ದೀಪಕ್ ಅಗರ್ವಾಲ್ ಪಯಣ: ಕುರುಕಲು ತಿಂಡಿಯಿಂದ ₹21430 ಕೋಟಿ ರೂ. ಉದ್ಯಮದವರೆಗೆ

ಕುರುಕಲು ತಿಂಡಿ, ಲಘು ಉಪಾಹಾರಗಳಿಗೆ ಪ್ರಸಿದ್ದ ಪಡೆದುಕೊಂಡಿರುವ ಭಾರತದಲ್ಲಿ ಇದರ ಉದ್ಯಮದ ಮೂಲಕ ಈಗಾಗಲೇ ಹಲವು ಸಂಖ್ಯೆಯಲ್ಲಿ ಉದ್ಯಮಿಗಳು ಭಾರೀ ಲಾಭ ಗಳಿಸುತ್ತಿದ್ದು, ವಿದೇಶಗಳಿಗೆ ಕೂಡ ರಫ್ತಾಗುತ್ತಿದೆ. ಹೀಗೆ ವಿದೇಶಿ ರಾಷ್ಟ್ರಗಳಲ್ಲಿ ಭಾರತೀಯ ಉತ್ಪನ್ನಗಳ ಬಗ್ಗೆ ಕ್ರೇಜ್‌ ಮೂಡಿಸುವ ಮೂಲಕ ಭಾರತದ ತಿಂಡಿ ತಿನಿಸುಗಳನ್ನು ಹೊರಗಿನ ದೇಶಗಳಲ್ಲಿ ಕೂಡ ಪ್ರಚಾರ ನೀಡಿದ್ದಾರೆ. ಒಟ್ಟಿನ್ಲಲಿ ಇದರಿಂದ ಭಾರತಕ್ಕೆ ವಿದೇಶಿ ವಿನಿಮಯ ಗಳಿಕೆಗೆ ನೆರವು ನೀಡುತ್ತಿದ್ದಾರೆ. ಸದ್ಯ ನಾವಿಲ್ಲಿ ಇದೇ ಉದ್ಯಮದ ಮಾಡುತ್ತಿರುವ ಉದ್ಯಮಿ ಬಗ್ಗೆ ಮಾಹಿತಿ ನೀಡಿದ್ದೇವೆ. ಎಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಹಲವಾರು ಲಘು ಉಪಾಹಾರ ತಯಾರಕ ಕಂಪೆನಿಗಳಿವೆ. ಅವುಗಳಲ್ಲಿ ಬಿಕಾಜಿ ಫುಡ್ಸ್‌ ಇಂಟರ್‌ನ್ಯಾಷನಲ್‌ ಕೂಡ ಒಂದಾಗಿದೆ. ಸದ್ಯ ಇದೇ ಬಿಕಾಜಿ ಫುಡ್ಸ್‌ ಇಂಟರ್‌ನ್ಯಾಷನಲ್‌ ಮುಖ್ಯಸ್ಥರಾಗಿರುವ ದೀಪಕ್‌ ಅಗರ್‌ವಾಲ್‌ ಅವರು ಭಾರತದ ತಿಂಡಿ ತಿನಿಸುಗಳು ಹಾಗೂ ಲಘು ಉಪಾಹಾರಗಳನ್ನು ಕೇವಲ ದೇಶದಲ್ಲೇ ಅಲ್ಲದೆ ವಿಶ್ವದಲ್ಲೇ ಖ್ಯಾತಿ ಸಿಗುವಂತೆ ಮಾಡಿದ್ದಾರೆ.

ದೀಪಕ್‌ ಅಗರ್‌ವಾಲ್‌ ಅವರು ಬಿಕಾಜಿ ಫುಡ್ಸ್‌ ಇಂಟರ್‌ನ್ಯಾಷನಲ್‌ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಕಂಪೆನಿಯ ಮಾರುಕಟ್ಟೆ ಮೌಲ್ಯವು ಡಿಸೆಂಬರ್‌ 10ರ ವೇಳೆಗೆ ಬರೊಬ್ಬರಿ 21430 ಕೋಟಿ ರೂ. ಮೌಲ್ಯವನ್ನು ಹೊಂದಿದೆ ಎನ್ನಲಾಗಿದೆ. ದೀಪಕ್ ಅವರು ಭಾರತೀಯ ಬಿಲಿಯನೇರ್ ಉದ್ಯಮಿ ಹಾಗೂ ಕಂಪನಿಯ ಸಂಸ್ಥಾಪಕ ಮತ್ತು ಅಧ್ಯಕ್ಷ ಶಿವರತನ್ ಅಗರ್ವಾಲ್ ಅವರ ಪುತ್ರನಾಗಿದ್ದಾರೆ. ಇನ್ನು ಫೋರ್ಬ್ಸ್ ಪ್ರಕಾರ ಶಿವರತನ್ ನಿವ್ವಳ ಮೌಲ್ಯ 1.9 ಶತಕೋಟಿ ಡಾಲರ್‌ ಎಂದು ಅಂದಾಜಿಸಲಾಗಿದೆ.

