ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳಲ್ಲಿ ಈ ರೀತಿಯ ಪೆನ್ನಿ ಸ್ಟಾಕ್ ಗಳನ್ನ ಕಾಣಬಹುದು. ಯಾವ ಷೇರಿನ ಬೆಲೆ ಒಂದು ಡಾಲರ್ ಅಥವಾ ಅದಕ್ಕಿಂತ ಕಡಿಮೆ ಹಣದಲ್ಲಿ ಟ್ರೇಡ್ ಆಗುತ್ತಿರುತ್ತದೆ ಅಂತಹ ಷೇರುಗಳನ್ನ ಪೆನ್ನಿ ಸ್ಟಾಕ್ ಎಂದು ಕರೆಯುವುದು ವಾಡಿಕೆ. ಹೆಸರಿಗೆ ಒಂದು ಡಾಲರ್ ಆದರೂ ಐದು ಡಾಲರ್ ಅಥವಾ ಅದಕ್ಕಿಂತ ಕಡಿಮೆ ಮೌಲ್ಯದ ಷೇರುಗಳನ್ನ ಕೂಡ ಇದೆ ವರ್ಗಿಕರ್ಣದಲ್ಲಿ ಪರಿಗಣಿಸಲಾಗುತ್ತದೆ.
ಪೆನ್ನಿ ಸ್ಟಾಕ್ ಎಂದರೇನು ?
ಮೇಲೆ ಹೇಳಿದಂತೆ ಒಂದು ಷೇರಿನ ಬೆಲೆ ಅತ್ಯಂತ ಕಡಿಮೆ ಇದ್ದರೆ ಅದನ್ನ ಪೆನ್ನಿ ಸ್ಟಾಕ್ ಎನ್ನುತ್ತಾರೆ , ಆದರೆ ಇದಿಷ್ಟೇ ಅಲ್ಲದೆ ಅತ್ಯಂತ ಕಡಿಮೆ ಮಾರ್ಕೆಟ್ ಕ್ಯಾಪಿಟಲಿಸಷನ್ ಹೊಂದಿದ್ದು ಅತ್ಯಂತ ಕಡಿಮೆ ಲಿಕ್ವಿಡಿಟಿ ಕೂಡ ಹೊಂದಿರುತ್ತದೆ. ಭಾರತೀಯ ಸನ್ನಿವೇಶದಲ್ಲಿ ಹತ್ತು ರೂಪಾಯಿ ಅಥವಾ ಅದ್ದಕಿಂತ ಕಡಿಮೆ ಬೆಲೆಯಲ್ಲಿ ಟ್ರೇಡ್ ಆಗುತ್ತಿರುವ ಎಲ್ಲಾ ಷೇರುಗಳನ್ನ ಪೆನ್ನಿ ಸ್ಟಾಕ್ಸ್ ಎಂದು ಕರೆಯಬಹುದು. ಇಲ್ಲಿ ಗಮನಿಸಿ ಬೇಕಾದ ಅಂಶವೆಂದರೆ ಇದನ್ನ ಒಮ್ಮೆ ಕೊಂಡರೆ ಮತ್ತೆ ಮಾರಾಟ ಮಾಡುವುದು ಸ್ವಲ್ಪ ಕಷ್ಟ. ಮತ್ತೆ ಯಾರಾದರೂ ಪೆನ್ನಿ ಸ್ಟಾಕ್ ನಲ್ಲಿ ಹೂಡಿಕೆ ಮಾಡುವ ಮನಸ್ಥಿತಿ ಉಳ್ಳವರು ಬರುವ ತನಕ ಇದನ್ನ ಇಟ್ಟು ಕೊಳ್ಳಬೇಕಾಗುತ್ತದೆ.

ಪೆನ್ನಿ ಸ್ಟಾಕ್ ಹೂಡಿಕೆಯಲ್ಲಿ ಲಾಭ ಗಳಿಸಬಹುದೇ ?
