಸಮಸ್ಯೆಗಳನ್ನು ಕೂಡ ಅರ್ಥಮಾಡಿಕೊಳ್ಳಬೇಕು ಮತ್ತು ಕಡಿಮೆ ಸಮಯದಲ್ಲಿ ದೊಡ್ಡ ಡೇಟಾವನ್ನು ಕ್ರಂಚ್ ಮಾಡುವ ಸಾಮರ್ಥ್ಯ, ನಿಮ್ಮ ಎನ್‌ಕ್ರಿಪ್ಟ್ ಮಾಡಲಾದ ಸಿಸ್ಟಮ್ ಅನ್ನು ನೀವು ಸಂಪೂರ್ಣವಾಗಿ ಮರುನಿರ್ಮಾಣ ಮಾಡಬೇಕಾಗುತ್ತದೆ ಎಂದು ಬ್ಯಾಂಕ್ ಗಳಿಗೆ ನಿರ್ದೇಶಿಸಿದ್ದಾರೆ.
ಬ್ಯಾಂಕ್‌ಗಳು ತಮ್ಮ ಸೈಬರ್ ಸೆಕ್ಯುರಿಟಿ ದೃಢತೆಯನ್ನು ಪರಿಶೀಲಿಸಲು ಮತ್ತು ಅವುಗಳನ್ನು ಬಲಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಹಣಕಾಸು ವಲಯದಲ್ಲಿ ಡಿಜಿಟಲೀಕರಣ ವೇಗ ಪಡೆದುಕೊಳ್ಳುತ್ತಿಂದಂತೆ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ಈ ಬಗ್ಗೆ ಹೆಚ್ಚೆಚ್ಚು ಗಮನಹರಿಸಲು ಮುಂದಾಗಿದೆ.
ಸೈಬರ್ ಅಟ್ಯಾಕ್ ಗಳನ್ನ ಎದುರಿಸಲು, RBI ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳಿಗೆ (SCBs) ಸೈಬರ್ ಸೆಕ್ಯುರಿಟಿ ಫ್ರೇಮ್‌ವರ್ಕ್‌ನಲ್ಲಿ ಪ್ರತ್ಯೇಕ ಚೌಕಟ್ಟನ್ನು ರಚಿಸಿದ್ದು, ಅದರ ಮೂಲಕ ಸಿಸ್ಟಮ್‌ಗಳಿಂದ ಡೇಟಾ ಸೋರಿಕೆಯನ್ನು ತಡೆಗಟ್ಟಲು ಇತರ ವಿಷಯಗಳ ಜೊತೆಗೆ ಸೈಬರ್ ಸುರಕ್ಷತೆಯನ್ನ ಕೂಡ ಹೆಚ್ಚಿಸಬೇಕಿದೆ.


Click it and Unblock the Notifications