 21430 ಕೋ.ರೂ. ಮೌಲ್ಯದ ಕಂಪೆನಿ ಮುನ್ನಡೆಸುವ ದೀಪಕ್‌ !

ಕಂಪೆನಿಯ ಆರಂಭ ಹೇಗಿತ್ತು?

ಬಿಕಾಜಿ ಫುಡ್ಸ್‌ ಇಂಟರ್‌ನ್ಯಾಷನಲ್‌ ಕಂಪೆನಿಯು ಭಾರತದ ಪ್ರಸಿದ್ದ ಲಘು ಉಪಾಹಾರ ತಯಾರಕಾ ಸಂಸ್ಥೆಗಳಲ್ಲಿ ಒಂದಾಗಿದೆ. ಇನ್ನು ಈ ಕಂಪೆನಿಯನ್ನು 1986 ರಲ್ಲಿ ಶಿವದೀಪ್ ಪ್ರಾಡಕ್ಟ್ಸ್ ಎಂಬ ಹೆಸರಿನಿಂದ ಆರಂಭಿಸಲಾಗಿತ್ತು. ಶಿವರತನ್ ಅಗರ್ವಾಲ್ ಅವರ ತಂದೆಯ ಹೆಸರನ್ನು ಆರಂಭದಲ್ಲಿ ಕಂಪೆನಿಗೆ ಇಡಲಾಗಿತ್ತು. ಬಳಿಕ 1993 ರಲ್ಲಿ ಬಿಕಾಜಿ ಬ್ರಾಂಡ್ ಎಂಬ ಹೆಸರಿನಿಂದ ಕಂಪೆನಿಯನ್ನು ಪುನರ್‌ ಆರಂಭಿಸಲಾಗಿತ್ತು. ಇನ್ನು ದೀಪಕ್‌ ಬಗ್ಗೆ ಹೇಳುವುದಾದರೆ 2002ರ ಸೆಪ್ಟೆಂಬರ್ 30ರಿಂದ ಕಂಪೆನಿಯ ಪ್ರಮುಖ ನಿರ್ದೇಶಕ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಇನ್ನು ದೀಪಕ್‌ ಅವರು ಮುಂಬೈನ ಎಸ್ಪಿ ಜೈನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ರಿಸರ್ಚ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು (ಕುಟುಂಬ ನಿರ್ವಹಣೆಯ ವ್ಯವಹಾರ) ಪಡೆದುಕೊಂಡಿದ್ದಾರೆ. ಇನ್ನು ದೀಪಕ್‌ ಅವರು ಆಹಾರ ಉದ್ಯಮದಲ್ಲಿ 21 ವರ್ಷಗಳ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಅವರು ತನ್ನ ಗಮನವನ್ನು ಭಾರತದ ಸಾಂಪ್ರದಾಯಿಕ ತಿಂಡಿ ತಿನಿಸುಗಳು, ಸಿಹಿತಿಂಡಿಗಳ ಮೇಲೆ ಕೇಂದ್ರೀಕರಿಸಿದ್ದಾರೆ. ದೀಪಕ್‌ ಅವರು ಕಂಪೆನಿಯ ದಿನನಿತ್ಯದ ಕಾರ್ಯಾಚರಣೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದು, ಅಂಗಸಂಸ್ಥೆಗಳು ಸೇರಿದಂತೆ ವಿವಿಧ ಕಾರ್ಯಾಚರಣೆಯನ್ನು ಸಮರ್ಥವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಹಲ್ದಿರಾಮ್‌ ಬ್ರ್ಯಾಂಡ್‌ ಜೊತೆಗಿನ ನಂಟು

