ಡಾಬರ್ ಇಂಡಿಯಾ ಲಿಮಿಟೆಡ್ ಗುರುವಾರ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದು, ಕಂಪನಿಯ ಮಾರುಕಟ್ಟೆ ಕ್ಯಾಪ್ 1 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಇದಕ್ಕೆ ಕಾರಣ ಡಾಬರ್ ಇಂಡಿಯಾ ಷೇರುಗಳು ಇಂದು ಗರಿಷ್ಠ ಮಟ್ಟ ತಲುಪಿದ್ದು, ಹೂಡಿಕೆದಾರರಿಗೆ ಸಾಕಷ್ಟು ಲಾಭ ತಂದುಕೊಟ್ಟಿದೆ.
ಬಿಎಸ್‌ಇನಲ್ಲಿ ಡಾಬರ್ ಇಂಡಿಯಾ ಷೇರುಗಳು ಸಾರ್ವಕಾಲಿಕ ಗರಿಷ್ಠ 569.20 ರೂಪಾಯಿಗೆ ತಲುಪಿದ್ದಲ್ಲದೆ, ಪ್ರಸ್ತುತ ಶೇಕಡಾ 1ರಷ್ಟು ಹೆಚ್ಚಾಗಿ 566 ರೂಪಾಯಿಗೆ ತಲುಪಿದೆ.

ಡಾಬರ್ ಕಂಪನಿ ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕ ವರದಿಯನ್ನು ಮೇ 7ರಂದು ಬಿಡುಗಡೆ ಮಾಡಲಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ತ್ರೈಮಾಸಿಕ ಲಾಭದಲ್ಲಿ ಹೆಚ್ಚಳವನ್ನು ದಾಖಲಿಸುವ ಅಂದಾಜಿದೆ.
ತಂಪು ಪಾನೀಯಗಳು, ಆಹಾರ ಮತ್ತು ಬಾಯಿಯ ಸುರಕ್ಷತಾ ವಸ್ತುಗಳ ಮಾರಾಟದಲ್ಲಿ ಸಾಕಷ್ಟು ಏರಿಕೆ ದಾಖಲಿಸಿದ್ದು, ವ್ಯಾಪಾರದಲ್ಲಿ ಬಲವಾದ ಲಾಭದ ಬೆಳವಣಿಗೆ ಕಂಡಿದೆ.
ಇನ್ನು ಬ್ರೋಕರೇಜ್ ಸಂಸ್ಥೆ ಜೆಪಿ ಮೋರ್ಗಾನ್ ಡಾಬರ್ ಇಂಡಿಯಾ ಲಿಮಿಟೆಡ್ ಷೇರುಗಳ ಟಾರ್ಗೆಟ್ ಪ್ರೈಸ್ ಅನ್ನು 600 ರೂಪಾಯಿಗೆ ನಿಗದಿಪಡಿಸಿದೆ.
More From GoodReturns

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications