ಕರ್ನಾಟಕದಲ್ಲಿ ದಸರಾ ಹಬ್ಬವು ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದ್ದು, ಮೈಸೂರಿನ ದಸರಾ ದೇಶದ ಅತ್ಯಂತ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಆದರೆ ಈ ಹಬ್ಬವು ಕೇವಲ ಸಾಂಸ್ಕೃತಿಕ ಉತ್ಸವವಷ್ಟೇ ಅಲ್ಲ, ರಾಜ್ಯದ ಆರ್ಥಿಕತೆಗೆ ಭಾರೀ ಬೂಸ್ಟ್ ನೀಡುವ ಪ್ರಮುಖ ಹಬ್ಬವಾಗಿದೆ. ಪ್ರತಿವರ್ಷವೂ ದಸರಾ ಹಬ್ಬದ ಸಮಯದಲ್ಲಿ ರಾಜ್ಯದ ಅನೇಕ ವಲಯಗಳು ಚೈತನ್ಯಗೊಳ್ಳುತ್ತವೆ. ಪ್ರವಾಸೋದ್ಯಮ, ಚಿಲ್ಲರೆ ವ್ಯಾಪಾರ, ಹೋಟೆಲ್ ಉದ್ಯಮ, ಸಾರಿಗೆ ಸೇವೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಆರ್ಥಿಕ ಚಟುವಟಿಕೆಗಳು ತೀವ್ರಗೊಳ್ಳುತ್ತವೆ.

ಪ್ರವಾಸೋದ್ಯಮಕ್ಕೆ ಭಾರೀ ಉತ್ತೇಜನ:
ಮೈಸೂರಿನ ದಸರಾ ದೇಶದ ಮೂಲೆಮೂಲೆಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಹಬ್ಬ. ದಸರಾ ಹಬ್ಬದ ಹತ್ತು ದಿನಗಳಲ್ಲಿ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಟ್ಟಣೆ ಗರಿಷ್ಠ ಮಟ್ಟದಲ್ಲಿರುತ್ತದೆ. ಹೋಟೆಲ್‌ಗಳು, ಲಾಡ್ಜ್‌ಗಳು, ಹೋಂಸ್ಟೇಗಳು, ರೆಸ್ಟೋರೆಂಟ್‌ಗಳು ಹಾಗೂ ಪ್ರವಾಸಿ ವಾಹನ ಸೇವೆಗಳು ತಿಂಗಳುಗಟ್ಟಲೆ ವ್ಯವಹಾರಕ್ಕಾಗಿ ಕಾಯುತ್ತಿದ್ದು, ದಸರಾ ಕಾಲವು ಇವರಿಗೆ ಬಂಗಾರದ ಸಮಯ.
ಮೈಸೂರು ಮಾತ್ರವಲ್ಲದೆ ತುಮಕೂರು, ಹಾಸನ, ಮಡಿಕೇರಿ, ಚಾಮರಾಜನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ದಸರಾ ಸಂಭ್ರಮವು ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡುತ್ತದೆ.
ಚಿಲ್ಲರೆ ವ್ಯಾಪಾರ ಮತ್ತು ಹಸ್ತಕಲಾ ವಲಯದ ಚಟುವಟಿಕೆ:
ದಸರಾ ಸಮಯದಲ್ಲಿ ಉಡುಪು, ಆಭರಣ, ಗೃಹೋಪಯೋಗಿ ವಸ್ತುಗಳು, ಆಟಿಕೆಗಳು, ಹಸ್ತಕಲಾ ಉತ್ಪನ್ನಗಳ ಮಾರಾಟದಲ್ಲಿ ಭಾರೀ ಏರಿಕೆ ಕಾಣುತ್ತದೆ. ಮೈಸೂರು ದಸರಾ ಪ್ರದರ್ಶನ ಮೇಳಗಳು, ಹಸ್ತಕಲಾ ಮೇಳಗಳು ಹಾಗೂ ಸ್ಥಳೀಯ ಮಾರುಕಟ್ಟೆಗಳು ಹಬ್ಬದ ಸಂಭ್ರಮದಲ್ಲಿ ನೂರಾರು ವ್ಯಾಪಾರಿಗಳನ್ನು, ಸಾವಿರಾರು ಗ್ರಾಹಕರನ್ನು ಆಕರ್ಷಿಸುತ್ತವೆ.
