ಪ್ರಸ್ತುತ ಕನಕಪುರ ವಿಧಾನ ಸಭಾ ಕ್ಷೇತ್ರದ ಶಾಸಕರು, ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಇತ್ತೀಚೆಗಂತೂ ಡಿಕೆ ಶಿವಕುಮಾರ್ ದಿನಂಪ್ರತಿ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಬಿಜೆಪಿ ಹೇಳಿಕೆಯಂತೆ ನವೆಂಬರ್ ಕ್ರಾಂತಿ ಆಗುತ್ತಾ ಎಂಬ ಕಾತುರದಲ್ಲಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಸದ್ಯ ಸಿಎಂ ಸೀಟಿಗಾಗಿ ಚರ್ಚೆಯಲ್ಲಿದ್ದರೆ, ಹಿಂದೆ ತನ್ನ ಆಸ್ತಿಯಿಂದಾಗಿ ಭಾರೀ ಸುದ್ದಿಯಲ್ಲಿರುತ್ತಿದ್ದರು. ಹಾಗಿದ್ರೆ ನಿಜವಾಗಲೂ ಡಿಸಿಎಂ ಡಿಕೆ ಶಿವಕುಮಾರ್ ಅವರ ನಿವ್ವಳ ಮೌಲ್ಯ (Net Worth), ಆಸ್ತಿ ಎಷ್ಟು ಗೊತ್ತಾ?

ಇತ್ತೀಚೆಗಷ್ಟೇ ಡಿಕೆ ಶಿವಕುಮಾರ್ ಅವರು ದೇಶದಲ್ಲೇ ಎರಡನೇ ಶ್ರೀಮಂತ ಸಚಿವ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದರು. ಆ ನಂತರ ದೇಶದಲ್ಲಿ ಡಿಕೆಶಿಯವರ ಆಸ್ತಿ ಎಷ್ಟು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ನಾವು ನೀಡುತ್ತೇವೆ. ಸಂಪೂರ್ಣ ಮಾಹಿತಿ ಕೆಳಗಿನ ಲೇಖನದಲ್ಲಿದೆ ಓದಿ.
ಡಿಕೆ ಶಿವಕುಮಾರ್ ಅವರ ಒಟ್ಟು ಆಸ್ತಿ ಎಷ್ಟು?
ಡಿಕೆ ಶಿವಕುಮಾರ್ ಒಂದು ರೀತಿಯಲ್ಲಿ ಕಾಂಗ್ರೆಸ್‌ಗೆ ರಕ್ಷಕ ಎಂದರೂ ತಪ್ಪಾಗಲ್ಲ. ಸದ್ಯ ಡಿಕೆ ಶಿವಕುಮಾರ್ ಅವರ ಒಟ್ಟು ಆಸ್ತಿ ಎಷ್ಟು, ನಗದು, ಜಮೀನು, ಚಿನ್ನ-ಬೆಳ್ಳಿ ಹೂಡಿಕೆ, ಕಾರು ಸೇರಿದಂತೆ ಡಿಕೆಶಿ ಖಜಾನೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಡಿಕೆಶಿ ನೂರಾರು ಕೋಟಿಗಳ ಒಡೆಯ ಅಂದರೂ ತಪ್ಪಾಗಲ್ಲ. 2023 ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಡಿಕೆ ಶಿವಕುಮಾರ್ ತನ್ನ ಆಸ್ತಿ ಬಗ್ಗೆ ರಿವೀಲ್ ಮಾಡಿದ್ದಾರೆ. ಇದರಲ್ಲಿ ಹಲವಾರು ಬ್ಯಾಂಕ್ ಅಕೌಂಟ್‌ಗಳು, ಜಮೀನು ಮತ್ತು ಬಾಂಡ್‌ಗಳು, ಚಿನ್ನ ಇರುವುದಾಗಿ ಘೋಷಣೆ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಮತ್ತು ಅವರ ಕುಟುಂಬವು ಒಟ್ಟು 1,413.78 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. 