ಬೆಂಗಳೂರು, ಜೂನ್ 11: ಕನ್ನಡದ ಖ್ಯಾತ ನಟ ದರ್ಶನ್ ತೂಗುದೀಪ ಅವರನ್ನು ಈಗ ಚಿತ್ರದುರ್ಗ ಮೂಲದ ಕೊಲೆ ಪ್ರಕರಣವೊಂದರಲ್ಲಿ ಬಂಧನ ಮಾಡಲಾಗಿದೆ. ಅಲ್ಲದೆ ಅವರ ಗೆಳತಿ ಎನ್ನಲಾದ ಪವಿತ್ರಗೌಡ ಅವರನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಹಲವಾರು ಐಷರಾಮಿ ಕಾರುಗಳನ್ನು ಹೊಂದಿರುವ ದರ್ಶನ್ ಅವರ ಆಸ್ತಿ ವಿವರ ಇಲ್ಲಿದೆ.
ಕನ್ನಡದ ಬಹುಬೇಡಿಕೆಯ ನಟ ದರ್ಶನ್ ತೂಗುದೀಪ. ಅವರ ಹೆಸರಿನ ಹಿಂದೆ ಇರುವ ಖ್ಯಾತಿಯಷ್ಟೇ ಅವರ ಮೇಲೆ ಹಲವು ಆರೋಪ. ವಿವಾದಗಳು ಇವೆ. ಅನೇಕ ಕನ್ನಡ ನಿರ್ಮಾಪಕರು, ಖ್ಯಾತನಾಮರು ಅವರ ವಿರುದ್ಧ ಅಸಮಾಧಾನ, ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈಗ ಹೊಸ ವಿವಾದ ಎಂಬಂತೆ ಅವರ ಗೆಳತಿ ಪವಿತ್ರಗೌಡ ಅವರಿಗೆ ಸಂಬಂಧಿಸಿದ್ದು.