ಇತ್ತೀಚಿನ ದಿನಗಳಲ್ಲಿ ದಸರಾ ಗೊಂಬೆಗಳ ಮಾರಾಟವೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಚಿತ್ರಮಾಲಿಕೆಗಳು ಹಾಗೂ ಪೌರಾಣಿಕ ಕಥೆಗಳ ಪ್ರೇರಣೆಯಿಂದ ಹೊಸ ಮಾದರಿಯ ಗೊಂಬೆಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಇವುಗಳು ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕದ ಚನ್ನಪಟ್ಟಣ ಸೇರಿದಂತೆ ಹಲವಾರು ಪ್ರದೇಶಗಳಿಂದ ತಯಾರಾಗುತ್ತವೆ.
ಆರ್ಥಿಕ ತಜ್ಞರ ಅಭಿಪ್ರಾಯ:
ಆರ್ಥಿಕ ತಜ್ಞರಾದ ಎಸ್.ಆರ್. ಕೇಶವ ಅವರು ದಸರಾ ಹಬ್ಬದ ಆರ್ಥಿಕ ಮಹತ್ವವನ್ನು ವಿವರಿಸುತ್ತಾ ಹೀಗೆ ಹೇಳಿದ್ದಾರೆ. "ದಸರಾ ಕೇವಲ ಒಂದು ದಿನದ ಹಬ್ಬವಲ್ಲ, ಇದು ಒಂಭತ್ತು ದಿನಗಳ ಆಚರಣೆ. ಈ ಒಂಭತ್ತು ದಿನಗಳಲ್ಲೂ ಖರೀದಿ ಭರಾಟೆ ಜೋರಾಗಿರುತ್ತದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗುವುದರಿಂದ ಸ್ಥಳೀಯ ವ್ಯಾಪಾರ, ಹಸ್ತಕಲಾ ಮೇಳಗಳು, ಹೂ-ಹಣ್ಣು ಮಾರಾಟ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ದಸರಾ ದೊಡ್ಡ ಉತ್ತೇಜನ ನೀಡುತ್ತದೆ. ಶಾಲಾ, ಕಾಲೇಜು ಮಕ್ಕಳಿಗೆ ರಜೆ ಇರುತ್ತದೆ. ಕುಟುಂಬ ಸಮೇತರಾಗಿ ಪ್ರವಾಸ ಹೋಗುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಇದರಿಂದ ಪ್ರವಾಸೋದ್ಯಮ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ದಸರಾ ಮಹತ್ವದ ಆರ್ಥಿಕ ಬೂಸ್ಟ್ ಆಗುತ್ತದೆ."