ಈ ಪ್ರಶ್ನೆಗೆ ಉತ್ತರ ಸರಳವಾಗಿ ಹೇಳಬೇಕೆಂದರೆ ಹೌದು ! ಇದಕ್ಕೆ ಕಾರಣ ಇದರ ಮೌಲ್ಯ ಅತ್ಯಂತ ಕಡಿಮೆ ಇರುವುದರಿಂದ ದೊಡ್ಡ ಶಾರ್ಕ್ ಹೂಡಿಕೆದಾರರು ಇಲ್ಲಿ ಬರುವುದಿಲ್ಲ. ಯಾವಾಗ ದೊಡ್ಡ ಹೂಡಿಕೆದಾರರು ಇರುವುದಿಲ್ಲ ಆಗ ಮೌಲ್ಯದ ಏರಿಳಿತಗಳ ಆಟ ಅಂದರೆ ಮ್ಯಾನಿಪುಲೇಷನ್ ಕಡಿಮೆ ಇರುತ್ತದೆ. ಮಾರುಕಟ್ಟೆಯ ಸಹಜ ಓಟಕ್ಕೆ ಸರಿಯಾಗಿ ಬೆಲೆಯಲ್ಲಿ ಅಥವಾ ಮೌಲ್ಯದಲ್ಲಿ ಹೆಚ್ಚು ಅಥವಾ ಕಡಿಮೆಯಾಗುತ್ತದೆ. ಆಂತರಿಕವಾಗಿ ಅಥವಾ ಬೇರೆ ಹೊರಗಿನ ಶಕ್ತಿಯ ಪ್ರೇರಣೆಯಿಂದ ಬೆಲೆಯಲ್ಲಿ ಏರಿಳಿತ ಉಂಟಾಗುವುದು ಕಡಿಮೆ. ಈ ಕಾರಣದಿಂದ ಹಲವು ಹೂಡಿಕೆದಾರರು ಇದರಲ್ಲಿ ಆಸಕ್ತಿ ವಹಿಸುತ್ತಾರೆ. ಅಲ್ಲದೆ ಇದು ಕೆಲವೊಮ್ಮೆ ಬೇಡಿಕೆಯನ್ನ ಪಡೆದುಕೊಳ್ಳುತ್ತವೆ. ಹೀಗಾಗಿ ಹೆಚ್ಚು ಏರಿಳಿತ ಬಯಸದವರು ಮತ್ತು ಹೆಚ್ಚು ಅಪಾಯವನ್ನ ಬಯಸವರು ಕೂಡ , ಅಳೆದು ತೂಗಿ ಇಲ್ಲಿ ಹೂಡಿಕೆ ಮಾಡಿ ಹಣವನ್ನ ಗಳಿಸಬಹುದು. ಆದರೂ ಕೆಲವೊಮ್ಮೆ ಸಾಮಾನ್ಯ ಷೇರುಗಳಿಗಿಂತ ಹೆಚ್ಚು ಏರಿಳಿತಗಳನ್ನ ಕೂಡ ಕಾಣುತ್ತದೆ. ಹಣವನ್ನ ಕಳೆದುಕೊಳ್ಳುವ ಸಂಭವ ಕೂಡ ಇರುತ್ತದೆ. ಇಂತಹ ಷೇರುಗಳನ್ನ ಗುರುತಿಸುವುದು ಮತ್ತು ಅದರಲ್ಲಿ ಹೂಡಿಕೆ ಮಾಡುವುದು ಕೂಡ ಟೆಕ್ನಿಕಲ್ ಸ್ಕಿಲ್ ಬಯಸುತ್ತದೆ. ಹೀಗಾಗಿ ಇಲ್ಲಿ ಹೂಡಿಕೆ ಮಾಡುವ ಮುನ್ನಾ ಕೂಡ ಒಂದಷ್ಟು ಕಲಿಕೆ ಮುಖ್ಯವಾಗುತ್ತದೆ.
ಟೆಕ್ನಿಕಲಿ ಷೇರು ಮಾರುಕಟ್ಟೆಯಲ್ಲಿ ನೊಂದಾಯಿತವಾಗಿರುವ ಯಾವುದೇ ಕಂಪನಿಯ ಷೇರನ್ನ ಪೆನ್ನಿ ಸ್ಟಾಕ್ ಎಂದು ಕರೆಯಲು ಸಾಧ್ಯವಿಲ್ಲ. ಉದಾಹರಣೆಗೆ ಒಂದು ದೊಡ್ಡ ಮತ್ತು ಹೆಸರುಳ್ಳ ಸಂಸ್ಥೆ ಯಾವುದಾದರೊಂದು ಕಾರಣಕ್ಕೆ ಕುಸಿತಕ್ಕೆ ಒಳಗಾಗಿ ಅದರ ಷೇರಿನ ಮೌಲ್ಯ ಹತ್ತು ರೂಪಾಯಿಗಿಂತ ಕಡಿಮೆಯಾದರೆ ಅದನ್ನ ಪೆನ್ನಿ ಸ್ಟಾಕ್ ಎನ್ನಲು ಬರುವುದಿಲ್ಲ.
ಪೆನ್ನಿ ಸ್ಟಾಕುಗಳಲ್ಲಿ ಕೂಡ ಹಲವಾರು ವಿಧಗಳಿವೆ. ಪೆನ್ನಿ ಸ್ಟಾಕ್ ಎಂದ ತಕ್ಷಣ ಇದು ತಕ್ಷಣ ಪ್ರಯೋಜನಕ್ಕೆ ಬಾರದ ಸ್ಟಾಕ್ ಎನ್ನುವುದು ಸತ್ಯ. ಅದರಲ್ಲೂ ವೇಗವಾಗಿ ಬಿಕರಿಯಾಗಬಲ್ಲ ಷೇರುಗಳು ಇರುತ್ತವೆ. ಹೀಗಾಗಿ ಇವುಗಳ ಬಗ್ಗೆ ತಿಳುವಳಿಕೆ ಇಲ್ಲದೆ ಒಮ್ಮೆಲೇ ಈ ಸ್ಟಾಕುಗಳ ಖರೀದಿಗೆ ಧುಮುಕುವುದು ಕೂಡ ಸರಿಯಲ್ಲ. ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಮುಖ್ಯವಾಗಿದೆ.


Click it and Unblock the Notifications