ಇನ್ನು ಭಾರತದ ಪ್ರಸಿದ್ದ ಕುರುಕಲು ತಿಂಡಿ ಹಾಗೂ ಲಘು ಉಪಾಹಾರಗಳ ಕಂಪೆನಿಯಾಗಿ, ವಿಶ್ವ ಮಟ್ಟದಲ್ಲೂ ಖ್ಯಾತಿ ಪಡೆದುಕೊಂಡಿರುವ ಹಲ್ದಿರಾಮ್‌ ಬ್ರಾಂಡ್‌ ಬಗ್ಗೆ ಗೊತ್ತಿರದವರು ಯಾರೂ ಇರಲಿಕ್ಕಿಲ್ಲ. ಭಾರತದ ವಿವಿಧ ರೀತಿಯ ಸಾಂಪ್ರದಾಯಿಕ ರೀತಿಯಲ್ಲಿ ಸೇವಿಸಲ್ಪಡುವ ತಿಂಡಿಗಳನ್ನು ಮಾರಾಟ ಮಾಡುವ ಮೂಲಕ ಹಲ್ದಿರಾಮ್‌ ಬ್ರ್ಯಾಂಡ್‌ ಪ್ರಸಿದ್ದಿ ಪಡೆದುಕೊಂಡಿದೆ. ಇನ್ನು ಬಿಕಾಜಿ ಫುಡ್ಸ್‌ ಇಂಟರ್‌ನ್ಯಾಷನಲ್‌ ಕಂಪೆನಿಯ ದೀಪಕ್ ಅವರ ಮುತ್ತಜ್ಜ, ಗಂಗಾಬಿಶನ್ ಅಗರ್ವಾಲ್ ಅವರು ಭಾರತೀಯ ತಿಂಡಿಗಳ ಪ್ರಸಿದ್ಧ ಹಲ್ದಿರಾಮ್ ಬ್ರಾಂಡ್ ಅನ್ನು ಸ್ಥಾಪಿಸಿದ್ದರು. ದೀಪಕ್ ಬಿಕಾಜಿ ಫುಡ್ಸ್‌ನ ನಿರ್ದೇಶಕಿ ಶ್ವೇತಾ ಅಗರ್ವಾಲ್ ಅವರನ್ನು ವಿವಾಹವಾದರು. ಶ್ವೇತಾ ಅವರು ನವೆಂಬರ್ 2006 ರಿಂದ ಬಿಕಾಜಿ ಫುಡ್ಸ್‌ ಇಂಟರ್‌ನ್ಯಾಷನಲ್‌ ಕಂಪನಿಯ ನಿರ್ದೇಶಕರಾಗಿದ್ದಾರೆ. ಇನ್ನು ಬಿಕಾಜಿಯನ್ನು ನವೆಂಬರ್ 2022 ರಲ್ಲಿ ಅದರ IPO ಬೆಲೆಗೆ 8 ಪ್ರತಿಶತ ಪ್ರೀಮಿಯಂನಲ್ಲಿ ಪಟ್ಟಿ ಮಾಡಲಾಗಿದ್ದು, ಇದರ ಷೇರಿನ ಬೆಲೆ ಸದ್ಯ 854.80 ರೂ. ಮೌಲ್ಯವನ್ನು ಹೊಂದಿದೆ.

ಅಮಿತಾಬ್‌ ಬಚ್ಚನ್‌

ಇನ್ನು ಬಿಕಾಜಿ ಫುಡ್ಸ್‌ ಇಂಟರ್‌ನ್ಯಾಷನಲ್‌ ಕಂಪೆನಿಯು ಬಾಲಿವುಡ್‌ ಬಾದ್‌ ಷಾ ಅಮಿತಾಬ್‌ ಬಚ್ಚನ್‌ ಅವರನ್ನು ತನ್ನ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ನೇಮಿಸಿಕೊಂಡಿದೆ. ಈ ಮೂಲಕ ವಿಶ್ವಮಟ್ಟದಲ್ಲೂ ತನ್ನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಲು ಬಯಸಿದೆ. ಒಟ್ಟಿನಲ್ಲಿ ಬಿಕಾಜಿ ಫುಡ್ಸ್‌ ಹಾಗೂ ಹಲ್ದಿರಾಮ್‌ ಕಂಪೆನಿಗಳು ವಿದೇಶದಲ್ಲೂ ಭಾರತದ ಸಾಂಪ್ರದಾಯಿಕ ತಿಂಡಿಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+