ದರ್ಶನ್ ಗೆಳತಿ ಪವಿತ್ರ ಗೌಡ ಇನ್ ಸ್ಟಾಗ್ರಾಮ್ ಖ್ಯಾತೆಯಲ್ಲಿರುವ ಫೋಟೋಗಳಿಗೆ ಚಿತ್ರದುರ್ಗ ಮೂಲಕ ರೇಣುಕಸ್ವಾಮಿ ಎಂಬಾತ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಎಂಬ ವಿಚಾರಕ್ಕೆ ನಟ ದರ್ಶನ್ ಅವರ ಸೂಚನೆ ಮೇರೆಗೆ ಹಲ್ಲೆ ಮಾಡಲಾಗಿತ್ತು. ಬಳಿಕ ನಡೆದ ಬೆಳವಣಿಗೆಯಲ್ಲಿ ಆತ ಕೊಲೆಯಾಗಿದ್ದನು ಎಂದು ವರದಿಗಳು ತಿಳಿಸಿವೆ. ನಟ ದರ್ಶನ್ ಅವರ ಸೂಚನೆಯಂತೆ ಈ ಕೊಲೆ ನಡೆದಿದೆ ಎಂದು ಪೊಲೀಸರು ಈಗ ಅವರನ್ನು ವಶಕ್ಕೆ ಪಡೆದಿದ್ದಾರೆ.
ದರ್ಶನ್ ಆಸ್ತಿ:
ವರದಿಯೊಂದರ ಪ್ರಕಾರ 100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ. ಅವರು ಮೈಸೂರನಲ್ಲಿ ಫಾರ್ಮ್ ಹೌಸ್ ಹೊಂದಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮನೆ, ಹಲವೆಡೆ ಜಮೀನು ಹಾಗೂ ಹೂಡಿಕೆಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಇದಲ್ಲದೆ ಕೋಟ್ಯಾಂತರ ರೂಪಾಯಿ ಮೌಲ್ಯದ ವಾಚುಗಳ ಕಲೆಕ್ಷನ್ ಹೊಂದಿದ್ದಾರೆ ಎನ್ನಲಾಗಿದೆ.
ದರ್ಶನ್ ಕಾರುಗಳು:
ನಟ ದರ್ಶನ್ ಅವರ ಬಳಿಕ ಅನೇಕ ಐಷಾರಾಮಿ ಕಾರುಗಳ ಕಲೆಕ್ಷನ್ ಇದೆ. ಮೊದಲಿನಿಂದಲೂ ದರ್ಶನ್ ಅವರಿಗೆ ಕಾರುಗಳ ಮೇಲೆ ಒಲವು ಹೆಚ್ಚಾಗಿದೆ. ಇತ್ತೀಚೆಗೆ ಅವರು ಫೋರ್ಡ್ ಮಸ್ಟಾನ್ ಎಂಬ ಕಾರನ್ನು ಖರೀದಿಸಿದ್ದಾರೆ. ಇದರ ಬೆಲೆ ಒಂದು ಕೋಟಿ ಎನ್ನಲಾಗಿದೆ. ಇಲ್ಲದೆ ಬಿಳಿ ಬಣ್ಣದ ಲಂಬೋರ್ಗಿನಿ ಕಾರ್, ಪೋರ್ಶೆ, ಥಾರ್, ಫೋರ್ಡ್ ಎಂಡವಿಯರ್ ಇದರ ಬೆಲೆ ಮೂವತ್ತಾರು ಲಕ್ಷ ರೂಪಾಯಿ.
ಇದಲ್ಲದೆ ಮಿನಿ ಕೂಪರ್ ಕಾರು ಹೊಂದಿದ್ದಾರೆ ಇದರ ಬೆಲೆ 47 ಲಕ್ಷ ಎನ್ನಲಾಗಿದೆ. ಅಲ್ಲದೆ 50 ಲಕ್ಷ ರೂಪಾಯಿಯ ಟೊಯೋಟ ಫಾರ್ಚುನರ್ ಕಾರ್, ಬಿಎಂಡ್ಲೂ 520 ಡಿ ಕಾರು 65 ಲಕ್ಷ ರೂಪಾಯಿ, ಇದರೊಂದಿಗೆ 1 ಕೋಟಿ 16 ಲಕ್ಷದ ಮೌಲ್ಯದ ಆಡಿ ಕಾರು, ಜಾಗ್ವಾರ್ ಎಕ್ಸ್ ಕೆ ಕಾರು ಇದರ ಬೆಲೆ 1.2 ಕೋಟಿ, ಟೊಯೋಟಾ ವೆಲ್ಫೋರ್ ಇದರ ಬೆಲೆ 1.2 ಕೋಟಿ, ಇಲ್ಲದೆ ರೇಂಜ್ ರೋವರ್ ವೋಗ್ ಇದರ ಬೆಲೆ 2.64 ಕೋಟಿ. ಇದಲ್ಲದೆ ರೇಂಜ್ ರೋವರ್ ಡಿಫೆಂಡ್ ಇದರ ಬೆಲೆ 2.3 ಕೋಟಿ, ಲ್ಯಾಂಬೋರ್ಗಿನಿ ಹುರುಸ್ ಕಾರು 4.18 ಕೋಟಿ. ಲ್ಯಾಂಬೋರ್ಗಿನಿ ಅವೆಂಡರ್ ಎಸ್ 5 ಕೋಟಿ ಮೌಲ್ಯದ ಕಾರನ್ನು ಹೊಂದಿದ್ದಾರೆ ಎನ್ನಲಾಗಿದೆ.
ದರ್ಶನ್ ಚಿತ್ರಗಳು:
ದರ್ಶನ್ ತೂಗುದೀಪ್ 2002 ರಲ್ಲಿ ಮೆಜೆಸ್ಟಿಕ್, 2003 ರಲ್ಲಿ ಕರಿಯಾ, 2005 ರಲ್ಲಿ ಶಾಸ್ತ್ರಿ, 2006 ರಲ್ಲಿ ದತ್ತ, 2007 ರಲ್ಲಿ ಅನಾಥರು, 2009 ರಲ್ಲಿ ಅಭಯ್, 2011 ರಲ್ಲಿ ಸಾರಥಿ, 2013 ರಲ್ಲಿ ಬುಲ್‌ಬುಲ್, 2013 ರಲ್ಲಿ ಅಂಬರೀಶ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ದರ್ಶನ್ ತೂಗುದೀಪ್ 2010 ರಲ್ಲಿ ಜೀ ಕನ್ನಡ ಇನ್ನೋವೇಟಿವ್ ಫಿಲ್ಮ್ ಅವಾರ್ಡ್ಸ್‌ನಲ್ಲಿ ಒನಿಡಾ ಸ್ಟೈಲ್ ಐಕಾನ್, 2012 ರಲ್ಲಿ ಟಿವಿ9 ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ, 2012 ರಲ್ಲಿ ಸುವರ್ಣ ಫಿಲ್ಮ್ ಅವಾರ್ಡ್ಸ್‌ನಲ್ಲಿ ನೆಚ್ಚಿನ ನಾಯಕ, 2012 ರಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ಶ್ರೇಷ್ಠ ವ್ಯಕ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮತ್ತು 2013 ರಲ್ಲಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ. 2006 ರಲ್ಲಿ ಅವರು ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.
More From GoodReturns

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ



Click it and Unblock the Notifications