2018ಕ್ಕೆ ಹೋಲಿಸಿದ್ರೆ 2023ರಲ್ಲಿ ಡಿಕೆಶಿ ಆಸ್ತಿಯಲ್ಲಿ ಭಾರೀ ಏರಿಕೆಯಾಗಿದೆ. ಅಂದರೆ 2018 ರಲ್ಲಿ ಈ ಆಸ್ತಿಯ ಮೌಲ್ಯ 840.08 ಕೋಟಿ ರೂ. ಇತ್ತು ಆದರೆ ಕೇವಲ 5 ವರ್ಷಗಳಲ್ಲಿ ಈ ಅಸ್ತಿ ಮೌಲ್ಯ ಶೇ.68.29% ರಷ್ಟು ಹೆಚ್ಚಳವಾಗಿದೆ. ಇನ್ನು 2013 ಕ್ಕೆ ಹೋಲಿಸಿದ್ರೆ ಅದಕ್ಕಿಂತ ಮೂರು ಪಟ್ಟು ಹೆಚ್ಚಳವಾಗಿದೆ
ಚರಾಸ್ತಿ ಮತ್ತು ಸ್ಥಿರಾಸ್ತಿ:
ಡಿಕೆ ಶಿವಕುಮಾರ್ ಅವರು ₹251.69 ಕೋಟಿ ಚರಾಸ್ತಿ ಹೊಂದಿದ್ದಾರೆ. ಇದರಲ್ಲಿ ಹಿಂದೂ ಅವಿಭಜಿತ ಕುಟುಂಬದ (ಪಿತ್ರಾರ್ಜಿತ) (HUF) ₹6.75 ಕೋಟಿ ಸೇರಿದೆ. ಒಟ್ಟಾರೆಯಾಗಿ ಅವರ ಕುಟುಂಬದ ಬಳಿ ಒಟ್ಟು ₹273.42 ಕೋಟಿ ರೂ ಮೌಲ್ಯದ ಚರಾಸ್ತಿಯನ್ನು ಹೊಂದಿಎ
ಡಿಕೆ ಶಿವಕುಮಾರ್ ಬಳಿ ಸ್ಥಿರಾಸ್ತಿ ಮೌಲ್ಯ ₹972.65 ಕೋಟಿ ಆಗಿದ್ದರೆ, ಅವರ ಕುಟುಂಬದ ಒಟ್ಟು ಸ್ಥಿರಾಸ್ತಿ ₹1,140.36 ಕೋಟಿ ಆಗಿದೆ.
ಕಾರುಗಳು ಮತ್ತು ಆಭರಣಗಳು:
2023ರ ಅಫಿಡವಿಟ್ ಪ್ರಕಾರ ಡಿಕೆ ಶಿವಕುಮಾರ್ ಅವರು 8.35 ಲಕ್ಷ ಮೌಲ್ಯ ಟೊಯೋಟಾ ಕ್ವಾಲಿಸ್ ಕಾಋನ್ನು ಹೊಂದಿದ್ದಾರೆ. ಅಲ್ಲದೇ 12 ಬ್ಯಾಂಕ್ ಖಾತೆಗಳನ್ನು ಹೊಂದಿರುವ ಡಿಕೆಶಿ, 225 ಕೋಟಿ ಸಾಲ ಕೂಡಾ ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೇ 2.80 ಕೋಟಿ ರೂ. ಮೌಲ್ಯ ಆಭರಣಗಳನ್ನೂ ಡಿಕೆಶಿ ಹೊಂದಿದ್ದಾರೆ.
ಡಿಕೆ ಶಿವಕುಮಾರ್ ವಿರುದ್ಧ ಪ್ರಕರಣಗಳು!
ಕಾಂಗ್ರೆಸ್ ನಾಯಕ, ಕನಕಪುರ ಶಾಸಕ ಡಿಕೆ ಶಿವಕುಮಾರ್ 19 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು 2013 ರಲ್ಲಿ ಘೋಷಣೆ ಮಾಡಿದ್ದರು. ಅವುಗಳಲ್ಲಿ 4 ಆದಾಯ ತೆರಿಗೆ ಇಲಾಖೆಯಿಂದ ಬಂದರೆ, 2 ಜಾರಿ ನಿರ್ದೇಶನಾಲಯ ಮತ್ತು ಒಂದು ಕೇಂದ್ರ ತನಿಖಾ ದಳದಿಂದ ದಾಖಲಾಗಿದೆ. ಈ ಪ್ರಕರಣಗಳು ವಿಚಾರಣೆಯ ಹಂತದಲ್ಲಿದೆ.


Click it and Unblock the Notifications