ಜಿಎಸ್‌ಟಿ ಸಂಗ್ರಹಕ್ಕೂ ಸಹಾಯ:
ಇತ್ತೀಚೆಗೆ ಜಿಎಸ್‌ಟಿ ದರಗಳಲ್ಲಿ ಕೆಲವು ಕ್ಷೇತ್ರಗಳಿಗೆ ವಿನಾಯಿತಿಗಳು ದೊರಕಿರುವುದರಿಂದ ಜನರು ಹೆಚ್ಚು ಖರೀದಿಸಲು ಪ್ರೋತ್ಸಾಹಿತರಾಗಿದ್ದಾರೆ. ಹಬ್ಬದ ಸಮಯದಲ್ಲಿ ಜನರು ಉಡುಪು, ಆಭರಣ, ಎಲೆಕ್ಟ್ರಾನಿಕ್ ವಸ್ತುಗಳು, ಆಟಿಕೆಗಳು ಮುಂತಾದವುಗಳನ್ನು ಹೆಚ್ಚಾಗಿ ಖರೀದಿಸುವುದರಿಂದ ಮಾರಾಟ ಏರಿಕೆಯಾಗುತ್ತದೆ. ಇದರಿಂದ ವ್ಯಾಪಾರಿಗಳಿಗೆ ಲಾಭವಾಗುವುದರ ಜೊತೆಗೆ ಸರ್ಕಾರಕ್ಕೂ ಹೆಚ್ಚುವರಿ ಜಿಎಸ್‌ಟಿ ಆದಾಯ ಲಭ್ಯವಾಗುತ್ತದೆ. ಹೀಗಾಗಿ ಹಬ್ಬದ ಸಂಭ್ರಮ ಮತ್ತು ಆರ್ಥಿಕ ಚಟುವಟಿಕೆ ಎರಡೂ ಕೈಹಿಡಿದು ಸಾಗುತ್ತವೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಆರ್ಥಿಕ ಪ್ರಭಾವ:
ಮೈಸೂರು ದಸರಾ ವೇಳೆ ನಡೆಯುವ ಜಂಬೂ ಸವಾರಿ, ಸಾಂಸ್ಕೃತಿಕ ಸಂಗೀತ-ನೃತ್ಯ ಕಾರ್ಯಕ್ರಮಗಳು, ದಸರಾ ಪ್ರದರ್ಶನ, ಡ್ರೋನ್ ಶೋಗಳು ಮುಂತಾದವು ಪ್ರವಾಸಿಗರ ದಟ್ಟಣೆಯನ್ನು ಸೆಳೆಯುತ್ತವೆ. ಟಿಕೆಟ್ ಆಧಾರಿತ ಕಾರ್ಯಕ್ರಮಗಳಿಂದ ಸ್ಥಳೀಯ ಆಡಳಿತಕ್ಕೆ ಆದಾಯ ಬರುವುದರ ಜೊತೆಗೆ ವ್ಯಾಪಾರಿಗಳಿಗೆ ಸಹ ಹೆಚ್ಚುವರಿ ಅವಕಾಶಗಳು ಸೃಷ್ಟಿಯಾಗುತ್ತವೆ. ಸ್ಥಳೀಯ ಕಲಾವಿದರು, ಕೈಗಾರಿಕೆಗಳು ಹಾಗೂ ವ್ಯಾಪಾರಿಗಳಿಗೆ ದಸರಾ ಒಂದು ಆರ್ಥಿಕ ಹಬ್ಬವಾಗಿಯೇ ಪರಿಣಮಿಸುತ್ತದೆ.
ಒಟ್ಟಿನಲ್ಲಿ, ದಸರಾ ಹಬ್ಬವು ಕರ್ನಾಟಕದ ಆರ್ಥಿಕತೆಗೆ ಕೇವಲ ಸೀಸನಲ್ ಬೂಸ್ಟ್ ನೀಡುವುದಲ್ಲ, ರಾಜ್ಯದ ಪ್ರವಾಸೋದ್ಯಮ, ಚಿಲ್ಲರೆ ವ್ಯಾಪಾರ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಸಾರಿಗೆ ವಲಯಗಳಿಗೆ ಜೀವ ತುಂಬುವ ಹಬ್ಬವಾಗಿದೆ. ಮೈಸೂರಿನ ದಸರಾ ಭಾರತದ ಸಾಂಸ್ಕೃತಿಕ ಹೆಗ್ಗಳಿಕೆಗೆ ಕಿರೀಟವಾದರೆ, ಆರ್ಥಿಕ ಪ್ರಗತಿಗೂ ಇದು ಮಹತ್ತರ ಕೊಡುಗೆ ನೀಡುತ್ತಿದೆ.
(Disclaimer: The views and recommendations expressed are solely those of the individual analysts or entities and do not reflect the views of Goodreturns.in or Greynium Information Technologies Private Limited (together referred as "we"). We do not guarantee, endorse or take responsibility for the accuracy, completeness or reliability of any content, nor do we provide any investment advice or solicit the purchase or sale of securities. All information is provided for informational and educational purposes only and should be independently verified from licensed financial advisors before making any investment decisions.)
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ



Click it and Unblock the Notifications